
“ಟಿಕ್ ಟಿಕ್ ಟಿಕ್ ಟಿಕ್ ಎನ್ನುತಲೇನನು ಒರೆಯುತಲಿಹೆ ಓ ಗಡಿಯಾರ?” “ನಿನ್ನಾ ಯುಷ್ಯದಿ ಸಮೆಯುತ್ತಿಹ ಚಣ- ಗಳನಿಂತೆಣಿಪನು ನಾನು ನರ!” *****...
ಬಾಟಲಿಯೊಳಗಿನ ಸಾರಾಯಿಯನ್ನು ಒಡಲೊಳಗೆ ತುಂಬಿಕೊಳ್ಳುತ್ತಾನೆ ಕುಡುಕ ಅದು ಮದ್ಯಪಾನ ಗಗನದ ತುಂಬೆಲ್ಲಾ ಸೂರ್ಯ ಚೆಲ್ಲಿದ ಕೆಂಪುರಸವನ್ನು ಅಕ್ಷರದಲ್ಲಿ ತುಂಬಿಕೊಳ್ಳುತ್ತಾನೆ ಕವಿ ಅದು ಮಧುಪಾನ *****...
ದೇವನಿಲ್ಲಿಗೆ ಬರುವ ಮುನ್ನವೆ ದೇವದೂತರು ಬರುವರು ಎನ್ನುವೈತಿಹ್ಯವನು ನಿಜವೆನಿಸೆನಿತುದಾತ್ತಧ್ಯೇಯರು ಬಾನವರಿಗಿಳೆ ಸುಪಥವಾಗಲು ಮುನ್ನ ಜನ್ಮವ ಪಡೆಯುತ ನಡೆದರೈ ಪರದರ್ಪದುರ್ಗಮವಾದ ನಮ್ಮೀ ನಾಡೊಳು. ರಾಮಮೋಹನ ರಾಮಕೃಷ್ಣರು ಯತಿ ವಿವೇಕಾನಂದರು ಮೆಹತ ...
೧ ನನ್ನಯೀ ನಾಡಿನಲ್ಲೊಪ್ಪನ್ನು ಹಾಕಿದಂತಹ ಒಪ್ಪೆ ಇಂದು ಒಪ್ಪು! ನನ್ನಿಯಲಿ ನಾಡನ್ನು ನೆನೆಸಿದಂತಹ ನನಸೆ ಬಿಗಿತಾಗಿ ಬಂದು ಅಪ್ಪು! ೨ ತಾಯಿಯೊಡಲಿನ ಕಡಲಿನಲ್ಲಿದ್ದ ಸವಿಸವಿದು ಸವಿಯು ನೀನಾಗಿ ಬಂದು ಸಾಯಲಿಕ್ಕಾದ ಜಗದಲ್ಲೆಲ್ಲ ಸವಿ ಸುರವಿ ಸೀ ಮಾಡಿ ...
ಆಪವೆನಿಪುದು ನೀರು ಅದರಿಂಳಿಳಮಾನವಕೋಟಿ ಜನಿಸಿತು | ಆಪಸಾಗರನಾಯ್ತು ನಾರಾಯಣ ಗಧಿಷ್ಠಾನಾ || ಆದಿಯೋಳಂಡದೊಳು ಗರ್ಭಿತಮಾಗಿ ಹರಿ ತಾಸಮಾಧಿಯೊಳಗಿರೆ ಆದಿಲಕುಮಿಯು ಪ್ರಕೃತಿದೇವಿಯು ಪತಿಯ ಬಳಿಸಾರೆ || ೧ || ಆಗಲಾಗೆ ಸಮಾಧಿ ಭಂಗವು ಅಂಡಶೀಳಿತು ಅದರೊಳಿ...
೧ ನಿಶೀಥ ಕಾಮಿನಿ ಮೆಲ್ಲನೈತರೆ,- ಸುಶೀತಲಾಮಲ ವಾಯು ಮೋಹಿಸೆ,- ಅಶೇಷ ಜನ ಮನದಲ್ಲಿಯೊಲವಿನ ಅಸೀಮ ಲಹರಿಯನುಂಟು ಮಾಡುತ,- ತಾರಕಾ ಗಣವು ನಭದಲಿ ತೋರಿ ಮಿರುಗಿದುವು! ೨ ಸುನೀಲ ಶೂನ್ಯದ ನಭೋ ವಿತಾನದಿ ಮನೋಹರಾಕೃತಿಯಿಂದ ಮೆರೆಯುವ ಅನ೦ತ- ಅಗಣಿತ ತಾರಕಾ ...
ಮುಗಿಲ ನೀಲಿಯ, ಮುನ್ನೀರ ಹಸಿರ, ಮರುನೆಲದ ಸುವರ್ಣ ವರ್ಣವನು,- ಒಂದೆಡೆಗೆ ನೋಡುವಾಸೆಯಿರಲು,- ನಡೆ ಸುಯೇಜಿಗೆ! ಉಸುಬಿನುದಧಿಯ ದಾಂಟಲು ನಿರ್ಮಿಸಿದ ನೀರ ಸೇತುವಿಗೆ! ಮುನ್ನೀರ ಕಾಲುವೆಯ ದಾಂಟಿಲ್ಲಿ ನಡೆಯುವಾಗ ಈ ಹಡಗವಹುದು–ಅರಣ್ಯದ ಹಡಗ! ಕಚ...













