ಭಾವ ತುಂಬಿತು ಕಣ್ಣು ತುಂಬಿತು ಬಾಳು ಬೆಳಗಿತು ಈ ಜೀವನ ಸಾರ್ಥಕವಾಯಿತು ಗೋವಿಂದನ ದರುಶನವಾಯಿತು ಮೋಹಕ್ಷಯವಾಗಿ ಮೋಕ್ಷವಾಯಿತು ಕುಕರ್ಮವೆಲ್ಲ ಪರೋಕ್ಷವಾಯಿತು ಇಹ ಸುಖ ಹಂಬಲವು ಕ್ಷಣದಲಿ ಮನದಿಂದ ದೂರವಾಯಿತು ವಿಶಾಲ ಆಕಾಶದಲಿ ಮನ ಕಂಗಿತು ಮನದ ಮೂಲೆ ...

ಓ ನನ್ನ ನಲ್ಲೆ ನಿನ್ನ ನೆನಪು ನನ್ನಲ್ಲೆ ಕಳೆದುಹೋಗಿದೆ ನನ್ನ ಮನಸ್ಸು ನಿನ್ನಲ್ಲೆ ಓ ಪ್ರಿಯೆ,ನೀ ಎದುರಿಗೆ ಬಂದರೆ ಏರುತಿದೆ ಹೃದಯದ ಬಡಿತ ಅರಿವಾಗದೆ ನಿನಗೆ ಓ ಚೆಲುವೆ ಈ ನನ್ನ ಮನಸ್ಸಿನ ತುಡಿತ ನಿನ್ನ ಕಣ್ಣಿನ ಹೊಳಪು ಚಂದ್ರನ ಕಾಂತಿಗಿಂತಲೂ ಎಷ್ಟ...

ನಮ್ಮ ಮೈಯುರಿತಕ್ಕೆ ಪೂರ್ವಜರ ಹಳಿಯುವುದೆ? ಸತ್ತವರನೆಬ್ಬಿಸಿ ಒದೆಯುವುದೆ ಅವರ ಅಳಿದುಳಿದ ಮೂಳೆಗೆ? ಸಾಧ್ಯವಿದ್ದರೆ ಅವರು ತಡವುತಿದ್ದರು ನಮ್ಮ ಉತ್ಥಾನ ಪಾದಗಳ ದೇವರ ಕೊಂದು ಕೈತೊಳೆದು ಇನ್ನೂ ಆಗಿಲ್ಲ ಇನ್ನೂರು ವರ್ಷ ಆಗಲೇ ಇನ್ನಷ್ಟು ಹತ್ಯೆಗಳ ತವ...

ಭವದ ಗರಳವ ಗುಡಿಯ ಶಿತಿಕಂಠದೊಳು ಶಮಿಸಿ ನವಜಾತಚಿತ್ತದೊಳು ಜೀವ ರಮಿಸೆ ತೊಳೆದ ಮುಕ್ತಾಫಲದ ಕಾಂತಿವೆತ್ತಾತ್ಮವಿದು ಹೊರಗಲೆವ ನಲವಿನುಸಿರಾಡಿ ಜ್ವಲಿಸೆ ಹೊಗುಹೊಗುತ ಹೊರಬರುವ ಮಾನುಷ್ಯ ವಾಹಿನಿಯ ಕಲ್ಲೋಲಲೀಲೆಯೊಳು ದಿಟ್ಟಿ ಸಲಿಸಿ ಶಂಖಜಾಗಟೆದನಿಯ ಕೈವ...

ಇನ್ನೆಷ್ಟು ದಿನ ಬಿತ್ತುತ್ತಾರೆ ಅವರು ಪಾಕಿಸ್ತಾನದಲಿ ಭಾರತ ವಿರೋಧಿ ಬೀಜಗಳನ್ನು ಇನ್ನೆಷ್ಟು ದಿನ ಬಿತ್ತುತ್ತಾರೆ ಇವರು ಭಾರತದಲ್ಲಿ ಪಾಕಿಸ್ತಾನ ವಿರೋಧಿ ಬೀಜಗಳನ್ನು ಅಲ್ಲಿ ಬಾಂಬ್ ಸ್ಫೋಟಿಸಿದ್ದಕ್ಕೆ ಇವರು ಇಲ್ಲಿ ಅಭಿನಂದಿಸುತ್ತಾರೆ. ಇಲ್ಲಿ ಬಾ...

ಮರೆಯದಿರಣ್ಣ ಕನ್ನಡವ; ಜನ್ಮ ಕೊಟ್ಟ ಈ ಕನ್ನಡವ ಮಾತು ಕೊಟ್ಟ ನುಡಿಗನ್ನಡವ ತುತ್ತು ಕೊಟ್ಟ ತಾಯ್ಗನ್ನಡವ || ಹಳಿಯದಿರಣ್ಣ ಕನ್ನಡವ; ತಾಯ್ಮೊಲೆ ಉಣಿಸಿದ ಕನ್ನಡವ ವಿದ್ಯೆಯ ನೀಡಿದ ಕನ್ನಡವ ಸಭ್ಯತೆ ಕಲಿಸಿದ ಕನ್ನಡವ ಅಳಿಸದಿರಣ್ಣ ಕನ್ನಡವ; ಶತಶತಮಾನದ ...

ಮೂಲ: ಸ್ಯಾಫೋ (ಗ್ರೀಕ್ ಕವಯಿತ್ರಿ, ಕ್ರಿ.ಪೂ. ೬-೭ನೆಯ ಶತಮಾನ) ದೇವಿ ಆಪ್ರೋದಿತೆಯೆ ಸಕಲ ವೈಭವದ ಸಿಂಹಾಸನವ ಏರಿರುವ ರೂಪವಿಖ್ಯಾತಯೆ! ಎಲ್ಲರಿಗು ಮಿಗಿಲು ಸಾವಿಗೂ ದಿಗಿಲು ಎನ್ನಿಸುವ ಸ್ಯೂದೇವ ಪಡೆದಂಥ ಮಗುವೆ ಅಂಗಲಾಚುವೆ ದೇವಿ ಬಳಿಸಾರಿ ಅಡಿಯ ದು...

ಕಿನ್ನರ ಕಿಂಪುರುಷರ ನೌಕೆಗಳಂತೆ ತೇಲುತಿಹುದು ಬುರುಗಿನ ಬೆಳ್ಳಿ ಶರಧಿಯ ಮೇಲೆ,- ನೂರೊಂದು ಕಡೆಗೆ ತೇಲುತಿಹುದು ನೋಡಾ! ಬೆಣ್ಣೆ ಕಡಿದ ಮಜ್ಜಿಗೆಯಂತೆ ಹುಟ್ಟು ಕಡಿದ ನೀರು ಅಟ್ಟಿಸುತಿಹುದು ನೋಡಾ! ತಪತಪನೆ ಕಾಯ್ದು ಕೋಟಿ ಸೂರ್ಯರಂತೆ ಕಣ್ಣು ಕುಕ್ಕಿ ...

ವೀರಭದ್ರನೆ ಏಳು ವೀರ ರುದ್ರವ ಹೇಳು ಬಾಳೆಹೊನ್ನೂರಿನಲಿ ಕೂಗಿ ಹಾಡು ಜ್ಞಾನ ಖಡ್ಗವ ಬೀಸು ಶಿವನ ಢಮರುಗ ಢಮಿಸು ಕಡಲ ಅಲೆಗಳ ರುದ್ರ ನಾಟ್ಯವಾಡು ನೋಡು ದುಷ್ಟರ ಕೂಟ ರುಂಡಮುಂಡರ ಕಾಟ ತಾರಕನ ದ೦ಡುಗಳ ಹಿಂಡು ಮೆಟ್ಟು ಸತ್ಯವಂತರ ಉಳಿಸು ಹಗಲುಗಳ್ಳರ ಅಳಿ...

1...2930313233...898

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...