ನಗೂ ಎಂದರೆ ನಕ್ಕುಬಿಡೋದು ಅಳೂ ಎಂದರೆ ಅತ್ತುಬಿಡೋದು ಒರೆಸಿಕೊ ಎಂದರೆ ಒರೆಸಿಕೊಳ್ಳೋದು ಇದೇ ನನ್ನ ಗೊಂಬೆ ನನ್ನ ಚಲು ಗೊಂಬೆ ನಡೀ ಎಂದರೆ ನಡೆಯೋದು ಓಡೆಂದರೆ ಓಡೋದು ಕೂರು ಎಂದರೆ ಕೂರೋದು ಇದೇ ನನ್ನ ಗೊಂಬೆ ನನ್ನ ಚೆಲು ಗೊಂಬೆ ಧ್ಯಾನಿಯೆಂದರೆ ಧ್ಯಾ...

ಗುಳಿಗೆ ಬಿದ್ದಾರುತಿಹ ಭೂತದಂತೊರಲುತಿದೆ ನಿಡುಸುಯ್ಯುತೀ ಕಡಲು ತನ್ನ ಬಂಧಿಸುವರೆಯ ದಡವನಲೆಪಂಜದಿಂ ಪರಚಿ-ಮೇಲೇರಿ ಬರ- ಲೆಳಸಿ ನಿಮಿನಿಮಿರಿ ಬಿದ್ದೆದ್ದುರುಳಿ ಕೊನೆಗೆ ಈ ಕರೆಗೆಯೇ ಕೈಚಾಚುತಿದೆ ನೆರವ ಕೋರುತ್ತ. ದಿಟ ಮಹದ್ವ್ಯಕ್ತಿ ಈ ನೀರನಿಧಿ; ಚಿ...

ಪತ್ರಿಕೆಗಳು ಸುದ್ದಿ ಮಾಡಿದವು ಟಿ.ವಿ.ಛಾನಲ್ಲುಗಳು ಎಡೆಬಿಡದೆ ಬಿತ್ತರಿಸಿದವು ಬೆಂಗಳೂರು ನಗರವೇ ಬೆಚ್ಚಿ ಬೀಳಿಸುವ ಸುದ್ದಿ ರಾತ್ರಿ ಕತ್ತಲೆಯಲಿ ನಡದೇ ಹೋಯ್ತು ಸಾಫ್ಟ್‌ವೇರ್ ಇಂಜೀನಿಯರಳ ಕೊಲೆ ಬರ್‍ಬರ ಅತ್ಯಾಚಾರ, ಹುಟ್ಟಿಸಿದೆ ಮೆಟ್ರೋ ಮಹಿಳೆಯರ...

ಬಲ್ಲುದೆ ಲತೆ ಫಲಂ ತನ್ನ ಸಿಹಿಯೊ ಕಹಿಯೊ ಎಂಬುದನ್ನ? ಒಗೆದಂತೊದಗಿಸಲು ಬನ್ನ ಮೇನೊ? ಬಳ್ಳಿಯಾ ೪ ಹಲವೊ ಕೆಲವೊ ಸವಿದು ಹಣ್ಣ, ಸಿಹಿಯಾದಡೆ ಕೊಳುವುದುಣ್ಣ ಕಹಿಯಾದಡೆ ಕಳೆವುದಣ್ಣ ಲತೆಯ ತಳ್ಳಿಯಾ ೮ ಪ್ರಕೃತಿವಶಮೆ ಫಲಿಸ ಬಲ್ಲ ಲತೆಗೆ ರುಚಿಯ ಗೊಡವೆ ಸಲ...

ದೂರದೊಂದು ಹಾಡಿನಿಂದ ಮೂಡಿಬಂದ ಕನ್ನಡ; ನನ್ನ ಮುದ್ದು ಕನ್ನಡ ಕಾಣದೊಂದು ಶಕ್ತಿಯಿಂದ ಉಸಿರಿಗಿಳಿದ ಕನ್ನಡ; ನನ್ನ ಪ್ರಾಣ ಕನ್ನಡ ನೀಲಿ ಕಡಲ ಅಲೆಗಳಿಗೆ ದನಿಯ ಕೊಟ್ಟ ಕನ್ನಡ; ಸಪ್ತಸ್ವರ ಕನ್ನಡ ತೇಲಾಡುವ ಮೋಡಗಳಿಗೆ ಮುತ್ತನಿಟ್ಟ ಕನ್ನಡ; ಸಹ್ಯಾದ್ರಿ...

ವರುಷ ವರುಷಕ್ಕೊಮ್ಮೆ ಹುಟ್ಟು ಹಾಕುವರು ನಿನ್ನ ಮೆಟ್ಟಿ ನಿಲ್ಲುವರು ಕನ್ನಡ ಕನ್ನಡವೆಂದು ಎಲೈ ತಾಯೆ ಇಂಥ ಜೀವಿಗಳಿಗೆ ನೀಡು ಚೈತನ್ಯ ನಿನ್ನ ಗುಣಗಾನ ಮಾಡುವರು ಇವರೇ ಊರ ಮನೆಯವರು ಇವರ ಭಂಡತನದ ಬದುಕಿಗೆ ನೀಡು ಚೈತನ್ಯ ಅಂದು ನಿನ್ನ ರಕ್ಷಣೆಗಾಗಿ ಪ್...

ಸಾಯುತ್ತಿರುವ ಒಂದು ಪಶುವಿಗೆ ಆಸೆ ಭಯ ಯಾವುದೂ ಇಲ್ಲ; ಕೊನೆಯ ಕಾಯುತ್ತಿರುವ ಮಾನವನಿಗೇ ಆಸೆ ಭಯಗಳ ಕಾಟವೆಲ್ಲ; ಸಾಯುವನು ಎಷ್ಟೋಸಲ – ಸತ್ತು, ಹುಟ್ಟಿಬರುವನು ಮತ್ತು ಮತ್ತೂ ದೊಡ್ಡ ಜೀವದ ಥರವೆ ಬೇರೆ ಕೊಲೆಪಾತಕರ ಎದುರಿಸುತ್ತ ಎಗ್ಗಿಲ್ಲದೇ ...

ಭೂಗರ್‍ಭಶಾಸ್ತ್ರಜ್ಞನೆತ್ತಿ ಹಿಡಿದನು ಕೊಳದ ತಳಕಿರುವ ಶಿಲೆಯೊಂದ ಬಂಡೆಗಲ್ಲದು ಸವೆದು ಹರಳಾದುದೆನ್ನುವನು, ಮತ್ತದರ ಮೇಲುಳಿದ ಮರದ ಕಿರಿಯಾಕೃತಿಯದಿಂತು ಮುದಿಮರ ತವಿದು ಕೊಳದ ನೀರಿನ ಕೆಳಗೆ ಬಿದ್ದಿರಲರೆಯ ಕೂಡಿ ಕಾಲೋದಧಿಯ ಹೊನಲ ತೆರೆತೆರೆಗೆ ತಲೆಬ...

ನಾನೆ ಗೋಪಿಕೆ ಬಾರೊ ಗೋಪನೆ ನೋಡು ಚಂದನ ಜಾರಿವೆ ಗುಡ್ಡ ಬೆಟ್ಟದ ಗಾನ ಹಕ್ಕಿಯ ಕಂಠ ಕೊರಗಿ ಸೊರಗಿದೆ ಮಳೆಯ ನೀರಿಗೆ ಹಸಿರು ಹಸಿದಿದೆ ಹನಿಯ ರೂಪದಿ ಚುಂಬಿಸು ಮಂದ ಗಾಳಿಯು ಸೋತು ನಿಂದಿದೆ ಗಂಧ ರೂಪದಿ ನಂಬಿಸು ನೋಡು ಕಡಲಿನ ಕನ್ಯೆ ಬಂದಳು ಗೆಜ್ಜೆ ಜಾ...

ಬೇವಾರ್‍ಸಿ! ನನ್ ಪುಟ್ನಂಜೀನ ರೂಪಾನ್ ಆಡ್ತಿನಿ ಬಾಪ್ಪ! ನಂಗ್ ಆಗಾಗ್ಗೆ ಆಡೀಸ್ತೈತೆ ನನ್ ಪುಟ್ನಂಜೀ ರೂಪ! ೧ ಆಲ್ನಲ್ ಕಮಲದ್ ಊ ತೇಲ್ಬುಟ್ಟಿ ಮೇಲ್ ಒಂದ್ ತೆಳ್ನೆ ಲೇಪ ಚಿನ್ನದ್ ನೀರ್‍ನಲ್ ಕೊಟ್ಟಂಗೈತೆ ನನ್ ಪುಟ್ನಂಜೀ ರೂಪ! ೨ ಅಮಾಸೇಲಿ ಅತ್ತೀಸ್...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...