Home / ಮುಗಿಲು

Browsing Tag: ಮುಗಿಲು

೧ ಏನಿದೇನಿದು ಬಾನಧುನಿಯಲಿ ಘೋರಗರ್ಜನೆ ಗೆಯ್ವುದು ಪೊನಲ ನೆಗಸವು ನೆಗೆದು ಬಂದಿರೆ ಘೂರ್ಣಿಸುವ ಸೌಂರಂಭಮೊ ವನಧಿ ಮೇರೆಯ ಘನರವಂಗಳ ಮಿಕ್ಕಿ ಮೀರುವ ಮೊಳಗಿದೊ ೨ ಕಾಲಪುರುಷನ ಕಡಕಡಾಟದ ಸಂಚರಿಪ ಸಂಚಾಲಮೊ ಇಳೆಯನೆಲ್ಲವ ಬಳಸಿಯುಲಿಯುವ ವಿಲಯ ಕಾಲದ ಕಹಳೆಯ...

            ೧ ತನಸು ತಿರೆಯ ತೀಡಿಬರಲು ಬನಪನಾಂತು ಮೂಡಿ ಬರುವ ಮನಕೆ ಮಾಟಮಾಡಿ ಕಾ೦ಬ ಅಣಬೆ ಚೆಲುವ ಕಳೆಯಕೀರಿ ಹೊಳೆಯುತಿರುವುದು ತಳಿರಜೊಂಪನಳಿವಸೊ೦ಪ ತಿಳಿಸುತ್ತಿರುವುದು ೨ ಬಾನಮೇಲೆ ತೇಲಿಕಾಂಬ ಬಾನಗೊಡೆಯ ಕೋಲ ಕಾಣೆ ಕ್ಷೋಣಿಗದುವೆ ಮಾಣದೆಂದು ಕ೦...

೧ ಕೆಲಸ ಬೊಗಸೆ ಮುಗಿಸಿ ನಾನು ಬಯಲ ಬೆಳಕ ಬಯಸಿ ನಾನು ದೇವರೊಲುಮೆಗೆಳಸಿ ನಾನು ದಿನವು ದಿನವು ಬೆಳಗಿನಲ್ಲಿ ಮನೆಯ ಬಿಡುವೆನು ಕುಣಿವ ಕುಲಮನಗಳಿಂದ ತಣಿಯುತಿರುವೆನು ೨ ಮಾನ ಧನದ ಪ್ರಾಣಿಯೊಂದು ಸೇನೆ ಸೇರಿ ಸರಗಿ ಒಂದು ಶಿರದ ಮೇಲೆ ಸೆಣಸಿ ನಿಂದು ಕಿರಿ...

೧ ಡೆಹರಾಡೂನಿನ ತಪ್ಪಲ ಸೀಮೆಯ ನೇರುತ ಮುಂದಕೆ ತಳೆಯುತಿರೆ ದರಿಕಂದರಗಳ ಬನಸಿರಿ ಸುರಿಮಳೆ ಬೆಳೆಸಿನ ಹೊಲಗಳ ಕಾಣುತಿರೆ ೨ ಕನಸಿಗೆ ಕಾಣಿಸಿ ಕವನವ ಕಲಿಸುವ ಮನಸಿನ ಮೈಸಿರಿ ಮುಂಚುತಿರೆ ತನುವನು ಚಣಚಣ ತೊರೆಯುತ ಮನವೇ ಹಿಮಗಿರಿ ಸೀಮೆ ಮುಸುಕುತಿದೆ ೩ ಕಾ...

೧ ನನ್ನ ನಾಡ ಚೆನ್ನ ನಾಡ ಬನ್ನ ಬಡುತ ಪೊರೆಯುವ ನನ್ನಿಯಿಂದ ತಾಯಿನಾಡ ಹೊನ್ನ ಸಿರಿಯ ಬೆಳಗುವ ೨ ನಾಡ ಬವರ ಬವಣೆಯಲ್ಲಿ ಜೀವವನ್ನು ನೀಡುವ ಹೇಡಿತನವ ಹೊಡೆದು ಹಾಕಿ ರೂಢಿಯಲ್ಲಿ ಮರೆಯುವ ೩ ನಾಡನುಡಿಯ ನಾಡನಡೆಯ ನಾಡಿನಲ್ಲಿ ನಡಿಸುವ ಕಾಡುತಿರುವ ಕಾಡು ಜ...

೧ ಬಾ ಮಗಳ ಬಾ ಮಗಳೆ ಬಾ ಮಗಳೆ ಮನೆಗೆ ಹಾರೈಸಿ ಕುಳಿತಿಹೆನು ಬೇಗ ಬಾರಮ್ಮ ಘನವಾದ ಮನೆತನದ ಮನೆಯಲ್ಲಿ ಬಂದೆ ಮನೆಯವರ ಮನ್ನಣೆಗೆ ಮನೆಯಾಗಿ ನಿಂದೆ ಬಾ ಮಗಳೆ ಬಾ ಮಗಳೆ ಬಾ ಮಗಳೆ ಮನೆಗೆ ಹಾರೈಸಿ ಕುಳಿತಿಹೆನು ಬೇಗ ಬಾರಮ್ಮ ೨ ಬಾಲ್ಯದಲಿ ಲಾಲನೆಯ ಪಾಲನೆಯ...

೧ ಮುಳ್ಳಗಳ್ಳಿ ಬಳಿಯೆ ನೀನು ಕಳ್ಳಿಕರಿಯ ಹುಳದ ಕೊಲೆಗೆ ಅಳಲಿ ಬಳಲಿ ಬಾಯಬಿಟ್ಟು ನೊಂದು ಬೆಂದು ಬೂದಿಯಾಗಿ ಕಾಣುತಿರುವೆಯ ಚಂದದಿಂಪು ಸಂದಿತೆಂದು ಸವೆಯುತಿರುವೆಯ ೨ ಕೋಟಗೀಟೆಯಂತೆ ಬೇಲಿ ಕೂಟಕೆಲ್ಲ ನಿನ್ನ ನಡಿಸೆ ಮಾಟವಾಗಿ ಮೆರೆದು ನಿಂದು ಸೊಬಗಿನಿಂ...

೧ ತಾರಿನ ತಂತಿಯ ಮೇಲೆಯ ನಲಿಯುತ ತಾನವ ನೀಡುತ “ಕುಕೂಕು” ನಾದವನೆಬ್ಬಿಸಿ ಬೂದಿಯ ಬೆಳವನು ಮೇದಿನಿ ಮೈಸಿರಿ ಮೆರಿಸುತಿದೆ ೨ ಬದುವಿನ ಬೇವೊಳು “ಕುವೋಽ” ಎನ್ನುತ ರಾಗದ ಕೋಗಿಲೆ ಕೂಗುತಿದೆ ಇನಿದನಿಯೆರಡನು ಮನದಿಂದಾಲಿಸೆ ಹರಣವು ಹರುಷದೆ ...

೧ ಬಾರೆಲೆ ಕೋಗಿಲೆಯುಲಿಯುತ ಬನದೊಳು ತಾರೆಲೆ ಮೋದವ ಮೇದಿನಿಗೆ ಹಾಡೆಲೆ ಬಹುವಿಧ ರಾಗದೆ ನರರನು ತೇಲಿಸಿ ಕುಣಿಸೆಲೆ ಲೀಲೆಮಿಗೆ ೨ ಕುಡಿಗೊನರೆಲ್ಲವು ಗಿಡಗಳ ಮಡಲೊಳು ಬಿಡದಲೆ ಕಾಣುವೆ ಕೋಗಿಲೆಯೆ ತಡವನು ಮಾಡದೆ ಒಡನೆಯೆ ನಯನುಡಿ ಬೆಡಗನು ಬಿಡಿಸಲೆ ಬಿಂಕ...

೧ ಇರುಳಲಿ ಅಗ್ನಿಯ ರಥದಲಿ ಬರುತಿರೆ ಘೋರಾರಣ್ಯದ ಮಧ್ಯದಲಿ ಅರಬೈಲೆನ್ನುವ ಗುರುತರ ವನಗಿರಿ ದರೆಯಲಿ ರಥವದು ಸಾಗದಿರೆ ೨ ಕೊರಗುತ ರೇಗುತ ಮರುಗುತ ಪೊರಮಡೆ ಬನಸಿರಿ ಬಗನಿಯ ಬನಗಳನು ಕಾಣುತ ಸನಿಹದೆ ಕುಣಿಯುವ ಮನದಿಂ ಮಾಣದೆ ಮನದಣಿಯಿಂ ನೋಡೆ ೩ ಗೊನೆಗಳ ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...