
ನೆಲದ ನೆರಳಿನ ರೊಟ್ಟಿ ಆಕಾಶದಗಲದ ದೈತ್ಯ ಹಸಿವಿನ ಅವಶ್ಯಕತೆಯಂತೆಲ್ಲಾ ಬದಲಾಗುವುದಿಲ್ಲ ಬದಲಾಗಬೇಕಿಲ್ಲ. ರೊಟ್ಟಿ ರೊಟ್ಟಿಯೇ ಹಸಿವು ಹಸಿವೇ. ನೆಲಕ್ಕದರದೇ ಶಕ್ತಿ ಆಕಾಶಕ್ಕದರದೇ ಮಿತಿ....
ಕತ್ತಲ ಕಡಲಲಿ ಸಾಗುತ್ತಲೆ ಇವೆ ಬೆಳಕಿನ ದೋಣಿಯ ಸಾಲುಗಳು, ನಟ್ಟಿರುಳಲ್ಲಿ ಫಳ ಫಳ ಮಿಂಚಿವೆ ನಕ್ಷತ್ರದ ಮಣಿಮಾಲೆಗಳು. ಹಸಿರಿನ ಅಗಾಧ ಹಸರದ ಮೇಲೆ ಖುಷಿಯಲಿ ಆಡಿವೆ ಹೂವುಗಳು, ಕತ್ತಲ ಕೊನೆಯ ಸಾರುತ ಹಕ್ಕಿಯ ಹಾಡನು ತುಳುಕಿವೆ ಗೂಡುಗಳು. ಬೆಳಕಾಗದ ಗೂ...
ರೊಟ್ಟಿ ಅರಗಿಸುವ ಪ್ರತಿಕ್ಷಣ ಹಸಿವು ಕಲಿಸುತ್ತಲೇ ಇರುತ್ತದೆ ನಿರ್ದಯತೆಯ ಪಾಠ ರೊಟ್ಟಿಗೆ ಅಕಾರಣ ಮೋಹದ ಭ್ರಮೆ....
ಕನಸು ನನಸುಗಳೆಲ್ಲ ಯಾರಿಗೋ ಮುಡಿಪಾಗಿ ಹಾಡುಗಳಲೆಲ್ಲೆಲ್ಲು ಯಾರದೋ ಛಾಯೆಯೇ ಮೂಡಿರಲು, ಇದು ಯಾರು? ಎನುತ ಕಾತರರಾಗಿ ಗೆಳೆಯರೆಲ್ಲರು ನನ್ನ ಕಾಡುತಿರೆ, ನಿನ್ನನೇ ಬಣ್ಣಿಸಲು ಹೊರಟಿಹೆನು; ನಿನ್ನ ನೆನವಿನಲೆನ್ನ ಮನದ ಮಾತುಗಳೆಲ್ಲ ರಂಗಾಗಿ ಹಾರುತಿದೆ!...
ಹಳೆಬಾಳಿಗೆ ಹೊಸ ಅರ್ಥವ ತಾ ಸಂಕ್ರಾಂತಿಯ ಸೂರ್ಯ, ಹೊಸ ಬೆಳಕಲಿ ತೊಳೆ ಈ ಜಗವ ಮೊಳಗಿಸು ನವತೂರ್ಯ. ಕಾಲದ ಬೆಂಕಿಯ ಹಾಯ್ದುಳಿದ ಅಪರಂಜಿಯನುಳಿಸು, ಚಿತ್ತದ ಕತ್ತಲೆಗಳ ಅಳಿಸಿ ಭಾವಶುದ್ಧಿ ಹರಸು. ಅಂತರ್ಮುಖಿ ಆಗಲಿ ಈ ಬಾಳು ತನ್ನ ನಿಜಕೆ ಒಲಿದು, ಹತ್ತಲ...
ರೊಟ್ಟಿ ರೊಟ್ಟಿಯಲ್ಲಿಲ್ಲ ಹಸಿವಿನಲ್ಲಿ ಸುಮ್ಮನೆ ಪಾಪ ಪ್ರಜ್ಞೆ ಪಾಪದ ರೊಟ್ಟಿಗೆ. ತಪ್ಪು ರೊಟ್ಟಿಯದೂ ಅಲ್ಲ ಹಸಿವಿನದೂ ಅಲ್ಲ ಚಾಣಾಕ್ಷ ರುಚಿಯದು....













