
ಹಸಿವಿನ ಅನಾರ್ಯ ಆದೇಶ ಒಂದು ದಾಸಾನುದಾಸ ಗುಲಾಮನದ್ದು. ರೊಟ್ಟಿಯ ತಹತಹಿಕೆ ಅಕ್ಕರೆ ಉಣಿಸುವ ಆರ್ದ್ರ ಮನದ್ದು. ಸಿಂಹಾಸನಾರೂಢ ದೊರೆಗೆ ಮಣ್ಣಿನಾಳದ ಪಿಸುಮಾತುಗಳು ಎಂದಿಗೂ ಅರ್ಥವಾಗಿಲ್ಲ. *****...
ಅಸಲಿ ಕಣ್ಣೀರುಗಳು ಕತ್ತಲೆಯಲ್ಲಿಯೇ ಕರಗಿ ಹೋಗುವಾಗ…. ಮೃದು ಭಾವನೆಗಳು ಮುರುಟುವಾಗ…. ನಕಲಿ ಕಣ್ಣೀರುಗಳದೇನು? ಬಳ ಬಳನೇ ಸುರಿಯುತ್ತಿವೆ ನೂರಾರು ಬಲ್ಬು ಬೆಳಕಿನ ಸಿನೇಮಗಳಲ್ಲಿ. *****...
ಉರಿಬಿಸಿಲಲ್ಲಿ ಗಾಣದ ಸುತ್ತ ಜೀಕುತ್ತಿದೆ ಮುದಿ ಎತ್ತು; ಬತ್ತಿದ ಕಣ್ಣು ಕತ್ತಿನ ಹುಣ್ಣು ನೊಣ ಮುಸುರುತ್ತಿವೆ ಸುತ್ತೂ: ಬಳಲಿದೆ ಕಾಲು ಎಳೆದಿವೆ ಭಾರ ಬೆನ್ನಿಗೆ ಬೆತ್ತದ ಪಾಠ, ಎದುರಿಗೆ ಮಠದಲಿ ಬಸವ ರಥೋತ್ಸವ ಸಿಹಿಸಿಹಿ ಭಕ್ಷ್ಯದ ಊಟ! * * * ಬಸ್...
ಹಸಿವಿನೆದುರು ದಂಗೆಯೇಳುತ್ತಲೇ ಇರುತ್ತದೆ ರೊಟ್ಟಿ. ಅದಕ್ಕೆ ಸುಮಧುರ ಹಾಡು ಕಲಿಸಲಾಗದೇ ಪ್ರತಿಸಲ ಸೋಲುತ್ತದೆ. ಶಾರೀರವಿರದ ಅಶರೀರ ಹಸಿವನ್ನು ಸುಮ್ಮನೆ ಕ್ಷಮಿಸುತ್ತದೆ. *****...
ಚಂದ್ರಿ, ನನಗ ಗೊತ್ತಿಲೇನು ನಿನ್ನ ಅದ್ಹೆಂಗೆ ವರ್ಣಿಸ್ತಾರ ಅಂತ ದಾಳಿಂಬ ಹಲ್ಲು, ಸಂಪಿಗೆ ಮೂಗು ಮೀನಿನ ಕಣ್ಣು, ಬಿಲ್ಲು ಹುಬ್ಬ ಹಾವಿನ ಹೆಡೆ, ಸೂಚಿಪರ್ಣಿ ಎದೆ, ಇನ್ನೂ ಏನೇನೋ ಏನೇನೋ…. ಅದರ ಖರೇನ – ದಾಳಿಂಬ, ಸಂಪಿಗೆ, ಮೀನು ಬಿಲ್...
ರೀ ಅನಂತಮೂರ್ತಿ ನೀವು ಅದೆಷ್ಟು ಸ್ವಾರ್ಥಿ! ಯಾರಿಗೂ ಬಿಡದೆ ಒಬ್ಬರೇ ದೋಚಿಕೊಳ್ಳುವುದೇ ಎಲ್ಲಾ ಕೀರ್ತಿ ? ಏನೆಲ್ಲ ಕಾಡಿದುವಪ್ಟ ನಿಮ್ಮನ್ನ ! ಹೆಣ್ಣು, ಹೆಸರು, ಹಾಗೇ ಮಣ್ಣಿನ ಮಕ್ಕಳ ಮೂಕ ನಿಟ್ಟುಸಿರು; ಗಾಂಧೀ, ಲೋಹಿಯಾ, ಹಾಗೇ ಧಗಧಗಿಸುವ ಸೃಷ್ಟಿ...
ಪರಿಧಿ ವಿಸ್ತರಿಸಿದಂತೆಲ್ಲಾ ಹಸಿವೆಗೆ ಇಷ್ಟವಿಲ್ಲದಿದ್ದರೂ ಅದರ ಕರಾಳ ಮುಖಗಳು ರೊಟ್ಟಿಗೆ ತನ್ನಂತೆ ತಾನೇ ತೆರೆದುಕೊಳ್ಳುತ್ತಾ ಹೋಗುತ್ತದೆ. ನಾಚಬೇಕಿದ್ದ ಹಸಿವು ಆರ್ಭಟಿಸುತ್ತದೆ. ದನಿ ಕಳೆದುಕೊಂಡ ಅಸಹಾಯಕ ರೊಟ್ಟಿ ಬಾಯಿ ಮುಚ್ಚುತ್ತದೆ. *****...













