Home / William Shakespeare

Browsing Tag: William Shakespeare

ತೋರುವುದು ಕನ್ನಡಿ ಈ ಚೆಲುವು ಕರಗುವುದ, ಗಡಿಯಾರ ಕೈಮುಳ್ಳು ಗಳಿಗೆಗಳು ಜರುಗುವುದ; ಈ ಖಾಲಿ ಪುಟಗಳಲಿ ಬರೆ ಮನದೊಳಿರುವುದ, ರುಚಿನೋಡಿ ಬಳಸು ಈ ಪುಸ್ತಕದ ಒಳತಿರುಳ. ಕನ್ನಡಿಯು ಬಿಂಬಿಸುವ ಮುಖದ ಮುರಿನೆರಿಗೆಗಳು ಕೆಳಕುಸಿದ ಗೋರಿಗಳ ನೆನಪನ್ನು ಕೆದು...

ಯಾಕೆನ್ನ ಕಾವ್ಯ ಹೊಸ ಮಿಂಚಿರದೆ ಬರಡಾಯ್ತು ? ಯಾಕಾಯ್ತು ದೂರ ವೈವಿಧ್ಯ ನಾವೀನ್ಯಕ್ಕೆ ? ಹೊಸ ಕಾಲಗತಿಗೆ ಧೋರಣೆಗೆ ಶ್ರುತಿಗೊಡದಾಯ್ತು, ಹೊಸ ಶೈಲಿ ತಂತ್ರ ಗಮನಿಸಲಿಲ್ಲ ಯಾತಕ್ಕೆ ? ಇಂದಿಗೂ ಹಿಂದಿನಂತೊಂದೆ ಥರ ಹಾಡುವುದು. ಹೊಸ ಕಾಣ್ಕೆಗೂ ಹಳೆಯ ಮಾ...

ಬಾಳಿಗಾಹಾರ ಹೇಗೋ ಹಾಗೆ ನೀ ನನಗೆ, ಬೇಸಿಗೆಯ ನೆಲಕೆ ಮಳೆಧಾರೆ ಸುರಿದಂತೆ; ನನ್ನ ಈ ತುಯ್ತಗಳು ಎಲ್ಲವೂ ನಿನಗಾಗೇ ಜಿಪುಣನಿಗು ಅವನ ನಿಧಿಗೂ ನಡುವೆ ಇರುವಂತೆ. ನಿನ್ನ ಬಗೆಗಿನ ಹೆಮ್ಮೆ ಒಮ್ಮೆ, ಮರುಗಳಿಗೆಯೇ ಕಾಲ ನಿನ್ನೀ ಚೆಲುವ ಕದಿವನೆನ್ನುವ ಶಂಕೆ;...

ಶಾಂತವಾಗಿರು; ಕ್ರೂರ ಕಾಲ ನನ್ನನ್ನು ಸೆರೆ- ಹಿಡಿದು ಜಾಮೀನಿರದೆ ಕೊಂಡೊಯ್ಯುತಿರುವಾಗ. ಈ ಬರೆಹ ತಾಗಿಕೊಂಡಿದೆ ನನ್ನ ಬಾಳಿಗೆ, ಇರಲಿ ಇದು ನಿನ್ನ ಬಳಿ, ನಿನಗಿತ್ತ ಸ್ಮಾರಕ. ಇವನು ನೋಡುತ್ತಿರಲು ಮೊಳೆಯುವುದು ತಾನಾಗಿ ನಿನಗಾಗಿ ಹರಸಿಟ್ಟ ಮುಡಿಪು ಇ...

ಎರಡೆ ದಿನ ಹಿಂದೆ ಇನಿವಕ್ಕಿ ಚಿಲಿಪಿಲಿ ದನಿಯ ಗಾನವೇದಿಕೆಯೆನಿಸಿ, ಝಗಝಗಿಸಿ, ಈಗ ಬರಿ ಹಣ್ಣೆಲೆಯೆ ತುಂಬಿರುವ, ಇಲ್ಲ ಒಂದೆರಡಿರುವ, ಅಥವ ಚಳಿಕೊರೆತಕ್ಕೆ ಬೆದರಿ ಎಲ್ಲಾ ಉದುರಿ ಭಣಗುಡುವ ಒಣಕೊಂಬೆ ಕಾಂಡಗಳ ಹೇಮಂತ ನನ್ನ ಮೈಯಲ್ಲಿ ನೆಲೆ ಹೂಡುವುದ ನೋ...

ನಾನಳಿದ ಮೇಲೆಯೂ ನನ್ನ ಪ್ರೀತಿಸಲಿಕ್ಕೆ ಅಂಥ ಘನವಾದುದೇನಿತ್ತು ನನ್ನಲ್ಲೆಂದು ಜಗ್ಗಿ ಕೇಳದೆ ಲೋಕ ನಿನ್ನನ್ನು ಮುಂದಕ್ಕೆ? ಅದಕೆಂದೆ ನನ್ನನ್ನು ಮರೆತುಬಿಡು ನೀ ಎಂದು ಕೇಳುತ್ತಿರುವೆ; ಅಂಥ ಗುಣವೊಂದ ನನ್ನಲ್ಲಿ ಸುಳ್ಳು ಹೇಳದೆ ಹೇಗೆ ತಾನೆ ತೋರಿಸಬಲ...

ಸತ್ತಾಗ ನಾನು ಜಗಕೆಚ್ಚರವ ಸಾರುವುದು ಗಂಟೆಯ ವಿಷಣ್ಣ ದನಿ : “ಕೀಳುಲೋಕವಿದನ್ನು ಬಿಟ್ಟು ಓಡಿದ ತುಚ್ಛ ಕ್ರಿಮಿಜೊತೆ ಇರಲು” ಎಂದು; ದುಃಖಪಡಬೇಕಿಲ್ಲ ನೀನು ಈ ಸಾಲನ್ನು ನೋಡಿದರು ಸಹ; ಇವನು ಬರೆದಿಟ್ಟ ಕೈಯನ್ನು ನೆನೆಯಬೇಕಿಲ್ಲ ; ನೆನ...

ನಿನ್ನ ಹಳಿದರೆ ಲೋಕ ಅದು ನಿನ್ನ ತಪ್ಪಲ್ಲ, ಉತ್ತಮರು ನಿಂದೆಮಾತಿಗೆ ಸದಾ ಸಿಕ್ಕವರೆ; ಸೌಂದರ್‍ಯದಾಭರಣ ಸಂಶಯಕೆ ಹೊರತಲ್ಲ ನಿರ್‍ಮಲಾಕಾಶದಲೂ ಕಾಗೆ ಹಾರುವುದೇ. ನೀನು ಯೋಗ್ಯನೆ, ನಿನ್ನ ಕುರಿತ ಆರೋಪಗಳು ನಿನ್ನ ಮೇಲ್ಮೆಯನೆ ಹೇಳುವುವು, ಕೇಡೂ ಬಿಡದೆ ...

ತಿದ್ದಬೇಕಾದ ಕೊರತೆಯೆ ಇಲ್ಲ, ಈ ಮಾತೆ ಶತ್ರುಗಳು ಕೂಡ ಮೆಚ್ಚುವ ಸತ್ಯವಾಗಿರುತ ಜನದ ಮನದಿಂದೆದ್ದ ನುಡಿಯೊಳೂ ಮೂಡಿದೆ. ನಿನ್ನ ಹೊರ ಚೆಲುವು ಮೆಚ್ಚಿಗೆ ಮಕುಟ ಗಳಿಸಿದೆ, ಮೆಚ್ಚಿ ನುಡಿಯುವ ನಾಲಿಗೆಗಳೆ ಕಣ್ಣಿಗೆ ಸಿಗುವ ನೋಟದಾಚೆಗು ಸಾಗಿ ಮತ್ತೇನೊ ಗ...

ಇದನ್ನೆಲ್ಲ ಕಂಡು ಸಾಯುವುದೆ ಮೇಲೆನಿಸುವುದು ! ದಟ್ಟ ದಾರಿದ್ರ್ಯದಲಿ ಪ್ರತಿಭೆ ಕಣ್ತೆರೆಯುವುದು, ಹುಟ್ಬುಮುಟ್ಠಾಳ ಏಳಿಗೆ ಪಡೆದು ಮೆರೆಯುವುದು, ಪರಿಶುದ್ಧ ನಿಷ್ಠೆ ವಂಚನೆಗೆ ಬಲಿಹೋಗುವುದು, ಮಾನಕ್ಕೆ ಮರ್‍ಯಾದೆ ಕೊಡದ ನಿರ್ಲಜ್ಜನಡೆ, ಮುಗ್ಧ ಶೀಲಕ...

1...45678...11

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...