ಆನೆ ಪೊಡಮಟ್ಟಿತು

ಕೊಳದೊಳಗಣ ಚಂದ್ರನನು ಆನೆ ಮೆಟ್ಟಿತು ನರಕದ ಬಾಗಿಲನು ತಾನೆ ತಟ್ಟಿತು ಬ ಒಳಗೆ, ನನ್ನೊಳಗೆ ಎಂದಿತು ಕೊಳದ ಕೆಸರು ನೇವರಿಸಿತು, ಆವರಿಸಿತು ಅಡಗಿತು ಆನೆಯ ಉಸಿರು ಆನೆ ಘೀಳಿಟ್ಟಿತು ದಶದಿಕ್ಕಿಗೂ ಮೊರೆಯಿಟ್ಟಿತು ಕರುಣೆಯಿಂದಲೇ ಇದಿರುಗೊಂಡವು...

ಮತ್ತೆ ಹುಟ್ಟುವುದಾದರೆ…

ಮತ್ತೆ ಹುಟ್ಟವುದಾದರೆ ಈ ನೆಲವೇ ಇರಲಿ ಹುಟ್ಟಿದ ಮೇಲೆನ್ನ ನುಡಿಯು ಕನ್ನಡವೇ ಆಗಿರಲಿ ತುಂಗೆಯಲಿ ನಾನಿರಲು ಗಂಗೆಯೂ ಬರಲಿ ಕೃಷ್ಣ-ಗೋದಾವರಿ ಗೆಳತಿಯರು ಸಿಗಲಿ ಹಿಮಾಲಯವು ಮುಡಿಯಲ್ಲಿ ಸಹ್ಯಾದ್ರಿಯು ಅಡಿಯಲ್ಲಿ ಅಲ್ಲಲ್ಲಿಯೇ ಇರಲಿ ಕಲ್ಕತ್ತೆಯ ಕಾಳಿ...

ನಿನ್ನೊಂದಿಗೆ ಮಾತನಾಡಲಾರೆ…

ನಿನ್ನೊಂದಿಗೆ ಮಾತನಾಡಲಾರೆ... ಮುತ್ತು, ಸರ, ನತ್ತು, ವಾಲೆ, ಝುಮುಕಿಯೊಡನೆ ಮಾತಾಡುವೆ ಸೌದೆ, ಇದ್ದಿಲು, ಬೆಂಕಿ, ನೀರು, ಕೊಡ, ರಾಟೆಯೊಡನೆ ಮಾತಾಡುವೆ ಬೇಯಿಸಿದ ಹಿಟ್ಟು-ರೊಟ್ಟಿ ದೋಸೆ-ಪಲ್ಯದ ಜೊತೆ ಮಾತಾಡುವೆ ನಿನ್ನೊಂದಿಗೆ ಮಾತನಾಡಲಾರೆ ಜಾಜಿ ಮಲ್ಲಿಗೆ, ಸಂಪಿಗೆ,...

ಮುಂದೆ ಸಾಗುವ ಮುನ್ನ

ಮುಂದೆ ಸಾಗುವ ಮುನ್ನ ಹಿಂದೆ ನೋಡಬಾರದೆ ಒಮ್ಮೆ ನದಿಯಲ್ಲವೇ ನಾನು ತುದಿಯಲ್ಲಿರುವೆ ನೀನು ನಿಲ್ಲು ನಿಲ್ಲು ನೀ ನನ್ನ ಮಗಳೆ... ಹಿಟ್ಟು-ರೊಟ್ಟಿಯ ಸುಡುತ ಹರಕೆ-ಮುಡಿಪುಗಳನಿಡುತ ತಿಳಿದ ಹಾಡುಗಳ ಹಾಡಿ ನೂರು ದೇವರ ಕಾಡಿ ನಿನ್ನ...

ಚಿತೆಗೇರಲಿಲ್ಲ ಹೂವುಗಳು

ಗಾಳಿ ತಂದಿತು ದೀಪವಾರಿದ ಸುದ್ದಿ ಒಂದು ಚಣ ಮೌನ ನೋಡು ಎಂದಿತು ಹೃದಯ ಬೇಡವೆಂದಿತು ಮನಸು ನಿಮ್ಮ ಚಿತೆಗೇರಿಸಬೇಕೆಂದು ಕೊಂಡಿದ್ದ ಎರಡು ನಸು ಹಳದಿ ಗುಲಾಬಿ ಮೊಗ್ಗುಗಳು ಇನ್ನೂ ಹಾಗೆಯೇ ಇವೆ ನಳನಳಿಸುತ್ತಿವೆ ಹೂದಾನಿಯಲ್ಲಿ...

ಬಾಗು

ಬಾಗಿದೆ ಕೊಳದೊಳಗೆ- ಕಮಲಗಳು ಚಂದ್ರ, ನಕ್ಷತ್ರ ಗಣಗಳು ತುತ್ತ ತುದಿಯೇರಿ ಬೆಟ್ಟ ಬಾಗಿದೆ- ಮನೆಗಳು, ಮರಗಳು ಮಕ್ಕಳ ಆಟಿಕೆಯ ಹಾಗೆ ಅಪರೂಪದ ಕಲಾವಿದ ಬಿಡಿಸಿದ ಚಿತ್ರದ ಹಾಗೆ ಹೆಮ್ಮರಗಳಡಿ ಬಾಗಿದೆ ಪ್ರೇಮ ಪುಷ್ಪಗಳು ಪಕ್ವವಾದ...

ದೊಡ್ಡ ಮರ

ಆ ದೇವರೇ ವರವಿತ್ತಂತೆ ಆ ಊರಿಗೆ ಅದೇ ದೊಡ್ಡ ಮರ ನಾಲ್ಕು ಹೆಗಲುಗಳು, ನೂರು ಕೈಗಳು ಸಾವಿರ ಸಾವಿರ ಬೆರಳುಗಳು ಸೂರ್ಯ ಚಂದ್ರ ನಕ್ಷತ್ರ ಗಣಗಳು ಬಿಡುಗಣ್ಣಾಗಿ ನೋಡುವಷ್ಟು ಅಷ್ಟು ದೊಡ್ಡ ಮರ ಬೆಳಕು-ಮಳೆ-ಮಣ್ಣಿನ...

ನಾದಿನಿ ಬಂದು ಹೋದಳು

ಬಿಸಿಲು ಕಂಡಿತು ಹಾಸಿಗೆ ಹಳೆಯ ದಿಂಬಿಗೆ ಹೊಸಾ ಹೊದಿಕೆ ಅತ್ತೆ ಮಾವನ ಪುಟಗಳು ಲಕಲಕ ಹೊಳೆದು ಹೂವ ಮುಡಿದವು ದೇವರಿಗೆ ದೀಪ ಹೊಸಿಲಿಗೆ ಕುಂಕುಮ ಬಾಗಿಲಿಗೆ ನೀರು ಚಿತ್ರಾನ್ನ, ಕೋಸಂಬರಿ ವಡೆ, ಪಾಯಸದಲಿ ಕಲ್ಲು...

ಬೆಕ್ಕು ಅಡ್ಡ ಹೋಯಿತು

ಗಕ್ಕೆಂದು ನಿಂತೆ ಒಂದು ಚಣ ಶುರುವಾಯಿತು ಅನುಮಾನ ಅವತ್ತು ಇಡೀ ದಿನ ಬೆಕ್ಕಿನದೇ ಧ್ಯಾನ ಮೀನು ಮಾರುವವಳಿಗೆ ಮಾಯೆ ಕವಿದಿರಲು ಒಣ ಮೀನಿಗೂ ಜೀವ ಬಂದಿರಲು ಘಮ ಘಮಿಸಿ ಅದು ಲೋಕವನೆ ಸೆಳೆದಿರಲು ಪರಿಮಳದ...

ದುಃಖ

ದುಃಖ ಸಮುದ್ರವು ಯೋಜನಗಳಾಚೆ ಕೇಳುವುದರ ಮೊರೆತ ಸಂತೋಷದ ದೊಡ್ಡ ಹಡಗುಗಳನ್ನು ಅದು ಮುಳುಗಿಸುವುದು ನೆಮ್ಮದಿಯ ಹುಟ್ಟಡಗಿಸುವುದು ನಿಷ್ಪಾಪಿ ಹುಲ್ಲು ಕಡ್ಡಿ ಮಾತ್ರವೇ ನಿರಾಂತಕವಾಗಿ ತೇಲಿ ದಡ ಸೇರುವುದು. *****