ಕೊಳದೊಳಗಣ
ಚಂದ್ರನನು ಆನೆ ಮೆಟ್ಟಿತು
ನರಕದ ಬಾಗಿಲನು
ತಾನೆ ತಟ್ಟಿತು
ಬ ಒಳಗೆ, ನನ್ನೊಳಗೆ
ಎಂದಿತು ಕೊಳದ ಕೆಸರು
ನೇವರಿಸಿತು, ಆವರಿಸಿತು
ಅಡಗಿತು ಆನೆಯ ಉಸಿರು
ಆನೆ ಘೀಳಿಟ್ಟಿತು
ದಶದಿಕ್ಕಿಗೂ ಮೊರೆಯಿಟ್ಟಿತು
ಕರುಣೆಯಿಂದಲೇ ಇದಿರುಗೊಂಡವು
ಕೇಡಿಗನನು ಕಮಲಗಳು
ಶ್ರೀ ಹರಿಯ ನೆನೆದು
ಹೂವಿನಂದದಿ ಹಣೆ ಹಣೆದು
ಕರಿರಾಜನ ಮುಟ್ಟಿದವು
ಹೂವಿನ ಹಗ್ಗವನೇ ಹಿಡಿದು
ತಾನೇ ದಡ ಮುಟ್ಟಿತು
ಆನ ಪೊಡಮುಟ್ಟಿತು.
*****