ಅಗೊ, ಬೇಲಿಹಾರಿ ಓಡಿತು ಕೋಳಿ ಹೊರಗೆ, ಮನೆ

ಅಗೊ, ಬೇಲಿಹಾರಿ ಓಡಿತು ಕೋಳಿ ಹೊರಗೆ, ಮನೆ- ಜೋಪಾನದಲಿ ನುರಿತ ಗೃಹಿಣಿ ಕಂಕುಳ ಮಗುವ ಅಲ್ಲೆ ಕೆಳಗಿಳಿಸಿ ಬೆನ್ನೆಟ್ಟಿದಳು ಸರಸರನೆ ಜಿಗಿದು ಓಡುವ ಕೋಳಿಯನ್ನು ‘ಹೋ’ ಎನುತಳುವ ಮಗು ತಾಯ ಹಿಂದೆ. ದೂರದಲೋಡಿ ಬರುತಿದೆ...

ನಿಜ ಹೇಳಲೇ ಕೇಳು ನನ್ನ ಈ ಕಣ್ಣುಗಳು

ನಿಜ ಹೇಳಲೇ ಕೇಳು ನನ್ನ ಈ ಕಣ್ಣುಗಳು ನಿನ್ನನೊಲಿದಿಲ್ಲ, ಏಕೆಂದರಾಕಣ್ಣುಗಳು ಒಂದು ಸಾವಿರ ತಪ್ಪ ನಿನ್ನಲ್ಲಿ ಕಾಣುವುವು; ಆದರವು ಒದ್ದುದನು ಈ ಹೃದಯ ಒಲಿಯುವುದು, ಕಂಡು ಕಂಡೂ ನಿನ್ನ ಬಯಸುವುದು ಮರುಳಿನಲಿ, ನನ್ನ ಕಿವಿಗಳಿಗೆ...

ಏ ಕ್ರೂರಿ ಹೆಣ್ಣೆ ತುಸು ಕಿವಿಗೊಡು ವಿವೇಕಕ್ಕೆ

ಏ ಕ್ರೂರಿ ಹೆಣ್ಣೆ ತುಸು ಕಿವಿಗೊಡು ವಿವೇಕಕ್ಕೆ, ತುಟಿ ಬಿಗಿಹಿಡಿದ ನನ್ನ ತಾಳ್ಮೆಯ ತಿರಸ್ಕರಿಸಿ ಸಿಡಿಸದಿರು, ಇಲ್ಲವೇ ವ್ಯಥೆ ನನ್ನ ನಾಲಿಗೆಗೆ ನುಡಿಯ ಕೊಡುವುದು; ಅವೋ ನಿನ್ನ ಕರುಣೆಯ ಬಯಸಿ ನಾ ಪಡುವ ಯಾತನೆಯನೆಲ್ಲ...

ನಿಷ್ಕರುಣಿ ನೀ ಮಾಡಿದನ್ಯಾಯ ಏನನ್ನೂ

ನಿಷ್ಕರುಣಿ ನೀ ಮಾಡಿದನ್ಯಾಯ ಏನನ್ನೂ ವಿವರಿಸಲು ಕೇಳದಿರು, ಕಣ್ಣಿಂದ ಇರಿಯದಿರು; ಬಳಸು ಕಟುಮಾತನ್ನು, ನೇರ ಶಕ್ತಿಗಳನ್ನು; ಬೇಡ ನಯವಂಚನೆ, ಮರೆಮಾಚಿ ಕೊಲ್ಲದಿರು, ಬೇರೆ ಕಡೆ ಕೊಟ್ಟೆ ಎದೆಯನ್ನು ಎಂದು ಮುಖಕ್ಕೇ ಬಾಯ್ಬಿಟ್ಟು ಹೇಳು. ಅದು...

ತನ್ನ ನಡೆನುಡಿ ಪರಮಸತ್ಯ ಎಂದೇ ನಲ್ಲೆ

ತನ್ನ ನಡೆನುಡಿ ಪರಮಸತ್ಯ ಎಂದೇ ನಲ್ಲೆ ಆಣೆಯಿಡುವಳು, ಸುಳ್ಳು ! ಆದರೂ ನಂಬುವೆನು ; ಲೋಕ ಬೇಡುವ ಸುಳ್ಳು ಸೂಕ್ಷ್ಮ ಅರಿಯದ ಬೆಳ್ಳ, ಕಲಿಯದವ ಎಂದು ತಿಳಿಯಲಿ ಎಂದು ನಟಿಸುವೆನು. ಪ್ರಾಯ ಆರಿರುವೆ, ಅವಳದನು...

ಅವನು ನಿನ್ನವನೆ ಒಪ್ಪಿದೆ, ಆಯ್ತೆ? ನನ್ನನ್ನು

ಅವನು ನಿನ್ನವನೆ ಒಪ್ಪಿದೆ, ಆಯ್ತೆ? ನನ್ನನ್ನು ಅಡವು ಇಟ್ಟಿದ್ದೇನೆ ನಿನ್ನ ಸುಭಗೇಚ್ಛೆಗೆ. ಮುಟ್ಬುಗೋಲಾಗಿಸಿಕೊ ನನ್ನ, ಅವನನ್ನು ಬಿಡಿಸಿಕೊಳ್ಳಲು ಬಿಡು ನನ್ನೊಂದು ನೆಮ್ಮದಿಗೆ. ನೀನೊಲ್ಲೆ ಇದಕೆ, ನಾ ಬಲ್ಲೆ, ಅವನಿಗು ತಾನೆ ಎಲ್ಲಿ ಬಿಡುಗಡೆ? ನೀನು...

ನನ್ನೊಡನೆ ಗೆಳೆಯನನೂ ಹಿಂಡಿ ನನ್ನೆದೆಯನ್ನ

ನನ್ನೊಡನೆ ಗೆಳೆಯನನೂ ಹಿಂಡಿ ನನ್ನೆದೆಯನ್ನ, ನರಳಿಸುತ್ತಿರುವ ಆ ಹೃದಯಕ್ಕೆ ಧಿಕ್ಕಾರ, ಕೊಟ್ಟುದಲ್ಲದೆ ನನಗೆ ಚಿತ್ರಹಿಂಸೆಯ, ನನ್ನ ಮಿತ್ರನನೂ ದಾಸ್ಯಕೂಪಕ್ಕೆಳೆದ ಹುನ್ನಾರ. ಕ್ರೂರಿ ಉರಿಗಣ್ಣಿಂದ ಸೆಳೆದುದಲ್ಲದೆ ನನ್ನ ಇನ್ನೊಂದು ಆತ್ಮವನೂ ಬಲವಾಗಿ ಮುತ್ತಿರುವೆ; ಕಳಕೊಂಡು ಅವನನ್ನ...

ಎಷ್ಟೊ ಜನ ತಮ್ಮ ಚೆಲುವಿನ ಹಮ್ಮಿನಲಿ ಸೊಕ್ಕಿ

ಎಷ್ಟೊ ಜನ ತಮ್ಮ ಚೆಲುವಿನ ಹಮ್ಮಿನಲಿ ಸೊಕ್ಕಿ ಕ್ರೂರರಾಗುವರು, ನೀನೂ ಕೂಡ ಅಂತೆಯೇ ; ನನ್ನ ಹೃದಯವೊ ನಿನ್ನ ಹುಚ್ಚುಸುಳಿಯಲಿ ಸಿಕ್ಕಿ ನೀ ಬಲ್ಲೆ ಅಪ್ಸರೆ ಬರಿ ನಿನ್ನ ಚಿಂತೆಯೇ. ಮಣಿಸಿ ಕುಣಿಸುವ ಮಾಯೆ...

ನನ್ನವಳ ಕಣ್ಣು ರವಿಯಂತೆ ಖಂಡಿತ ಇಲ್ಲ

ನನ್ನವಳ ಕಣ್ಣು ರವಿಯಂತೆ ಖಂಡಿತ ಇಲ್ಲ. ಅವಳ ತುಟಿ ಕೂಡ ಹವಳದ ಹಾಗೆ ಕೆಂಪಲ್ಲ ; ಮೊಲೆ ಬಣ್ಣ ತುಸು ಕಂದು, ಹಿಮದಂಥ ಬಿಳುಪಲ್ಲ, ಕೂದಲೋ ತಂತಿ ಥರ, ತಲೆಯೊ ಕರಿ ತಂತಿ ಹೊಲ....

ಲಜ್ಜೆಗೇಡಲ್ಲಿ ಬರಿದೆ ಸತ್ವವನು ತೇಯುವುದು

ಲಜ್ಜೆಗೇಡಲ್ಲಿ ಬರಿದೆ ಸತ್ವವನು ತೇಯುವುದು ರತಿಗೀಳು; ಅತಿಕೀಳು ಕ್ರಿಯೆಗೆ ಹಾಯುವವರೆಗೆ, ಘಾತಕ ಮೃಗೀಯ ವಂಚಕ ಹೇಯ ಎನಿಸುವುದು, ಸುಖಿಸಿ ಮುಗಿಯಿತೊ ‘ಇಸ್ಸಿ’ ಎನಿಸುವುದು ಅದೆ ಗಳಿಗೆ ; ಹುಚ್ಚಿನಲಿ ಬೆನ್ನಟ್ಟಿ ಓಡಿ ಹಾರಿದ ಹೊತ್ತೆ...