Home / Kannada

Browsing Tag: Kannada

  ಅದು ಈಗಲೂ ಸರಾಗವಾಗಿ ಚಲಿಸುತ್ತದೆ ಜಲ್ಲಿ ಕಲ್ಲುಗಳ ಉಬ್ಬುತಗ್ಗಿನ ರಸ್ತೆಗಳ ಮೇಲೆ. ಅವನು ಓಡಾಡಿಸಿದ ಜಾಡನ್ನು ಹಿಡಿಯುವಾಗ ಅದು ದುಃಖಿಸುವುದನ್ನು ನೀವು ನೋಡಬೇಕು; ಒಂದು ಗಳಿಗೆ ನೀವೂ ನಕ್ಕು ಅಳದೆ ಇರಲಾರಿರಿ. ಕಣ್ಣಿಲ್ಲದ ಹೆಳವನೊಬ್ಬ ಮು...

ಐಸುರ ಬಲು ಹಾನಿಯೇನಲೋ ||ಪ|| ಐಸುರ ಎಂಬುದು ಪಾಶದ ಜ್ಞಾನಿ ಪಾಪದ ಖೇಲೋಜಿ ಪಾಪದ ಬೋಲೋಜಿ ಪಾಪದ ರಸಪಯೋಪಾನಿ ||೧|| ಕರ್ಬಲ ದಾರಿಗೆ ಹೋಗುತ ಪಾನಿ ನಿರ್ಜಲ ಖೇಲೋಜಿ ನಿರ್ಜಲ ಬೋಲೋಜಿ ನಿರ್ಜಲ ನಿರಂಜನ ತೀನಿ ||೨|| ವಸುಧಿಗೆ ಶಹಾ ನೀ ಶಿಶುನಾಳ ಸ್ಥಾನಿ...

ಆಕೆಯ ಪ್ರಶ್ನೆಯಿಂದ ತುಂಬಾ ಆಶ್ಚರ್ಯ ಹಾಗೂ ಕಳವಳಗೊಂಡ ನಿಖಿಲ್ ಇಲ್ಲ. ನಾನು ಯಾರನ್ನೂ ಪ್ರೀತಿ ಮಾಡ್ಲಿಲ್ಲ. ನೀನು ಯಾರನ್ನಾದರು ಪ್ರೀತಿ ಮಾಡಿದ್ದೀಯ? ಪ್ರತಿಯಾಗಿ ಕೇಳಿದ. “ಹೌದು. ಪ್ರೀತಿ ಮಾಡಿದ್ದೆ”. ಆಕೆಯ ಮಾತು ಕೇಳಿ ನಿಖಿಲ್‌ಗ...

– ಶಿಶುನಾಳ ಶರೀಫ್ ಜುಬಾನಸೇ ಬೋಲ ನಾ ಕಲ್ಮಾ ಮುಬಾರಕೆ ಧೀನಕೆ ತಶ್ಮಾ || ಪ || ಜಬ್ ಇಸ್ಲಾಮಕೆ ಕಾಮಾ ಯಾದಕರ ದೇಖ ನಜರ್ ತಶ್ಮಾ || ಆ.ಪ. || ಬಿಸರಗಹೆ ದೀ ನಹಿ ಮಾನಾ ಅಗರಕೋಹಿ ನೈ ಮುಸಲ್ಮಾನಿ ಮುಸಲ್ಮಿನ್ ಹೋಕೆ ಹೆಂವ್ ಫಿರತೆ ವಲಿಕೋಹಿ ಯಾರ...

ಇಂದು ಅಘನಾಶಿನಿಯ ಬಗೆಗೆ ಮಾತಾಡುವೆ ನನ್ನೊಲವಿನ ಅಘನಾಶಿನಿ ಆ ಊರು ನದಿ ಮತ್ತು ದಡ ಇಲ್ಲಿ ನಾನು ಅವತರಿಸಿದೆ ನಿನ್ನ ಪ್ರೀತಿಯ ಅಘನಾಶಿನಿಗೆ ಅದರ ಅಪಾರ ಜಲರಾಶಿಗೆ ನನಗೆ ಸ್ಪಷ್ಟ ಕೇಳಿಸುವ ಆ ಜೀವದ ಮೂಲ ಚೈತನ್ಯದ ನಾಡಿ ಮಿಡಿತಕ್ಕೆ ಇಲ್ಲಿ ಅಂಬಿಗರು ...

  ಗುಡ್ಡದ ಮೇಲೆ ಹಿಮ ಮಳೆಯಂತೆ ಸುರಿಯುತ್ತಿದ್ದರೆ, ಆ ಕೋಣೆಯಲ್ಲಿ ದನದ ಮಾಂಸ, ರೆಡ್‌ವೈನ್ ಬ್ಯಾರೆಲ್‌ಗಟ್ಟಲೆ ತಯಾರಾಗುತ್ತಿತ್ತು. ಪ್ರೇಮಿಗಳಾಗಬಯಸುವ ಅದೆಷ್ಟೋ ಜೋಡಿಗಳು ಶ್ವೇತವರ್ಣದ ಮರದ ಹಿಂದೆ ಅವಿತುಕೊಂಡು, ಕೆಂಪು ಪರದೆಯೊಳಕ್ಕೆ ನುಗ್...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...