Home / Tirumalesh KV

Browsing Tag: Tirumalesh KV

ಅಷ್ಟಗಲ ಬಾಯಿ ತೆರೆದು ಗುಂಡಿಯಿಲ್ಲದ ನನ್ನ ಪ್ಯಾಂಟ್ಸಿನ ಹಾಗೇ ನಗಬೇಡ ನನೆದುರು ಕುಳಿತು ಮರೆತು ಹೋದ್ದಲ್ಲ ಜನಕ್ಕೆ ಅಗೌರವ ತೋರಿಸುತೇನೆ ಎಂದಲ್ಲ ಮುಖ್ಯ ಇದಕ್ಕೆ ಬಟನ್ಸೆ ಇಲ್ಲ. ನೀ ನಗುತೀಯ! ಹುಟ್ಟಿಬಂದಾಗ ಮಾತು ಕೊಟ್ಟದ್ದುಂಟೆ ಪ್ಯಾಂಟ್ಸು ಹಾಕು...

ಹೆಂಡದಂಗಡಿಯಂತೆ ಕತ್ತಲು ಕೋಣೆ ನಮ್ಮ ಮನೆ ದೇವರ ಕೋಣೆ ದಿನಕೆರಡು ಬಾರಿ ಅವನ ಸ್ನಾನ ಊಟ ಉಪಚಾರ ಧೂಮಪಾನ ಈಸಾಯಿ ಧಪನದಂತೆ ಧೂಪಾನದ ಹೊಗೆ ಹಿತ್ತಾಳೆ ತಟ್ಟೆಯಲಿ ಕೆಂಪು ದಾಸವಾಳದ ಹೂವು ಆಗತಾನೇ ಕೊರೆದಿಟ್ಟ ಮಾಂಸದ ಹಾಗೆ! ಮೌನ! ತಲೆ ಕೆಳಗೆ ಕಾಲು ಮೇಲ...

ಹ್ಯಾಮ್ಲೆಟ್ಟು ನಾನಾಗಿ ಕ್ವಿಕ್ಸೋಟನಾಗಿ ಬಣ್ಣಬಣ್ಣದ ಉದ್ದ ಟೊಪ್ಪಿಗೆ ಧರಿಸಿ ಆಡಿದ್ದು ಮೂರು ಬೀದಿಗಳ ಮಧ್ಯೆ ನಿಂತು ಸಾಕ್ರೆಟಿಸ್ ಮರೆತದ್ದು ನಾನು ಸಾರುವೆನೆಂದು ಬೊಗಳಿದ್ದು ಈ ಮನೀಷೆ ಈ ಒಳತೋಟಿ ಅನುಭವಿಸಿ ಅನುಭವಿಸಿ ಸೋತು ಸುಸ್ತಾಗಿ ಯಶೋಧರೆಯ ...

ಕೆಲವು ಸ್ಥಳಗಳ ಹೆಸರುಗಳಿಗೆ ಹಸಿಹುಲ್ಲಿನ ವಾಸನೆ ಮತ್ತು ಈಗ ತಾನೆ ಮಳೆನಿಂತ ಮಣ್ಣಿನ ತೇವಗಳಿರುತ್ತವೆ. ಅಪರಾಹ್ನದ ಇಳಿಬಿಸಿಲಲ್ಲಿ ಮನೆಮುಂದಿನ ಪಾರದರ್ಶಕ ತೋಡಿನಲ್ಲಿ ಕಲ್ಲಿನ ಪಲ್ಲೆಗಳು ಏಡಿಗಳಂತೆ ಮಲಗಿರುವುದನ್ನು ನೆನಪಿಗೆ ತರುತ್ತದೆ. ಪಶ್ಚಿಮದ...

ಯಾರೂ ಹೇಳಬಲ್ಲರು ಕತೆಗಳನ್ನು. ಆದರೆ ಫಕೀರಪ್ಪನ ಶೈಲಿಯೇ ಬೇರೆ. ಹೇಗೆ ಕೇಳುಗರ ಅಸಕ್ತಿಯನ್ನು ಕೆರಳಿಸಬೇಕು. ಎಲ್ಲಿ ತಡೆಹಿಡಿಯಬೇಕು, ಯಾವಾಗ ವೀಳಯದೆಲೆಗೆ ಎಷ್ಟು ಮೆಲ್ಲಗೆ ಸುಣ್ಣ ಸವರಬೇಕು -ಇದೆಲ್ಲ ಅವನೊಬ್ಬನಿಗೇ ಗೊತ್ತು. ರಾತ್ರಿ ಸರಿಯುತ್ತಿದ್...

ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ದದೇನಲ್ಲ ಮದರಾಸು ಮೈಲು ಜಯಂತಿ ಜನತಾ ಅಲ್ಲಿ ನಿಲ್ಲುವು- ದಿಲ್ಲ. ಇತರ ಗಾಡಿಗಳು ತುಸು ಹೊತ್ತು ತಂಗುವುವು ಜನ ಇಳಿಯುವರು ಹತ್ತುವರು ಎಲ್ಲಿಂದೆಲ್ಲಿಗೊ ಹೋಗುವರು ಕಣ್ಣು ತೆರೆಯುವುದರೊಳಗೆ ಐನೂರು ವರ್ಷದ ಆಲದ ಮ...

ಲೋಟ ಮೇಲೇರುವುದು ಲೋಟ ಕೆಳಗಿಳಿಯುವುದು ಒಂದರಿಂದಿನ್ನೊಂದಕ್ಕೆ ಧುಮುಕುವುದು ಭೋರ್ಗರೆವ ಜಲಪಾತ ಪಾರದರ್ಶಕ ಗ್ಲಾಸುಗಳಲ್ಲಿ ತುಂಬಿ ಹರಿಯುವುದು ಗುಳ್ಳೆಯೆಬ್ಬಿಸಿ ಮೂಗಿನ ಹೊಳ್ಳೆಯೆಬ್ಬಿಸಿ ಆದ್ದರಿಂದಲೆ ಅವರಿಗೆ ಹೊಳ್ಳರೆಂದು ಹೆಸರು ಕಳ್ಳರಿಗೆ ಸುಳ್...

“ಏಳು!” ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ ತನ್ನ ತಲೆಯನ್ನು ಅನಿಸಿ ಕುಳಿ...

ಯಾರಿಗೆ ಯಾರು ಬರಕೊಟ್ವ ಉಂಬಳಿ ಈ ಗದ್ದೆ ಬಯಲು ಮನೆ ಮಠ ಅ ಮುದುಕ ಹೊದ್ಡ ಕಂಬಳಿ ? ಎರಡು ತಲೆಮಾರಿಗಿಂತ ಹಿ೦ದಿಲ್ಲದ ಇತಿಹಾಸ ಆದರೂ ಗುಡ್ಡದ ಕೆಂಗಣ್ಣ ದೇವತೆ ಎಲ್ಲವನ್ನೂ ನೊಡಿದೆ ಪಶ್ಚಿಮದ ಆಕಾಶ ರೇಖೆ ಅರಬೀ ಸಮುದ್ರದ ಅಂಚು ಈಚೆಗೆ ಘಟ್ಟಗಳ ಸಾಲು ತ...

ವಿನಾಯಕ ಕೃಷ್ಣ ಗೋಕಾಕರ ಎರಡು ಬೃಹತ್ ಕೃತಿಗಳು ೧೯೫೬ರಲ್ಲಿ ಧಾರವಾಡದ ಮನೋಹರ ಗ್ರಂಥಮಾಲೆಯಿಂದ ಪ್ರಕಟವಾದ ‘ಸಮರಸವೇ ಜೀವನ’ ಎಂಬ ೧೨೩೯ ಪುಟಗಳ ಕಾದಂಬರಿ ಮತ್ತು ೧೯೮೨ರಲ್ಲಿ ಬೆಂಗಳೂರಿನ ಐ.ಬಿ.ಎಚ್. ಸಂಸ್ಥೆಯಿಂದ ಎರಡು ಸಂಪುಟಗಳಲ್ಲಿ ಪ್ರಕಟವಾದ ‘ಭಾರ...

1...4950515253...63

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...