Home / ಚೈತ್ಯಾಲಯ

Browsing Tag: ಚೈತ್ಯಾಲಯ

ದೇವದೇವತಾ ಪಟ್ಟಣದಲ್ಲಿ ! ದೇಗುಲದೊಲು ಕಿರಿಕಟ್ಟಡದಲ್ಲಿ || ಕಟ್ಟೆರಕದ ಕೈ ಕಾಲೂ ಕಣ್ಣು | ದೇವತೆ ನೋಡಿದಳದೊ ನನ್ನನ್ನು || ಸಜೀವ ಜಾಗೃತ ಅಮೃತವು ದಿವ್ಯ | ಏಕಮೂರ್ತಿಯೇ ಅನಂತಭವ್ಯ || ಮದಾದೇವಿ ಮಾತಾಯಿಯು ಅಂಬೆ | ಪ್ರತ್ಯಕ್ಷವು ಇಚ್ಚೆಯು ಎಂಬೆ ...

ಒಂದು ಬಿನ್ನಾಣವಿಹುದು ಸುಸಮಾಧಿ ಸುಪ್ತ ಸೂರ್‍ಯನಂತೆ. ಹೃದಯಗುಹೆಯಲ್ಲಿ ಹಿಗ್ಗು ಹೊತ್ತಿಹುದು ಅನ್ನಿಸತ್ವದಂತೆ. ಹೃದಯ ಹೃದಯ ಮಿಲಿತೈಕ್ಯದಂಥದಿದೆ ಒಂದೆ ಹೃದಯಲೋಕ. ಸುಪ್ರಮೋದ ಪರ್‍ವತದ ಅಗ್ರಕಿದೆ ಭವ್ಯಮೌನ ಮೂಕ. ಶಾಂತಿ ತೊಡೆಯ ತೊಟ್ಟಿಲದಲಾಡಿಸುವಳ...

ಆನಂತ್ಯದೊಂದು ನವ ಜಲಧಿಯಲ್ಲಿ ಹೊರಟಿಹುದು ನನ್ನ ನಾವೆ. ಎಲ್ಲಿ ಹೊರಟಿತೋ; ತನ್ನ ಮಾನವ್ಯ ಬಿಟ್ಟು ಬೇರೆ ಠಾವೆ? ಮಸಕು ಮಸಕು ಹಿಂದೆಲ್ಲ, ಮುಂದೆ ಪಾತಾಳಖಾತ ಸಿಂಧು ಗೊತ್ತುಗುರಿಯಿಲ್ಲ, ದೂರ ಧ್ರುವದಾಚೆ ಬೆಳಕು ಸ್ಫಟಿಕ ಬಿಂದು! ಕಾಣದೊಂದು ಕೈ ಹುಟ್ಟ...

ನನ್ನ ಮಿದುಳು ದಳವೇರಿ ದಳ್ಳಿಸಿತು ಸ್ವರ್‍ಣದೀಪ್ತಿ ಇಳಿಯೆ. ಮನದ ಕರಿನೆರೆಯ ಹುಳುಗಳೆಲ್ಲ ಹೊತ್ತೇರಿ ನಿದ್ದೆ ತಿಳಿಯೆ. ಜ್ಞಾನಮಯದ ಉದ್ದೀಪನಕ್ಕೆ ಪ್ರಜ್ವಲಿತವಾದ ಮೇಲೆ. ಶಾಂತ ಕಾರ್‍ತಿಕದ ನಟ್ಟನಡುವೆ ಉರಿವಂತೆ ಪ್ರೇಮಜ್ವಾಲೆ. ಕೊರಳಿಗಿಳಿದು ಬಂದಿ...

ಮನದ ರಿಂಗಣದ ರಂಗಭೂಮಿಯನು ಅಗೆದು ಬಗೆದು ನಾನು ಆತ್ಮಮೌನಿ ಮುನಿಯಾದೆ ಬಾನಿನಲಿ ನಿಂತ ಹಾಗೆ ಭಾನು. ಪ್ರಾಣ ಅಲ್ಲ; ಹೊತ್ತರಿಯೆ ನಾನು; ಕ್ಷಯರಹಿತ ಚಂದ್ರನಾಗಿ ಸನಾತನದ ಆ ಬ್ರಹ್ಮಗೋಲದಲಿ ನಾನೆ ಕೇಂದ್ರವಾಗಿ. ಮುಕ್ತನಾದೆ ನಾ, ತೀರಿ ಹೋಯ್ತು, ಆ ಅಲ್ಪ...

ನನ್ನ ಜೀವಾಲಿಂಗನಾಂಗದಲ್ಲಿ ಪೂರ್‍ಣ ಪ್ರಪಂಚ ಕೃತ್ತಿಕೆಯ ಕಿಚ್ಚಗಸ್ತ್ಯನ ತಪಃಸುಖವು. ಜೀವಜೀವದ ರೂಪರೂಪದಲಿ ನಾ ಕಾಂಬೆ ನನ್ನದೇ ಮೈಯ ಮತ್ತೊಂದು ಮುಖವು. ನನ್ನ ನೋಡುವ ನೋಟ ನನ್ನದೇ ಕಣ್ಣಾಟ ಎಲ್ಲೆದೆಯ ಮಿಡಿತ ನನ್ನೆದೆಯ ಠಾವು. ನನ್ನ ನರದಲಿ ಹರಿಯುತ...

ಅಗ್ನಿರಾಜ: ಬೆಂಕಿ ನಿಲುವಂಗಿ ತೊಟ್ಟುಕೊಂಡು ಬುವಿಯಿಂದ ಬಂದ ಜೀವ ಸಪ್ತಸ್ವರ್‍ಗಗಳ ಸುಪ್ತ ಮೌನವನು ದಾಟಿಕೊಂಡು ಯಾವ? ನೀನು ಏನು ಅಧ್ಯಾತ್ಮದೌರಸನೊ? ಅಭವ ಸ್ವಯಂಭವನು. ಪರಂಧಾಮದಾ ಅತಿಥಿಯೇನು? ಪೌರಾಣ ಕಾಲದವನು. ಮನುಕುಲ ದೂತ: ಮಾನವ್ಯಕುಲದ ಹರಿಕಾರ...

ಸುಸಮರ್‍ಥನಾದ ವಿದ್ಯುತ್‌ ಪುತ್ರನೊಬ್ಬ ತಾನೀ ಭೂಮಿಗಿಳಿದು ಬಂದ ಅಪ್ರತಿಮ ತ್ವರಿತಗತಿ ಅಗ್ನಿ-ಪಾದಗಳಿಂದ. ಮಾನವನ ಮೈ ಕಟ್ಟು ಘನಗರ್‍ಜನೆಯ ತೊಟ್ಟು, ನರಗರ್‍ಭದಲ್ಲಿ ಹುಟ್ಟಿತ್ತು ಬೆಳಕು. ಸ್ವರ್‍ಗದತಿ ಶಾಂತಗತಿ, ಮಹಿಮೆಯಾ ಮಾಧುರ್‍ಯ, ಪರಿಶುದ್ಧರಾ...

ಫಲದ ನಿರ್‍ಣಯವು ಏನು ಆದರೂ ಕ್ಷುಬ್ಧನಾಗನವನು ನೇರಾದ ರೀತಿ ರುಜು ಅವನ ನೀತಿ, ಸಿದ್ಧಿಸದೆ ಇದ್ದರೂನು ತನ್ನ ಯೋಗ್ಯತೆಗೆ ತಕ್ಕ ರೀತಿಯಲಿ ಕರ್‍ಮಕುಶಲನಾಗಿ ಸತ್ಯವನ್ನೆ ಸಾರುವನು ಜಗಕೆ ನಿರ್‍ಭೀತ ಧೀರನಾಗಿ. ಫಲವೆಂದೆ ಬರಲಿ ಯುಗಯುಗವು ತಾಳಿ ಎದೆಗೆಡದ...

ಅಂದೆ ನೆಲವು ಪಡೆದೀತು ಅಮರ ಜೀವಂತ ಶಾಂತಿಯನ್ನು ಎಂದು ನಾಡ-ನಡೆವಳಿಕೆಯಲ್ಲಿ ನೆಲೆಗೊಂಬುದೊಂದೆ ನಿಜವು. ಆ ಪೂರ್‍ಣ ನಿಜದ ನೆಲೆ ಮೊಲೆಯ ಬಯಸಿ ಭಕ್ತಿಯಲಪೇಕ್ಷಿಸುವೆವು. ನೀ ಪೂರ್‍ಣ ಮಾಡು ಹೇ ದೊರೆಯೆ! ಎಲ್ಲಿಯೂ ಬಯ್ತ ಬಯಕೆಯನ್ನು. *****...

1...345

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...