ಬೆಟ್ಟದ ನೆತ್ತಿಗೆ

ಬೆಟ್ಟದ ನೆತ್ತಿಗೆ ಕಿರೀಟವಿಟ್ಟ ಬಿಸಿಲು ಕಪ್ಪಗೆ ದೂರದಲ್ಲಿ ನೆಲಕ್ಕೆ ಜಾರಿದ ಮುಗಿಲು ಮತ್ತೆ ಮತ್ತೆ ಮೇಲೆ ಚಿಗಿವ ಆಲದ ಬಿಳಲು ಹೊಳೆಸುತ್ತವೆ ಹಠಾತ್ತನೆ ನಿನ್ನ ಮುಖ ಕೈಕಾಲು ಹೊಳೆದ ಗಳಿಗೆ ಮೈಯುದ್ದ ಬೆಳೆದು ನೀ...

ದೇವ ಕರುಣಿಸು

ದೇವ ಕರುಣಿಸು ನನಗೊಂದು ಕುಡಿಯ| ಜನ್ಮನೀಡಿ ಈ ಜನ್ಮವ ಪಾವನವಾಗಿಸುವೆನು| ಅಮ್ಮನೆಂದೆನಿಸಿಕೊಂಡೊಮ್ಮೆ ಆ ಮಮತೆಯನು ಸವಿಯುವೆನು|| ಆ ಹಸುಗೂಸು ಮಡಿಲಲಿ ಮಲಗಿ ಪುಟ್ಟ ಕಾಲಲಿಂದ ಒದೆಯುವುದ ನಾ ಕಲ್ಪಿಸಿ, ಅದರ ಬರುವಿಕೆಗಾಗಿ ಕಾದಿರುವೆ ಕಾತರಿಸಿ...

ಸೂಚನೆಯ ಪತ್ರ

ಮರ, ನಮ್ಮ ಕೈಮರ ನಾಗರೀಕರ ಅಗತ್ಯದ ಕುರುಹಾಗಿ ಹಸಿರು ಛಿಂದಿಯನುಟ್ಟ ಗುಡ್ಡದ ಸನಿಹ ಹತ್ತಾರು ಮೀಟರು ಅಂತರದಿ ತೇರಂತೆ ಎತ್ತರಕ್ಕೆ ಬೆಳೆದು ರಾರಾಜಿಸುತ್ತಿತ್ತು. ನಾವು, ಒತ್ತರಿಕೆ ಗುಣದವರು ಎಬ್ಬಿಸಿದ ಸಾಲು, ಸಾಲು ಕಾಂಕ್ರೀಟು ಬೆಟ್ಟ...

ನನ್ನ ಬದುಕು

ನಾನಡಿಯ ಇಡಬೇಕು ಬದುಕಲಿ ಮಡಿಯುವ ಮುನ್ನ ಈ ಜಗದಲಿ ಏರು ಪೇರಿನ ಬಾಳನು ಸಮ ಸ್ವೀಕರಿಸುತಲಿ ಹಸನಾದ ಬದುಕು ಏರಿಳಿಯುತಲಿ ಈ ಭೂಮಿಗೆ ಬಂದ ಮೇಲೆ ಏತಕ್ಕಾಗಿ ಹಲವು ಚಿಂತೆ ನಗು ನಗುತ ಬಾಳ...

ಸಗ್ಗ ಲೋಕಕೆ ಹಗ್ಗ

ಸಗ್ಗ ಲೋಕಕೆ ಹಗ್ಗ ಹಚ್ಚುತ ಜಗ್ಗು ಹಿಗ್ಗಿನ ಒಡೆಯನೆ ಸಾಕು ನರಕಾ ಪಾಪ ಚರಕಾ ಎತ್ತು ಎತ್ತರ ಇನಿಯನೆ ||೧|| ನೀಲ ಮುಗಿಲಿನ ಕಾಲ ಗಗನದಿ ಕಾಲವಾದನೆ ಕವಿಗುರು ಎಲ್ಲಿ ಕಿರಣಾ ಅರುಣ ಸ್ಫುರಣಾ...

ಮುಕ್ತ

ಉಗಿಯುತ್ತಿದೆ ಊರು ಓಡಿ ಮೋರಿಯಲ್ಲಿ ಮಲಗು ಅರಸುತ್ತಿದೆ ಕಲ್ಲು ದೊಣ್ಣೆ ಬಿಲಗಳಲ್ಲಿ ಅಡಗು ನಿಂತ ನೆಲವೆ ನುಂಗುತ್ತಿದೆ ಬೆಂತರ ಬೆನ್ನಟ್ಟುತ್ತಿದೆ ನಿರ್ಜನ ರಾತ್ರಿಗಳಲ್ಲಿ ಒಂಟಿ ಕೂತು ಕೊರಗು. ಮುಕ್ತ ಇವನು ಮಾನದಿಂದ ಸರಿತಪ್ಪಿನ ಜ್ಞಾನದಿಂದ...

ದೇವಾ ನಿನ್ನ ನಾಮಾಮೃತವ

ದೇವಾ ನಿನ್ನ ನಾಮಾಮೃತವ ಸದಾ ಸವಿಯುತಲಿದ್ದರೆ ಹಸಿವು ಎನಿಸುವುದಿಲ್ಲಾ | ಸಮಯ ಸವೆಯುವುದೇ ತಿಳಿಯುವುದಿಲ್ಲಾ|| ಚಿತ್ತದೊಳು ನಿನ್ನನ್ನಿರಿಸಿ ಮನದಿ ನಿನ್ನ ಸ್ಮರಿಸಿ ನಿತ್ಯ ಕೆಲಸ ಪ್ರಾರಂಭಿಸೆ ಯಾವ ವಿಘ್ನಗಳಿಲ್ಲ| ತಿನ್ನುವ ಅನ್ನವನು ನೀನಿತ್ತ ಪ್ರಸಾದವೆಂದು...

ಮಗು

ಅರಳಿಹುದು ನಮ್ಮ ಮಡಿಲೊಳಗೊಂದು ಮಲ್ಲಿಗೆಯ ಮುಗುಳು ತುಂಬಿಹುದು ಮನೆ, ಮಂದಿ ಮನಸೆಲ್ಲಾ ಒಮ್ಮುಖವಾಗಿ. ಮರೆಯುವೆವು ನಮ್ಮನು, ನಮ್ಮದನು ನೋಡುವುದರಲ್ಲಿ ನಿಸರ್ಗದೀ ವಿಶುದ್ಧ ಮೂರ್ತಿಯ ಒಂದೊಂದು ಚಿಗುರು ನಡೆ, ನುಡಿ, ಆಟ, ನೋಟಗಳ. ಅಂತೆಯೇ ಮಾತರಿಯದ...