ಸಗ್ಗ ಲೋಕಕೆ ಹಗ್ಗ ಹಚ್ಚುತ
ಜಗ್ಗು ಹಿಗ್ಗಿನ ಒಡೆಯನೆ
ಸಾಕು ನರಕಾ ಪಾಪ ಚರಕಾ
ಎತ್ತು ಎತ್ತರ ಇನಿಯನೆ ||೧||
ನೀಲ ಮುಗಿಲಿನ ಕಾಲ ಗಗನದಿ
ಕಾಲವಾದನೆ ಕವಿಗುರು
ಎಲ್ಲಿ ಕಿರಣಾ ಅರುಣ ಸ್ಫುರಣಾ
ಕಾಣೆಯಾದನೆ ರವಿಗುರು ||೨||
ಸಾಕು ಶೀತಲ ಭೀತಿ ಬೂರಲ
ಗಾಳಿ ಪೇರಲ ಚೀರಿವೆ
ನೆಲವು ನೆಗ್ಗಿದೆ ಜಲವು ಜಗ್ಗಿದೆ
ಸುಗ್ಗಿ ಮರಗಳು ಬಗ್ಗಿವೆ ||೩||
ಒಮ್ಮೆ ಕೇಳಿದ ಕೂಗು ಕಳವಳ
ಮತ್ತೆ ಕೇಳುವದೇತಕೆ
ಒಮ್ಮೆ ಕಂಡಾ ರುಂಡ ಮುಂಡಾ
ಮತ್ತೆ ಕಾಣುವುದೇತಕೆ ||೪||
*****