ನನ್ನ ಬದುಕು

ನಾನಡಿಯ ಇಡಬೇಕು ಬದುಕಲಿ
ಮಡಿಯುವ ಮುನ್ನ ಈ ಜಗದಲಿ
ಏರು ಪೇರಿನ ಬಾಳನು ಸಮ ಸ್ವೀಕರಿಸುತಲಿ
ಹಸನಾದ ಬದುಕು ಏರಿಳಿಯುತಲಿ

ಈ ಭೂಮಿಗೆ ಬಂದ ಮೇಲೆ
ಏತಕ್ಕಾಗಿ ಹಲವು ಚಿಂತೆ
ನಗು ನಗುತ ಬಾಳ ಬೇಕಂತೆ
ಬಂದದ್ದು ಬರಲೆಂದರೆ ನಾ ಗೆದ್ದಂತೆ

ಮನಸ್ಸುಗಳ ಮನದಲ್ಲಿ ಬೆರೆತು
ಮಾನವೀಯ ಮೌಲ್ಯಗಳ ಅರಿತು
ನುಡಿಯೊಳು ನಡೆಯಾದಂತೆ
ಈಜಿ ದಡ ಸೇರುವ ಮಾತೊಂದೆ

ದೊಡ್ಡ ದೊಡ್ಡ ಆಸೆ ಎನಗಿಲ್ಲ
ಸಣ್ಣ ತನದ ಮಾತೇ ಬರೊಲ್ಲ
ಜಗ ಮೆರೆಯುವ ಬಯಕೆ ನನಗಿಲ್ಲ
ಗೌರವದ ಬಾಳೊಂದೇ ಸಾಕಲ್ಲ

ನಾ ಬರಲು ಈ ಭುವಿಗೆ ಕಾರಣರು
ಪ್ರಕೃತಿಯ ಜೊತೆ ನನ್ನ ಜನಕರು
ಅವರೇ ನನ್ನ ನಿಜ ದೈವ ಎಂದು
ನನ್ನ ಅರ್ಪಿಸುವೆ ಅವರಿಗಿಂದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಯಿಲ್ಲದವರು
Next post ಸಾಕ್ಷಾತ್ಕಾರ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…