Home / Kannada

Browsing Tag: Kannada

ಮಾತುಗಳ ಮೋಡಿಗಳ ಒಳಗಿಣುಕು ಮನೆಗಳ ಕಚೇರಿಗಳ ಖಾನೆ ಖಾನೆ ಏಕತಾನದೊಳಹೊಕ್ಕು ಫೈಲುಗಳ ಸ್ಮೈಲುಗಳ ನಡುವೆ ತಲೆಹುದುಗಿಸಿಕೊಂಡ ನಾಕು ಮಂದಿಯಂತೆ ವೇಷ ಭೂಷಗಳ ಸಿಕ್ಕಿಸಿಕೊಂಡ ದೇಶಾವರಿ ಯೋಗಕ್ಷೇಮದ ಗಿಳಿಯೋದುಗಳ ಸ್ವಲ್ಪ ಅತ್ತತ್ತ ಸರಿಸಿ, ಉರುಳಿಸುವ ಬುರ...

ಪ್ರಿಯ ಸಖಿ, ಜನರ ಓಡಾಟವಿಲ್ಲದ ರಸ್ತೆ ಮಧ್ಯದಲ್ಲಿ ವ್ಯಕ್ತಿಯೊಬ್ಬ, ಗಾಯಗೊಂಡು ಬಿದ್ದು ನರಳಾಡುತ್ತಿದ್ದಾನೆ. ಆ ದಾರಿಯಲ್ಲಿ ಬಂದ ಸನ್ಯಾಸಿಯೊಬ್ಬ ಮರುಕಗೊಂಡರೂ ತನಗೂ ಈ ವ್ಯಕ್ತಿಗೂ ಸಂಬಂಧವೇನು? ನನ್ನದೇನಿದ್ದರೂ ವೈರಾಗ್ಯ ಸಾಧನೆ, ಮೋಕ್ಷ ಪ್ರಾಪ್ತ...

ಅಯ್ಯೋ! ಅಂದರೆ ಸ್ವರ್ಗ ಎಲವೋ! ಎಂದರೆ ನರಕ ಸಾರ್‍! ಎಂದರೆ ಮರ್ತ್ಯ ಮ್ಯಾಡಮ್! ಎಂದರೆ ಪಾತಾಳ ದೇವರೇ! ಅಂದರೆ ಆಕಾಶ ರಾಜ! ಅಂದರೆ ಭೂಲೋಕ ಡಾರ್ಲಿಂಗ್! ಅಂದರೆ ಕೈಗೆ ಸ್ಲಿಂಗ್ ಮಾಯಾಲೋಕ!! *****...

ಸುರಿವ ಧಾರಾಕಾರ ಮಳೆಯೊಳಗೆ ತೊಯ್ಸಿಕೊಂಡು ನೆನೆದು ನಡುಗಿದ್ದು- ಬಿಸಿನೀರಿನ ಶವರ್ ಕೆಳಗೆ ಕುಳಿತು ಬೆಚ್ಚಗಾಗಿ ಹೊರಬಿದ್ದರೂ ಕಾಫಿ ಸಿಪ್‌ಗೆ ದೌಡಾಯಿಸಿದ ಸೂಜಿಗಲ್ಲು ಕೊರೆವ ಚಳಿ ಮಳೆ. ವರುಷ ವರುಷ ವಸಂತೋನ್ಮಾದದ ಚಿಗುರು ಹೂವುಗಳ ದಾಂಗುಡಿ ಗುಡುಗು...

ಗದ್ದೆಯಲ್ಲಿರುವ ಒಂದು ಕಪ್ಪೆ ಎಲ್ಲಾ ಕಪ್ಪೆಗಳಂತೆ ಕುಪ್ಪಳಿಸುವುದು ಧೂಳಿನಲ್ಲಿ ತೆವಳುವುದು ಮೇಲೆ ಕಾಗೆಗಳಿಂದಲೂ ಕೆಳಗೆ ಹಾವುಗಳಿಂದಲೂ ತಪ್ಪಿಸಲು ಹುಲ್ಲುಗಿಡಗಳ ಮರೆಗೆ ಅಡಗುವುದು, ಕೆಸರನ್ನು ಹೊಗುವುದು ಮುಂಗಾರಿಗೆ ಸಂಗಾತಿಯನ್ನು ಹುಡುಕುವುದು ಮ...

ಮೂರಂತಸ್ತಿನ ಮನೆಯ ಎಲ್ಲಕ್ಕೂ ಮೇಲಿನ ಅಂತಸ್ತಿನಲ್ಲಿ ಡೊಳ್ಳು ಹೊಟ್ಟೆಯ ಆ ಮನೆಯೊಡೆಯನು, ಚಿಕ್ಕ ಬಾಗಿಲಿನ ಒಂದು ಕದವನ್ನು ತೆರೆದು ಏನೋ ಓದುತ್ತ ಕುಳಿತಿದ್ದನು. ಅತ್ತಕಡೆಯಿಂದ ಹಾಯ್ದು ಹೋಗುವ ಒಬ್ಬ ಹುಡುಗನು ಆತನನ್ನು ನೋಡುತ್ತ ಕೆಲಹೊತ್ತು ನಿಂತು...

ಆನಿ ಬಂತಾನಿ ಯವೂರಾನಿ? ಸಿದ್ಧಾಪುರದಾನಿ ಇಲ್ಲಿಗ್ಯಾಕ್ ಬಂತು? ಹಾದಿ ತಪ್ಪಿ ಬಂತು ಹಾದಿ ಯಾಕೆ ತಪ್ಪಿತು? ಕಬ್ಬಿನಾಸೆ ಎಳೆಯಿತು ಬಾಲ ಬೀಸಿಕೊಂಡು ಊರ ನಡುವೆ ಬಂದು ಬಿಟ್ಟಿತು? ಪುಟ್ಟ ಪುಟ್ಟ ಕಣ್ಣು ಮುಖವೊ ತಟ್ಟೆ ಹೊನ್ನು ಮುಕ್ಕಿ ಬಿಡಬೇಕೆನಿಸುವಂ...

ಒಮ್ಮೆ ಕೋರ್ಟಿನಲ್ಲಿ ನ್ಯಾಯಾಧೀಶರು ರಾವಣನನ್ನು ಸಾಕ್ಷಿಗಾಗಿ ಕರೆಸಿ “‘ಗೀತಾ’ ಮೇಲೆ ಕೈ ಇಟ್ಟು ಪ್ರಮಾಣ ಮಾಡು” ಎಂದರು. “ಅದೊಂದನ್ನು ಬಿಟ್ಟು ಬೇರೆ ಕೇಳಿ; ನಾನು ಈಗಾಗಲೇ ‘ಸೀತಾ’ ಮೇಲೆ ಕೈ ಇಟ್ಟು ಸುಟ್ಟು ಕೊಂಡಿದ್ದೇನಿ.&#...

ಪಶ್ಚಿಮದ ಕದವ ತೆಗೆದು, ಬಚ್ಚಬರಿಯ ಬೆಳಗನೋಡಲೊಲ್ಲದೆ, ಕತ್ತಲೆಯ ಬಾಗಿಲಿಗೆ ಮುಗ್ಗಿ ಕಣ್ಣುಗಾಣದ ಅಂಧಕರಂತೆ, ಜಾರಿ ಜಾರಿ ಎಡವಿಬಿದ್ದು, ಕರ್ಮಕ್ಕೆ ಗಿರಿಯಾಗುವ ಮರ್ತ್ಯದ ಮನುಜರಿರಾ ನೀವು ಕೇಳಿರೋ ಹೇಳಿಹೆನು. ನಮ್ಮ ಶರಣರ ನಡೆ ಎಂತೆಂದರೆ, ಕತ್ತಲೆಯ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...