ಅದು ಅದುವೆ ಯುಗಾದಿ

-೧- ನೆತ್ತಿಗೆ ಎಣ್ಣೆ ಮೀಯಲು ಬಿಸಿ ನೀರು ಕುದ್ದರೆ ಒಬ್ಬಟ್ಟಿನ ಸಾರು ಅದು ಅಡವೆ ಯುಗಾದಿ ಮನೆಗೆ ಸುಣ್ಣ ಬಾಗಿಲಿಗೆ ತೋರಣ ಎಲೆಯೊಳಗೆ ಹೊರಳಿದರೆ ಹೂರಣ ಅದು ಅದುವೆ ಯುಗಾದಿ ರಟ್ಟೆಯ ತುಂಬಾ ಕೆಲಸ...

ದರುಶನ

ಕತ್ತಲೆಯ ಕೊಂಬೆ ಸವರಿ ನಕ್ಷತ್ರ ಎಲೆಗಳನೊಟ್ಟಿ ರಾಶಿಯಾಗಿಸಿ ಹಾದಿ ಬೀದಿಯ ಸೂರ್ಯನಂತೆ ಬೆಳಗಿದ. ಕಪ್ಪು ಮುಖ, ಕೆಂಡಗಣ್ಣು ಹಳದಿ ಹಲ್ಲು, ತಲೆಯೋ ಹೊರೆ ಹುಲ್ಲು ಶಂಖ ಚಕ್ರ ಗದಾಪದ್ಮ ?... ಅಲ್ತಲ್ತು ಅಲ್ತಲ್ತು ಗೋರೆ,...

ಮನವಿ

ಒಕ್ಕಲೆಬ್ಬಿಸದಿರಿ ನನ್ನ ಈ ತುಂಡು ನೆಲವೆ ನನಗೆ ಅನ್ನ ಚಿನ್ನ ಅಗೋ...ಅದೇ ನಾ ಕೈಯಾರೆ ಬೆಳೆದ ನಿಂಬೆ ದಾಳಿಂಬೆ ಹೇಗೆ ತೂಗಿದೆ ನೋಡಿ ಚಾಚಿ ರೆಂಬೆ ಕೊಂಬೆ ಇಗೋ... ಇದೇ ಬಾಳೆ.... ಹೊಂಬಾಳೆ ಇನ್ನೇನು...

ನನ್ನತನ ನನ್ನನುಡಿ

ಯಾವ ಊರಿಗೆ ಹೋದರೂ ನನ್ನೂರು ನೆನಪಾಗುವುದು ಗೌರಿ ಶಂಕರನಿಗೆ ಶಿರ ಬಾಗಿದರೂ ಮನ ಸಹ್ಯಾದ್ರಿಗೆ ಮರಳುವುದು ಯಾವ ಊರಿಗೆ ಹೋದರೂ ನನ್ನೂರು ನೆನಪಾಗುವುದು ಗಂಗೆಯಲಿ ಮಿಂದರೂ ಮೈ-ಮನ ತುಂಗೆಯಲಿ ತಂಗುವುದು ಯಾವ ಊರಿಗೆ ಹೋದರೂ...

ಅಲ್ಲೊಂದು ನವಿಲು, ಇಲ್ಲೊಂದು ನವಿಲು

ಅವರು ನವಿಲುಗಳನ್ನು ಕೊಂದರು ಉದರವನು ಭರಿಸಿದರು. ಗರಿಗಳನ್ನು ಮಾರಿದರು ಕಂಠವನು ತಣಿಸಿದರು ಕೇಕೆ ಹಾಕಿದರು ಮೈದುಂಬಿ ಕುಣಿದರು. ಇತ್ತವರಿಗೆ ನವಿಲಾಗುವ ಯೋಗ ಅಹಾ! ಅದೇನದು ಐಭೋಗ... ದಿನದ ಅನ್ನವ ಕರುಣಿಸಿ ದಯೆ ತೋರಿದ ದೇವರಿಗೆ...

ಆಶೆ-ಭಾಷೆ

ಹಾಡುವುದು ಕೋಗಿಲೆ ತನ್ನ ಆಶೆಯಂತೆ ಹಾಡೆ ಕೋಗಿಲೆಯ ಭಾಷೆಯಂತೆ ಅರಳುವುದು ಹೂವು ತನ್ನ ಆಶೆಯಂತೆ ಪರಿಮಳವೆ ಹೂವಿನ ಭಾಷೆಯಂತೆ ಉರಿಯುವುದು ಬೆಂಕಿ ತನ್ನ ಆಶೆಯಂತೆ ಬೆಳಕೆ ಬೆಂಕಿಯ ಭಾಷೆಯಂತೆ ಬೀಸುವುದು ಗಾಳಿ ತನ್ನ ಆಶೆಯಂತೆ...

ಬಜಾರಿನಲ್ಲಿ ಬುದ್ಧ….

ಬಜಾರಿನಲ್ಲಿ ಇದ್ದ ಬುದ್ಧ ರಾಮ, ಕೃಷ್ಣ, ಶಿವ, ಗಾಂಧಿ ಅಂಬೇಡ್ಕರ್ ಅವರ ಜೊತೆಗೆ ಕುಳಿತಿದ್ದ. ಮೊಂಡು ಕೈ, ಹರಿದ ಅಂಗವಸ್ತ್ರ.... ಬುದ್ಧ ಹೌದೋ ಅಲ್ಲವೋ ಎಂದು ಅನುಮಾನಿಸುವಷ್ಟು ಚಿಂದಿಯಾಗಿದ್ದ. ಆದರವೇ ಜಾಜ್ವಲ್ಯಮಾನ ಕಣ್ಣುಗಳು ಸೆಳೆದವು,...

ಗಾಂಧಿ

ಇಲ್ಲವೆಂದರೂ ಇಲ್ಲವಾಗುವುದೇ? ನೆನಪು- ಹುಲ್ಲು ಗರಿಕೆಯಂತೆ ಹಸಿರಾಗಿದೆ. ಆ ಚಿತ್ರ ಅವನದೇ ಮಳೆಬಿಲ್ಲಿನಂತೆ ಭರತ ಖಂಡದ ಮೇಲೆ ಬಾಗಿದೆ ತಂಗಾಳಿ ಅದನು ತೂಗಿದೆ. ಕಣೋಳಗಿನ ಮಿಂಚು ಭೂಮಂಡಲವ ಬೆಳಗಿದೆ ನಿಸ್ವಾರ್ಥ ನಗೆ ಮೂಲೆ ಮೂಲೆಯನೂ...

ಈಶ್ವರ ಅಲ್ಲಾ ಮೇರೆ ಲಾಲ್

ನನಗೆ ಇಬ್ಬರು ಮಕ್ಕಳು ಒಬ್ಬ ಈಶ್ವರ ಒಬ್ಬ ಅಲ್ಲಾ ಎಲ್ಲಿರುವೆಯೋ ಕಂದಾ? ಇಲ್ಲಮ್ಮಾ ಕಾಬಾದಲ್ಲಿ ಕಲ್ಲಾಗಿ.... ಕಲ್ಲಾಗಿ ?! ಕಲ್ಲಾಗಿಯೇ ಇರದಿರು ಕಂದಾ ಸದಾ ಓಗೊಡು ಕರುಳ ಕರೆಗೆ; ಕರಗು ಅಷ್ಟಿಷ್ಟು ಕಂಗೆಟ್ಟವರ ಕಣ್ಣೀರೊರೆಸು...

ಇಲ್ಲೇ ಇರುವೆ..

ಆಶೆ ಬಿಡು ಎಂದ ಬುದ್ಧ ಏನು ಮಾಡಲಿ ನಾನಿಲ್ಲ ಸಿದ್ಧ. ಬಯಸದೆ ಹುಟ್ಟಿ ಬಂದೆ ಬಯಕೆಯ ಬುಟ್ಟಿಯಾದೆ ಬುಟ್ಟಿಯನ್ನೇ ನೆಚ್ಚಿಕೊಂಡೆ ಗಂಡ ಮಕ್ಕಳ ಹಚ್ಚಿಕೊಂಡೆ ಬದುಕನ್ನ ಒಪ್ಪಿಕೊಂಡೆ ಬೆಂಕಿಯನ್ನ ಅಪ್ಪಿಕೊಂಡೆ ಆಶೆ ಬಿಡು ಎಂದ...