ನನ್ನೀ ಬಾಳಿನ ಪೂಜಾ ಪಾತ್ರೆಯ

ನನ್ನೀ ಬಾಳಿನ ಪೂಜಾ ಪಾತ್ರೆಯ ನಿನ್ನಡಿಗಿಡುವೆನು ದೇವ; ಬರಿದಾಗಿರುವೀ ಪಾತ್ರೆಯ ತುಂಬಿ ತುಳುಕಲಿ ಭಕ್ತಿಯ ಭಾವ ದಾರಿ ತಿಳಿಯದೆ ಗುರಿಯನರಿಯದೆ ಅಲ್ಲಸಲ್ಲದಕೆ ದುಡುಕಿ, ತಂದು ತುಂಬಿದೆ ಮನದ ಬಿಂದಿಗೆ ಕೊಳೆತ ಹಣ್ಣುಗಳ ಹುಡುಕಿ. ಈಗ...

ಏನ ದುಡಿದೆ ನೀನು?

ಏನ ದುಡಿದೆ ನೀನು-ಭಾರಿ ಅದೇನ ಕಡಿದೆ ನೀನು? ನೀನು ಬರುವ ಮೊದಲೇ-ಇತ್ತೋ ಭೂಮಿ ಸೂರ್ಯ ಬಾನು ಕಣ್ಣು ಬಿಡುವ ಮೊದಲೇ-ಸೂರ್ಯನ ಹಣತೆಯು ಬೆಳಗಿತ್ತೋ ಮಣ್ಣಿಗಿಳಿವ ಮೊದಲೇ - ಅಮ್ಮನ ಎದೆಯಲಿ ಹಾಲಿತ್ತೋ ಉಸಿರಾಡಲಿ ಎಂದೇ...

ಮುಗಿಲು ಸುರಿಸುವುದು ನೀರು

ಮುಗಿಲು ಸುರಿಸುವುದು ನೀರು - ಅದ ಮೇಲೆ ಸಲಿಸುವದು ಬೇರು ಮುಗಿಲಿಗು ಬೇರಿಗು ಕೆಲಸವ ಹಚ್ಚಿ ಮರವ ಬೆಳೆಸುವುದು ಯಾರು? ಅರಳಿ ಬೀಗುವುದು ಹೂವು ದುಂಬಿಗೆ ಕೆರಳಿಸಿ ಕಾವು, ಹೂವಿನ ಹೊಕ್ಕಳ ದುಂಬಿಯು ಕಚ್ಚಿ...

ಸಾಗರ ಹುದುಗಿದೆ ಹನಿಹನಿಯಲ್ಲೂ

ಸಾಗರ ಹುದುಗಿದೆ ಹನಿಹನಿಯಲ್ಲೂ ಸೂರ್ಯನಿರುವ ಪ್ರತಿ ಕಿರಣದಲೂ, ಒಂದೇ ಸಮ ಇದೆ ಮಾಧುರ್ಯದ ಹದ ಮರವೊಂದರ ಪ್ರತಿ ಹಣ್ಣಿನಲೂ. ಸಾವಿರ ಸಿಪ್ಪೆ, ಸಾವಿರ ಚಿಪ್ಪು ಸಾವಿರ ಬಗೆ ನಡೆನುಡಿ ಅನ್ನ, ಕಾಯದ ಕರಣದ ಸಾವಿರ...

ಬುದ್ಧಿ ಚಿತ್ತ ಹಮ್ಮುಗಳೇ

ಬುದ್ಧಿ ಚಿತ್ತ ಹಮ್ಮುಗಳೇ, ವಿಷಯೇಂದ್ರಿಯ ಬಿಮ್ಮುಗಳೇ ನನ್ನ ಹೊತ್ತು ಗಾಳಿಯಲ್ಲಿ ಜಿಗಿದೋಡುವ ಗುಮ್ಮಗಳೇ! ಓಡಬೇಡಿ ಕೆಡವಬೇಡಿ ಅಶ್ವಗಳೇ ನನ್ನನು ಎಸೆಯಬಹುದೆ ಕೊರಕಲಲ್ಲಿ ರಥದಿ ಕುಳಿತ ದೊರೆಯನು? ಸಾವಧಾನ ಎಳೆದು ಸಾಗಿ ಹೊಣೆಯನರಿತು ರಥವನು ವಶವಾಗದೆ...

ಏಕೆ ಹೀಗೆ ಬೀಸುತ್ತಿರಬೇಕು ಗಾಳಿ?

ಏಕೆ ಹೀಗೆ ಬೀಸುತ್ತಿರಬೇಕು ಗಾಳಿ ಏಕೆ ಕಡಲು ದಡ ಮೀರದೆ ನಿಂತಿದೆ ತಾಳಿ, ನೆಲಕೆ ಏಕೆ ಮಳೆ ಹೂಡಲೆಬೇಕು ದಾಳಿ ನಗುವ ಏಕೆ ಯಮ ಜೀವಗಳೆಲ್ಲವ ಹೂಳಿ? ಹೇಗೆ ಚಿಮ್ಮುವುದು ಬೋಳು ಗಿಡದಿಂದ ಹಸಿರು...

ನಮಿಸುವೆ ಈ ಚೋದ್ಯಕೆ

ನಮಿಸುವೆ ಈ ಚೋದ್ಯಕೆ ನಮಿಸುವೆ ಅಭೇದ್ಯ, ಮರಣ ಹರಣ ಚಕ್ರದಲ್ಲಿ ಸರಿವ ಕಿರಣಸಾರಕೆ. ಆಳ ನೆಲದ ಮರೆಯಲಿ ಹೆಳಲ ಬಿಚ್ಚಿ ಹುಡಿಯಲಿ, ಸಾರ ಹೀರಿ ಹೂವಿಗೆ ಕಳಿಸಿಕೊಡುವ ಬೇರಿಗೆ! ಮಳೆಯ ಇಳಿಸಿ ಮಣ್ಣಿಗೆ ಸವಿಯ...

ಕಾಣುವುದೊಂದೇ ನಿಜವೇನು?

ಕಾಣುವುದೊಂದೇ ನಿಜವೇನು ಕಣ್ಣಿನಾಚೆಯದು ಸುಳ್ಳೇನು? ಕರಣವ ಮೀರಿ ಹರಣಕೆ ಹಾಯುವ ಸತ್ವವೆ ಸೋಜಿಗ ಅಲ್ಲೇನು? ಕಣ್ಣಿಗೆ ಹಾಯದ ಕಿರಣ ಇವೆ ಕಿವಿಗೂ ಮೀರಿದ ದನಿಗಳಿವೆ, ಕಂಡರು ಏನು ಕಾಮನ ಬಿಲ್ಲು ಸುಳ್ಳು ಎನ್ನುವುದು ತಿಳಿದೆ...

ಒಳಗೆ ಇಳಿದು ಬಾ

ಒಳಗೆ ಇಳಿದು ಬಾ ಇಳಿಯುವಂತೆ ನೀ ಮಳೆಯು ಮಣ್ಣ ತಳಕೆ ಕೆಸರ ಮಡಿಲಿಂದ ಕೆಂಪನೆ ಕಮಲವ ಮೇಲೆತ್ತುವ ಘನವೇ ಹೂವಿನ ಎದೆಯಲಿ ಬಗೆಬಗೆ ಪರಿಮಳ ಬಿತ್ತುವಂಥ ಮನವೇ ನಿಂತ ಗಿರಿಗಳಿಗೆ ನಡೆಯುವ ನದಿಗಳ ಕರುಣಿಸುವಾ...

ನಾನು ನಾನು ಎಂಬ ಮಾಯೆ

ನಾನು ನಾನು ಎಂಬ ಮಾಯೆ ಏಳುವುದೆಲ್ಲಿಂದ? ಎಲ್ಲವನೂ ಅಲ್ಲಾಡಿಸಿ ಹಾಯುವುದೆಲ್ಲಿಂದ? ಬುದ್ಧಿಯೇ ವಿದ್ಯೆಯೇ ಜೀವ ಹೊದ್ದ ನಿದ್ದೆಯೇ, ನೆಲ ಜಲ ಉರಿ ಗಾಳಿಯಿಂದ ಎದ್ದು ಬಂದ ಸುದ್ದಿಯೇ? ನಾನು ಎಂಬ ಹಮ್ಮಿಗೆ ತನ್ನದೆ ನೆಲೆ...