೧ ತಾಳೆಯ ಮರದಡಿ ತಪವನು ಗೈಯುವ ತರುಣನೆ ಏಳಪ್ಪಾ! ಕಣ್ಣು ಮುಚ್ಚಿ ನೀ ಕಾಲವ ಕಳೆದರೆ ಕಾಣುವಿಯೇನಪ್ಪಾ ! ೨ ತಾಳೆಯ ಮರವಿದು ಬಾಳಲಿ ಬಹುದಿನ ಕೇಳುವರಾರಪ್ಪಾ! ಅರಳು ಮಲ್ಲಿಗೆಯು ಅರೆಚಣವಿರುವದು ಪರಿಮಳವೆಷ್ಟಪ್ಪಾ! ೩ ಕಾಯಕವರಿಯದೆ ಕಾಯವ ಬೆಳಿಸಿದಿ ಹೇ...
(ಹರೀಂದ್ರನಾಥ ಚಟ್ಟೋಪಾಧ್ಯಾಯರ ಒಂದು ಇಂಗ್ಲೀಷ್ ಕವಿತೆಯ ಅನುವಾದ) ಭೂಮ್ಯಾಕಾಶದ ಕೆಂಪುಗಳೆಲ್ಲವು ಕೂಡುತೆ ಹಬ್ಬವ ಮಾಡಿದವು. ಬಂದವು ಅಲ್ಲಿಗೆ ಬಗೆ ಬಗೆ ಕೆಂಪು, ಗುಲಾಬಿ ಪೂಗಳ ಪರಿಮಳ ಕೆಂಪು, ಮಸಣದ ಜ್ವಾಲೆಯ ಗುಟ್ಟಿನ ಕೆಂಪು, ಅರುಣ ಕಿರಣಗಳ ಸಂಜೆ...
ಇದುವೇ ಪಾಪಿಯ ಯಮಲೋಕ ! ಭಾವಿಕರೆಂಬರು ಭೂಲೋಕ ! ದೈತ್ಯರೆಂಬವರ ಕರೆಕಳಿಸಿ ಹೊಟ್ಟೆಗೆಂಬವರ ಹಿಡಿದೆಳಿಸಿ ಮುಟ್ಟದೆ ಮೈದೊಗಲನು ಸುಲಿಸಿ ಕಟ್ಟಿಗೆಯಿಲ್ಲದೆ ಕರುಳನು ಸುಡಿಸಿ ಇದುವೇ ಪಾಪಿಯ ಯಮಲೋಕ ! ಭಾವಿಕರೆಂಬರು ಭೂಲೋಕ ! ಒಕ್ಕಲಮಕ್ಕಳ ಹಿಡಿದೆಳೆದು ...
೧ ಮೂಡಣ ದಿಶೆಯಲಿ ಪಡುವಣ ದಿಶೆಯಲಿ ಮೂಡುವ ಅಡಗುವ ರವಿ ಹೊಂಬಣ್ಣವ ಭರದಲಿ, ಹರುಷದಿ ಹೊಗಳುತಲಿರುತಿರೆ ಕವಿಜನರು; ಚೆನ್ನೆಯೆ ನಿನ್ನಯ ಕನ್ನಡಿ ಹೊಳಪಿನ ಕನ್ನೆಯ ಮೇಲಣ ಕೆಂಬಣ್ಣವ ನಾ ಹೊಗಳುತ ನಿಂತಿಹೆ ಓಡುತೆ ಬಾ! ಬಾ! ಹಾರುತೆ ಬಾ! ಬಾ! ೨ ಸರದಲಿಶೋಭ...
ಕತ್ತಲು, ಕತ್ತಲು, ಸುತ್ತಲು ಕವಿದಿದೆ ಬೆಳಕೆಂಬುವದನು ತೂರುವಿರಾ ? ಅಪಾರ ಗಗನವು ಇರತಿಹುದಂತೆ ! ತಾರಾಗಣದಿಂ ತೋರುವುದಂತೆ ! ಕಾರ್‍ಮೋಡಗಳಿ೦ ಮುಸುಕಿಹುದಂತೆ ! ಚಂದ್ರ ಸೂರ್‍ಯರಲ್ಲಿರುತಿಹರಂತೆ ! ಜಗವನು ಬೆಳಗಲು ನಿಂದಿಹರಂತೆ ! ರಾಹು ಕೇತುಗಳು ಪ...





