Home / Kannada

Browsing Tag: Kannada

ಮೋಹ ಮದ ಮತ್ಸರತುಂಬಿ ಹೂಂಕರಿಸಿದ ಮನುಷ್ಯ ವಯಸಾದಂತೆ ಸುಸ್ತಾಗಿ ಮೋಡಕಾ ಬಜಾರದಂಗಡಿಗೆ ಬಂದು ಬೀಳುತ್ತಾನೆ. ಕೊಳ್ಳುವವರು ಯಾರೂ ಇಲ್ಲ ಜಂಗು ಹತ್ತಿ ಕಾಲ್ತುಳಿತಕೆ ಒಳಗಾಗಿ ಕತ್ತಲು ಕೋಣೆ ಸೇರುವ ದುಃಖ. ದೂರದೆಲ್ಲಿಂದಲೋ ದಯಾಮಯಿಗಳ ಮೃದುಮಾತು, ಕೊಳ್...

ಬಣ್ಣಬಣ್ಣದ ಭಾವಗಳ ಬಲೆಯೊಡ್ಡಿ ನಿಂತಿದೆ ಈ ಜಗ ಕಣ್ಣುಕುಕ್ಕುವ ನೋಟವಿದು ಯಜಮಾನ ಕಾಣನು ಸೋಜಿಗ ಅತ್ತ ಸೆಳೆವುದು ಇತ್ತ ಸೆಳೆವುದು ಇಲ್ಲದಿರುವನು ಕಲ್ಪಿಸಿ ವ್ಯರ್ಥಮಪ್ಪುದು ಮರುಚಣವೆ ಇದೊ ಬಂದೆನೆಂಬುದು ವ್ಯಾಪಿಸಿ ಏನು ಸಿಂಗರ ಮದುವೆ ಹಂದರ ಪಚ್ಚೆಪ...

ಕೃಷ್ಣ ನಮ್ಮ ಈ ಗೋಕುಲಕೆ ಬಂದುದೇಕೆ ಗೊತ್ತೇ? ನಮ್ಮ ಒಳಗಿನ ಮಿಂಚನು ಭೂಮಿಗೆ ಇಳಿಸಿ ಹೊಳೆಸಲಿಕ್ಕೆ ಬಾನಿನ ಬೆಳಕಿಗೆ ಭೂಮಿಯ ತಮವ ಗುಡಿಸಿ ಹಾಕುವಂಥ ಬಲವಿದೆ, ಹಾಗೇ ಒಲವಿದೆ ನಮ್ಮೊಳು ಸ್ವಾರ್ಥವ ಗೆಲುವಂಥ ತೆತ್ತುಕೊಳ್ಳುವ ಪ್ರೇಮವೆ ಸಾಲದು ಬಾಳಿನ ಸ...

ಗಂಡ ಹೆಂಡಿರಿಬ್ಬರು. ಒಂದುದಿನ ಹೆಂಡತಿ ಮಾಲಾದಿ ಮಾಡಿ ಮೂರು ಉಂಡಿ ಕಟ್ಟಿಟ್ಟಳು. “ಮಾಲಾದಿ ನಾ ಮಾಡೀನು. ಎರಡು ನನಗೆ ಒಂದು ನಿನಗ” ಎಂದಳು ಹೆಂಡತಿ. “ಇಲ್ಲ. ನಾ ಮಾಡಿಸಂದಾಂವ. ನನಗೆ ಎರಡು ಉಂಡಿ ನಿನಗೆ ಒಂದು ಉಂಡಿ” ಎ...

ಸಮುದ್ರ ರಾಜ ನೀನದೆಷ್ಟು ಬಕಾಸುರನಪ್ಪ ಸಿಕ್ಕದ್ದನೆಲ್ಲಾ ತಿಂದು ತೇಗಿ ಹೊಳೆ ಹಳ್ಳಗಳನ್ನೆಲ್ಲಾ ನುಂಗಿ ಮೇಲೆ ಲಕಲಕನೆ ಹೊಳೆಯುತ್ತೀಯಲ್ಲ! ರೋಮನ್ ಟಾರ್ಜನ್ ತರಹ!! *****...

ಯಾರದು ಢಣ್ ಢಣ್ ಯಾರದು ಭಂ ಭಂ ಓಹೋ ದಾಸಯ್ಯ ತಲೆಗೆ ಮುಂಡಾಸು ಅದಕೊಂದು ಚೂವಿ ಬಗಲಲಿ ತೂಗುವ ಜೋಳಿಗೆ ಬಾವಿ ಶುಭವಾಗತೈತೆ ಶುಭವಾಗತೈತೆ ನಾಯಿಯ ಹಿಡಕೊಳ್ಳಿ ಗದ್ದಲ ಮಾಡತೆ ಮನೆಯಜಮಾನ್ರಿಗೆ ಶುಭವಾಗತೈತೆ ಮನೆಯಜಮಾನ್ತಿಗು ಶುಭವಾಗತೈತೆ ಮನೆಹೈಕಳಿಗೆ ಶ...

ಕಾಲವಾಹಿನಿಯಲ್ಲಿ ಸಿಕ್ಕಿ ನಾವೆಲ್ಲಿಗೋ ತೆರಳುತಿಹ ಭೀತಿಯಿಹುದು ; ಮೇಲ್ಮೇಲೆ ವಿಷವೀಚಿ ಮಾಲೆಗಳು ನುಗ್ಗುತ್ತ ಬರುತಿಹವು ಕೊಚ್ಚುತಿಹವು. ಕುರುಡಾದ ನಿಯಮವೊ ಕುಂಟಾದ ವಿಧಿಗಳೋ ಈವರೆಗೆ ಪೊರೆದುವಯ್ಯ; ಹರಿದು ಹೋಗಿಹವೀಗ ರಕ್ಷಣೆಯ ಬಂಧಗಳು ಕಾವುದನು ಕ...

ಬಳ್ಳಾರಿ ಬಿಸಿಲೆಂದರೆ… ನಿಗಿ ನಿಗಿ ಉರಿವಕೊಳ್ಳಿ ದೆವ್ವ!! ನಿತ್ಯ ಬಿಸುಲುಗುದುರೆಯೇರಿ, ಗರಿಗೆದರಿ, ಧರೆಗಿಳಿವ, ಸೂರ್‍ಯಮಂಡಲ! ಆಲೆಮನೆಯ, ಕೊಪ್ಪರಿಗೆಯೊಳಗಿನ ಬಿಸಿ ಬಿಸಿ ಕೆನೆ ಬೆಲ್ಲದ, ಕಾಕಂಬಿ ರಸದ, ಸಿಂಚನ! ಕಾದ ತಾರೆಣ್ಣೆ, ಮೈಮೇಲೆ ಸ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...