ಮೂಲ: ಅಡಾಲ್ಡ್‌ಸ್ಟೀನ್ ಕ್ರಿಸ್‌ಮಂಡ್‌ಸನ್ (ಐಸ್‌ಲ್ಯಾಂಡಿಕ್ ಕವಿ) ಕಣ್ಣಿನ ಬೆಳಕನ್ನು ಅಳಿಸಿ ಬಿಡುವ ಚೆಂದುಟಿ ನಗುವನ್ನೂ ನಂದಿಸಿ ಬಿಡುವ ಆಳ ಕರಾಳರಾತ್ರಿಗೆ ತನ್ನದೇ ಆದ ಬೆಳಕಿದೆ ತನ್ನದೇ ಉಲ್ಲಾಸವಿದೆ ಅದು ಎಂದೂ ಹತ್ತದ ಬೆಳಕಿನ ಹಾಸ ಅದು ಎ...
ಇರುವಿಗರಿವೇ ಮರೆವು, ಮರೆವಿಗೆ ಅರಿವೆ ಇರುವಿನ ಪರಿಯು, ಈ ಪರಿ ಹರಿವ ಇರುವಿನ ಅರಿವೆ ಹಿಗ್ಗಿನ ಸಮರಸದ ಬಾಳು! ಈ ಘನದ ನೆಲೆ ಪಿಂಡಗೊಂಡಿಹ ಆ ಮಹತ್ತಿನ ಉಂಡೆ ಗರ್ಭೀ- ಕರಿಸಿ ಮೊಗ್ಗಾಗಿಹುದು ಮನದುನ್ಮನದ ಬಯಲಿನಲಿ ॥೧॥ ಮನದ ಶೂನ್ಯ ಸ್ಥಿತಿಯು ಪೂರ್ಣದ...
ಅವನ ಒಂದು ಮಾತಿಗೆ ಕಾಯುತಿದ್ದಾರೆ ಜನ ಅವ ಮಾತ್ರ ಮಾತಾಡುವುದಿಲ್ಲ ಭಿತ್ತಿಮುಖಿ ತೀರ ಮೌನಿ ಮಾತು ಮಾತಾಡಿ ಆಗಿಲ್ಲವೇ ಸಾಕಷ್ಟು ಇಷ್ಟೂ ಕಾಲ ಮಾತಾಡಿ ಕೊನೆ ಮುಟ್ಟಿದವರೇ ಇಲ್ಲ ಮಾತು ಮಾತಿನ ನಡುವಣ ಶೂನ್ಯತೆಯಷ್ಟೆ ಅರ್ಥಗರ್ಭಿತ ಮೌನಕಣಿವೆಯ ಅಗಾಧತೆ ...
ಸೆಲ್ಫೀ ಹಿಡಿದು ಸಂಭ್ರಮಿಸುತ್ತಿರುವ ಅವರು ನಮ್ಮ ನಾಡಿನವರಲ್ಲ ಬಿಡು ಭಂಟನೆ ಇಂದು ಜುಲೈ ಐದು, ಎರಡುಸಾವಿರದ ಹದಿನೈದು ಬದುಕಿದ್ದರೆ ಕಾಸರ್‌ಬಾನು, ಅವಳ ಮಗುವಿಗೆ ಈಗ ಹದಿಮೂರರ ಹರೆಯ ಮೂಡುತ್ತಿತ್ತು. ನಿಮ್ಮ ರಕ್ತ ಸಿಕ್ತ ಕ್ರೌರ್ಯದಲ್ಲಿ ಬದುಕುಳಿದ...
ಸಾಕು ತಾಯಿ, ಹಾಲು ನಿನ್ನ ಎದೆಯ ಹಾಲು ಬೇಡ ಇನ್ನು ರಕ್ತ ನಿನ್ನ ಒಡಲ ರಕ್ತ ನನ್ನ ತಪ್ಪು ನೂರು ನಿನ್ನ ಕೋಪಕಶಕ್ತ ಬಗೆದೆ ನಿನ್ನ ಒಡಲ ಗಣಿಯ ಹೆಸರಿನಲ್ಲಿ ಜೊತೆಗೆ ಕುಡಿದೆ ರಕ್ತ ತೈಲ ರೂಪದಲ್ಲಿ ನಿನ್ನ ಕರುಳ ಸವರಿ ಮಾಡಿದೆ ನಾ ಹೆದ್ದಾರಿ ಇಂಥ ಪಾಪ ...
ಮೂಲ: ಗನ್ವರ್ (ನಾರ್ವೇಜಿಯನ್ ಕವಿ) ಬೆಳಕು ನುಗ್ಗುತ್ತದೆ ತೆರೆದ ರೂಮಿನೊಳಕ್ಕೆ ಮೌನದ ಅಲೆಗಳಂತೆ. ಕೆಂಪು ಕ್ಯಾಕ್ಟಸ್ ಹೂವು ಎಲ್ಲಕಡೆ ಚೆಲ್ಲಿವೆ, ನಾಚುತ್ತ ನೋಡಿವೆ ನುಗ್ಗುತ್ತಿರುವ ಬೆಳಕಿನತ್ತ ಏನೋ ನಿರೀಕ್ಷಿಸುತ್ತ. ಹಸಿರು ಎಳೆಗಳ ನಡುವೆ ಹೆಪ...
ಕಾದಿಹಳು ಭೂದೇವಿ, ನೀವು ಬಾರಿರಾ! ದಿವ್ಯ ತೀರ್ಥ ತಾರಿರಾ! ಬಿಸುಸುಯಿಲ ಬೇಗೆ ಹೊಮ್ಮಿ ಆಗಸವ ತಟ್ಟಿ ತಿವಿಯೆ ಹರಣವನೆ ಕೊರಳಲಿರಿಸಿ ಕರುಣೆಯನು ಕೇಳುತಿಹಳು ಕ್ಷಣ ಕ್ಷಣವು ನಿಮ್ಮ ನೆನಸು ಆನುದಿನವು ನಿಮ್ಮ ಕನಸು ಮರದುದಿಗೆ ಕಣ್ಣನಿರಿಸಿ ನೋಡುವಳು ಕ್...
ಆಕಾಶದಲ್ಲಿ ಧ್ವನಿ-ದೂರದಿಂದ ಕೃಷ್ಣ ಕೃಷ್ಣ ಜಯ ಕೃಷ್ಣ ಮುರಾರೇ ವಿತೃಷ್ಣನಾದೆನು ನಾ ಬಾಯಾರೆ ದ್ವಾರಕೆ ಬಾಗಿಲ ತೆರೆಯದೊ ಬಾರೆ ಉತ್ತರೆಯಿಂದುತ್ತರವನು ತಾರೆ. ಕೃಷ್ಣ ಕೃಷ್ಣ ಜಯ ಜಯ ತ್ರಿಪುರಾರೇ ಶರಪಂಜರದಲಿಯೊರಗರಲಾರೆ ಕೃಷ್ಣ ಕೃಷ್ಣ ಜಯ ಜಯ ಕೃಷ್ಣ ...





