ಆರತಿ

ಪಣೆಗೆ ಕುಂಕುಮವಿಟ್ಟು ಪೂರ್ವ ನಾರಿಯು ನಿಂದು ಕಣುಗಳಿಂದವೆ ಕರೆದು ಕಮಲಿನಿಯ ಬಳಿಸಂದು ಮಣಿಕಿರೀಟವ ಧರಿಸಿ ಮನಕೆ ಮಿತ್ರನ ತಂದು ಇಣಿಕಿ ನೋಡುತಲಿಹಳು ರಮಣ ಬರುತಿಹನೆಂದು. ಹೊಳೆವ ದೀವಿಗೆಯಿಟ್ಟು ಮಂಗಳಾರತಿ ಪಿಡಿದು ಅಳಿಯ ರಾಗದಿ ಹಾಡಿ...

ವಿಶ್ವಾಂಜಲಿ

ರಾಗ ದೇಶ ಜಿಲ್ಲಾ-ತ್ರಿತಾಲ ಏನೆದ್ಭುತ ಮಹಿಮೆಯೊ ನಿನ್ನ ಪ್ರಭೋ ಪೊಗಳಲಳವೆ ಎನ್ನ || ಪಲ್ಲ || ತಡೆಯರಿಯದೆ ಹರಿಯುವ ಗಗನತಲಂ ನಿನ್ನೊಡೆತನದ ಪತಾಳೆಯೊಲು ವಲಂ ನೆಳಲಿಸಿ ಹೊದಿಪುದು ವಸುಮತಿಯಗಲಂ ನಿನ್ನ ಪ್ರಭಾವವನು || ೧...

ನಿನ್ನ ಪ್ರೀತಿಸಿ ನಾನು ನಿನಗಿತ್ತ ಮಾತನ್ನು

ನಿನ್ನ ಪ್ರೀತಿಸಿ ನಾನು ನಿನಗಿತ್ತ ಮಾತನ್ನು ಮುರಿದೆ ನಿಜ, ನೀನೊ ಮುರಿದಿರುವೆ ಎರಡೆರಡು ಸಲ; ಒಮ್ಮೆ ಹಾಸಿಗೆಯಲ್ಲಿ ಕೊಟ್ಟ ಭರವಸೆಯನ್ನು, ಮತ್ತೆ ಕೂಡಿಕೆಯಾಗಿ ಕೊಟ್ಟ ಮಾತನ್ನು ಸಹ. ಯಾಕೆ ದೂರಲಿ ಹೇಳು ಮಾತ ಮುರಿದವಳೆಂದು,...

ಯೆಂಡದ್ ತೊಂದ್ರೆ

  ಬಿಟ್ಟಿದ್ದೆ ಯೆಂಡ ಅಲ್ಲಿ- ನೆಟ್ಗೆ ಬಂದೆ ಇಲ್ಲಿ. ಎಲೇಲೇಲೇ ರಸ್ತೆ! ಯೇನು ಅವ್ವೆವಸ್ತೆ! ಮೈ ಕೈ ಯೆಲ್ಲ ಮುದರಿ ಯಾಕೇ ಕುಣೀತಿ ಕುದರಿ? ಕೊಟ್ಟೆ ಯಲ್ಲ ಗಸ್ತು! ಕುಡಿದ್ದೀಯ ರಸ್ತೆ! ಚಂದ್ರನ್ ಮುಕವೇಕ್...

ಭಾಟಘರಸಾಗರ

ಪರಶುರಾಮನ ಮಹೋತ್ತುಂಗ ದೋರ್‍ದಂಡ ಉ- ದ್ದಂಡ ಸಹ್ಯದಸಹ್ಯ ಸಾಮರ್‍ಥ್ಯದಲಿ ನೀಡಿ- ಕೊಂಡಿದೆ. ಇದೊ ಅಪರಜಲಧಿಯು ಪರಾಜಿತರ ನಯದೊಳಂಭೋದಕಂಭಗಳಿಂದ ರಾಜ್ಯಾಭಿ- ಷೇಕ ಮಾಡುವದು ವರ್‍ಷಕ್ಕೆ. ಸ್ವಚ್ಛಂದನಿ ರ್‍ಬಂಧ ಸ್ವಾತಂತ್ರ್ಯದೊಳು ನೀರೆ ತೀಡುವಳು ಸೀ- ಮಾರೇಖೆ. ಕಾಡಬೇಡರ...

ಜವಾಹರಲಾಲ ನೆಹರೂ

ಮೋತಿಲಾಲ್ ಕೈಮುತ್ತು ಭಾರತಿಯ ಪದಕಿತ್ತು ಸ್ವಾತಂತ್ರ್ಯದೊಡವೆಯಂ ಮಾಡಿ ತೇಜಮನಿತ್ತು ಪೋದನಾ ಸಾಹಸಿಗ ಸಗ್ಗಮಂ ಸಾರಿದನ್ ಸಾಧಿಸಿದ ರಾಜ್ಯಮನ್ ಕೆರ್ಚಾಳು ಕೊನೆಗರ್ದ ಸತ್ಯಾಸಿಧಾರೆಯಿಂ ಧರ್ಮಕವಚವನುಟ್ಟು ಭಾರತಿಯ ಬಿಡುಗಡೆಗೆ ವೀರಪಣಮಂ ತೊಟ್ಟು ಧಾವಿಸಿದ ವೀರನದೊ ಸಿಂಹನಾದಂ ಗೆಯ್ದು...

ಕವಿತೆ

ಕವಿತೆ ಮತಿಜಲ ನಲಿನ, ವ್ಯಸನ ವನಧಿಯ ಪುಲಿನ, ಕವಿತೆ ಗಾನದ ಸುಗ್ಗಿ, ಸೊಬಗ ತೆನೆಸೂಡಿ, ಕವಿತೆ ನವರಸ ರಂಗ ವದು ತ್ರಿವೇಣಿಯ ಸಂಗ ಮಿದೊ ನೆನಸು ಕನಸು ಮನಸಿನ ತ್ರಿತಯಮೊಡಗೂಡಿ ೬ ಧ್ಯಾನ ಗನಿಗಳ...

ಇಷ್ಟು ಕೊರತೆಗಳಿದ್ದೂ ನನ್ನೆದೆಯನ್ನಾಳುವ

ಇಷ್ಟು ಕೊರತೆಗಳಿದ್ದೂ ನನ್ನೆದೆಯನ್ನಾಳುವ ಇಂಥ ಅದ್ಭುತ ಶಕ್ತಿ ಎಲ್ಲಿಂದ ಪಡೆದೆಯೆ ? ಕಣ್ಣಿಂದ ಕಂಡದ್ದ ಸುಳ್ಳೆಂದು ಹುಸಿನುಡಿವ ಕಪ್ಪು ಬಿಳುಪೆಂದು ವಾದಿಸುವ ಬಲ ನೀಡಿದೆಯೆ ? ಕೆಟ್ಟದೂ ಒಳಿತೆನಿಸುವುದು ಹೇಗೆ ನಿನ್ನಿಂದ ? ಯಾರು...

ತೊಣ್ಣೂರಿನ ಸೊಬಗು

ಪ್ರಕೃತಿ ದೇವಿಯೆ ಮೈ ತಾಳಿ ನಿಂತಿಹಳು ತೋಣ್ಣೂರು ಗ್ರಾಮದಲ್ಲಿ ಹಸಿರು ಸೀರೆಯ ಮೇಲೆ ಹಳದಿಯರಮಣಿ ಕಿಲಕಿಲನೆ ನಗುತಿಹಳು ಮನವ ಸೆಳೆಯುತಲಿ ಸುತ್ತ ನಿಂತ ಶಿಖರಗಳ ಸಾಲುಕೈಚಾಚಿ ಕರೆಯುತಿದೆ ನೋಡ ಬನ್ನಿ ಸುಂದರ ವನಪುಷ್ಪರಾಶಿಗಳ ನಡುವೆ...

ಯೆಂಡ

ಯಂಗೀಸ್ಗ್ ಎಂಗೆ ಅರಸ್ನ ಕುಂಕ್ಮ- ಗಂಡೀಗ್ಗ್ ಅಂಗೆ ಯೆಂಡ. ವುಟ್ಟದ್ ಮನ್ಸ ರುಂಡಾಂತ್ ಅಂದ್ರೆ ಯೆಂಡದ್ ಬುಂಡೆ ಮುಂಡ. ೧ ಬೂಮೀ ಜನಗೊಳ್ ಯೆಂಡದ್ ಮರಕೆ ಊವು ಕಾಯ್ ಇದ್ದಂಗೆ. ಯೆಂಡದ್ ಮರಕೇ ಬತ್ತಿ...