ಯೇಸು-ಕೃಷ್ಣ

ರಾಗ ಬೇಹಾಗ- ತಾಳ ತ್ರಿವಟ ಶ್ರೀ ಹರಿಯೇ ಬಳಲಿದೆ ಎಂತು ನಮಗಾಗಿ ನರಲೀಲೆಯನಾಂತು! || ಪಲ್ಲ || ಶುಭಜನನಕೆ ಸೆರೆಗತ್ತಲೆಯೊ ಹಿತ ವಾದುದು ೧ಮಂದೆಯ ಗೋದಲೆಯೊ? ೨ಮಿಸರಕೆ ನುಸುಳಲು ತಾಯುಡಿಯೊಂಟೆಯೊ ? ಯಮುನೆಯೀಸೆ ತಂದೆಯ...

ತನ್ನ ಇನಿಯಳನ್ನು ಹಳಿದವರ ಬಗ್ಗೆ

ಕಣ್ಣನ್ನರೆ ಮುಚ್ಚಿಕೊ, ಹಾಯಾಗಿ ಸಡಿಲಿಸಿಕೊ ತಲೆಗೂದಲನ್ನು, ಹಿರಿಜೀವಗಳ, ಅವರ ಹೆಮ್ಮೆಗಳ ಕುರಿತು ಕನಸು ಕಾಣು ಅಲ್ಲಸಲ್ಲದ್ದೆಲ್ಲ ಆಡಿದ್ದಾರೆ ಜನ ಎಲ್ಲ ಕಡೆ ನಿನ್ನನ್ನು ಹಳಿದು, ಆದರೀ ಗೀತವನು ಹಿರಿಜೀವಗಳ ಜೊತೆ, ಅವರ ಹೆಮ್ಮೆಗಳ ಜೊತೆ...

ಸಮಾದಾನ

ಕುಡದ್ಬುಟ್ಟು ಮೋರೀಲ್ ನಾ ಬಿದ್ಕೊಂಡ್ ಇವ್ನೀಂತ್ ಏಳಿ ಎಲ್ಲಾರ ನೆಗ್ತಾರೆ ಸುಂಸುಂಕೇನೆ. ಎಲ್ರಂಗೇ ಮನ್ಸ-ಇವನೇನೋ ಒಸ್ ತಪ್ದಾಂತ ಅನ್ನಾಲ್ಲ-ಬೆಪ್ಗಳ್ಗೆ ಏನ್ ಏಳಾನೆ ! ೧ ಆಕಾಸ್ದಲ್ ಸೂರ್‍ಯಾವ್ನೆ-ದೊಡ್ಡ್ ಮನ್ಸ-ವಾಸ್ತವ- ಗ್ರಾಸ್ತ್ನಂತೆ ಅಗಲೆಲ್ಲ ತಿರಗಾಡ್ತಾನೆ; ಸಂಜೆ...

ಹರಕೆ

ಮಂದಗತಿ ಮಂದತರವಾಗಿಬಿಟ್ಟಿದೆ; ಹುಲ್ಲೆ- ಗಂಗಳೊಳು ಚಂಚಲತೆ ಕುಡಿಯೊಡೆಯಲಿದೆ; ಉಡುಗಿ ಮೈನಯದ ನೆಯ್ಗೆ ತೊಪ್ಪಲು; ಹರೆಯ ಚಿಗುರಡಗಿ ನೆತ್ತರದ ನೆರೆಗೆಂಪು ಹಳಸುತಿದೆ ಭರದಲ್ಲೆ. ಹಾರು ಹಕ್ಕಿಯ ಪುಚ್ಚವೆಣಿಸಲೆಳಸಿದ ಬೆಡಗಿ! ವಿಜಯ ವಿಠ್ಠಲನ ಗುಡಿ ಭಣಗುಡುವ ತೆರದಲ್ಲೆ...

ಕೇಳಿಸದ ಕರೆ

(ಹಾಡು) ಗಿಳಿಬಾಗಿಲ ತೆರೆಯೆಯಾ? ಹೂ ದನಿಯಿನೆನ್ನ ಕರೆಯೆಯಾ? ಬದಲು ಬಿದುವ ತೋರೆಯಾ? ತಾ ರಾಕಟಾಕ್ಷ ಬೀರೆಯಾ? ೪ ಹಣತೆಹುಳವ ನಂದಿಸಿ, ಬಾ ವಲಿಯ ತಕ್ಕಡಿಯೊಂದಿಸಿ, ಇರುಳ ಮಳಿಗೆ ಮುಗಿಯಿತು, ನೈ ದಿಲೆಯ ಬೀಗ ಬಿಗಿಯಿತು....

ಮುದಿ ಪೆನ್‌ಷನ್‌ದಾರನ ಅಳಲು

ಮಳೆಗೆ ಸಿಗದಂತೆ ನಿಂತಿದ್ದರೂ ಈಗ ಮುರಿದೊಂದು ಮರದ ಕೆಳಗೆ, ಎಲ್ಲ ಕುರ್‍ಚಿಗೂ ಮೊದಲು ಬೆಚ್ಚನೆಯ ಜಾಗದಲಿ ಕಾದಿರುತ್ತಿತ್ತೊಂದು ಕುರ್‍ಚಿ ನನಗೆ ರಾಜಕಾರಣ, ಪ್ರೇಮ ಇತ್ಯಾದಿ ಚರ್‍ಚಿಸುವ ಗೋಷ್ಠಿಯೊಳಗೆ, ಕಾಲ ಏಕಾ‌ಏಕಿ ನನ್ನ ಪರಿವರ್‍ತಿಸುವ ಮುಂಚೆ...

ರತ್ನನ್ ಕುಸಿ

ಯೆಂಡ ಮುಟ್ದಾಗ್ಲೆಲ್ಲ ನಂಗೆ ಏನೋ ಕುಸಿಯಾಗೈತೆ! (ಕುಡಕನ್ ಮಾತ್ ಅಂದ್ರಂಗೆ ಅಲ್ಲ! ನೆಗ ಉಕ್ಕ್ ಬರತೈತೆ?) ೧ ಈಚಲ್ ಮರದಲ್ಲ್ ಮಲಗಿದ್ದ್ ಯೆಂಡ ಕಟ್ಟಿದ್ ಮಡಕೇಗ್ ಅರ್‍ದು ಬಾರಿ ಪೀಪಾಯ್ನಾಗ್ ಇಳಕೊಂಡಿ ತುಂಬ್ಕೋಂತೈತೆ ಸುರ್‍ದು....

ಪಾಶ

ಗಾಳಿ ಸುಳಿಯದ ಮನೆಯ ಹೊಗೆ ಹಾದಿಸಿಗದೆ ಒಳ- ಗೊಳಗೆ ಹಬ್ಬುತ, ಉಸಿರ ಕಟ್ಟುವೊಲು, ಇರುಳು ಮುಗಿ- ಲಲಿ ಅಭ್ರ ಕವಿಯುವವು ಚಿಕ್ಕೆಬೆಳಕನು; ಬೆಂದು ಬಳ ಲಿದ ಹೆಂಣುಮನ ಕಂದುತಿದೆ ಕಂದುತಿದೆ ನೊಂದ- ನುಡಿಯೊಂದರಲಿ; ಸರಸ...

ಪಾತರಗಿತ್ತಿಗೆ

ಮರಿತನದ ಮರವೆಯಿಂ ಮರಸಿ ತಂದಪೆಯಾ? ಚಿತ್ರಾಂಜಲಿಯ ಗ್ರೀಷ್ಮ ಸಂತಾಪಕೆನ್ನ? ನಸೆದ ನಲವಿನ ನೆನಹಿನಂಜನದಿ ನನ್ನ ಸೋರೆದೆಯ ಸೇದೆಯಂ ಸವರೆ ಬಂದಪೆಯಾ? ೪ ಸಾಕು, ನಿನ್ನುಪಚಾರಗಳನೊಲ್ಲೆನದನು ಇನಿತು ಬೇಗನೆ ಮರೆತೆಯಾ? ನಾನುಮಾಕೆ ಈರ್‍ವರಾವಿದ್ದೆ ವಿಲ್ಲಿಯೆ; ನಿನ್ನನಾ ...

ನೀ ಮುದುಕಿಯಾದಾಗ

ನೀ ಮುದುಕಿಯಾಗಿ ಕೂದಲು ನರೆತು ಕಣ್ಣಲ್ಲಿ ನಿದ್ದೆ ತುಂಬಿರಲು, ಬೆಂಕಿಗೂಡಿನ ಬದಿಗೆ ಕುಳಿತು ಈ ಪುಸ್ತಕವ ಕೈಗೆತ್ತಿಕೊ. ಓದು ನಿಧಾನವಾಗಿ, ಪ್ರಾಯದ ದಿನಗಳಲ್ಲಿ ನಿನ್ನ ಕಣ್ಣಲ್ಲಿ ಹೊಮ್ಮುತ್ತಿದ್ದ ಮಧುರ ನೋಟ, ದಟ್ಟನೆ ನೆರಳ ಸ್ಮರಿಸು...