ಗುಟ್ಟು

ನಾ ಕುಡದಾಡೋ ಪದಗೊಳ್ನೆಲ್ಲ ಬೀದೀಯೋರ್ ಜನಗೋಳು ಈಟೊಂದ್ ಒಗಳಾಕ್ ಏನ್ ಕಾರಣಾಂದ್ರೆ ಯೋಳ್ತೀನ್ ಚೆಂದಾಗ್ ಕೇಳು. ೧ ಯಿದ್ದೇಗೆಲ್ಲ ದೇವ್ರಾಗೌಳೆ- ಔಳ್ ಆ ಸರಸೋತಮ್ಮ; ಯೀಣೆ ಯಿಡದಿ ಔಳ್ ಆಡಿದ್ರೆ ನಾ ಕುಡದ್ ಆಡ್ತೀನಮ್ಮ!...

ನೀನು ಮರೆವುದೆ ನನ್ನ?

ರವಿ ಶಶಿಯ ಮತ್ತೆ ನೀನಿತ್ತ ಬೆಳಕಲಿ ಗುರುತಿ- ಸುವೆ, ಗುರುವೆ ! ಗುರು ಬುಧರ ಹಾಸಂಗಿಯಲ್ಲಿ ಲೆತ್ತ- ವಾಡುತಿರೆ ಹೊತ್ತು, ಚಿಕ್ಕೆಯ ಪಟ್ಟದಲ್ಲದರ ಲೆಕ್ಕವನು ಗುಣಿಸಿ ಎಣಿಸುವೆ, ಮಲೆಯ ಬನಬನವ ತರಿವ ಮೂಡಲಗಾಳಿ, ಹಸಿರು...

ಮಹಾತ್ಮರ ಉಪವಾಸ

[ರಕ್ತಾಕ್ಷಿ ಸಂ| ದ ಭಾದ್ರಪದ ಬ|೫ (೧೪-೯-೧೯೨೪)ಯಿಂದ ಆಶ್ವೀಜ ಶು।೧೧ (೮—೧೦-೧೯೨೪) ಯ ವರೆಗೆ ಮಹಾತ್ಮಾ ಗಾಂಧಿಯವರು ಧಿಲ್ಲಿಯಲ್ಲಿ ಮಾಡಿದ ೨೧ ದಿನಗಳ ಉಪವಾಸ] ಮಂಜಿನೇಕಾಂತದಲಿ ಶ್ರೀಹರಿಯ ಹಂಬಲಿಸಿ, ಹೃದಯ ಕ್ಷುಧಯನ್ನೂಡುತೊಡಲ ಹಸಿವಿಂದಂ, ಮನದ...

ಎಂದೂ ಒಪ್ಪಿಸಬೇಡ ಹೃದಯ ಪೂರಾ

ಎಂದೂ ಒಪ್ಪಿಸಬೇಡ ಯಾವ ಹೆಣ್ಣಿಗೂ ನಿನ್ನ ಹೃದಯ ಪೂರಾ. ಖತವೆನಿಸಿತೊ ಪ್ರೀತಿ, ಭಾವೋದ್ರಿಕ್ತ ಹೆಣ್ಣುಗಳು ಚಿಂತಿಸುವ ಅಗತ್ಯವನ್ನೆ ಎಳ್ಳಷ್ಟೂ ಕಾಣರು, ಒಂದೊಂದು ಮುತ್ತಿಗೂ ಪ್ರೇಮ ಮಂಕಾಗುತ್ತ ತೀರಿಕೊಳ್ಳುವುದೆಂದು ಕನಸಲ್ಲೂ ತಿಳಿಯರು, ಸುಂದರವಾದದ್ದೆಲ್ಲ ಸಣ್ಣ ಅವಧಿಯ...

ಸನ್ಯಾಸಿ ರತ್ನ

ಯಿಂದ್ ಒಬ್ಬ ಬೌದ್ದ ಸನ್ಯಾಸಿ ಮರದಡಿ ತನ್ನ ಬಟ್ಟೆ ಆಸಿ ಕುಂತಿದ್ದ ಪದುಮಾಸನಾಕಿ- ಕಣ್ ಮುಚ್ಚೋದ್ ಒಂದೇನೆ ಬಾಕಿ! ೧ ಕಾಲಿಗ್ ಔನ್ ಮುಂದಾಗ ತೊದಲು ಬಂದಂಗೆ ಯೆಣ್ ಒಬ್ಳು ಓದ್ಲು- ಘಮ್ಮಂತ ವಾಸ್ನೆ...

ಗುಮ್ಮ

ಗುಮ್ಮ ಬಂದನು ಸುಮ್ಮನಿರು ಕಂದ, ಅಬ್ಬಬ್ಬ, ಏನವನ ಕಣ್ಣು? ನಾಲಿಗೆಯೇನು ಕೆಂಪಗಿದೆ, ಕತ್ತಲಲಿ ಕೆಂಡ ಕಂಡಂತೆ ! ಮೆಲ್ಲಗೆ ಬರುವ, ಸದ್ದು ಸದ್ದೆಲೆ ಕಂದ, ಸುಮ್ಮನಿರು, ಅಳಬೇಡ ! ಕೇಳಿ ಇತ್ತಲೆ ಬರುವನೇನೊ ಗುಮ್ಮ;...

ನಂಬಲೆಂತು?

ರಾಗ ಧನ್ಯಾಸಿ- ಆದಿ ತಾಳ ನಂಬಲೆಂತು ನಾ ನೋಡುವ ಮುನ್ನ ಯದುಕುಲದಾ ಲೀಲೆಯ ನಿನ್ನ? ||ಪಲ್ಲ|| ನೋಡದೆ ನಂಬಲು ಬಲ್ಲವನಲ್ಲ, ನೋಡಿಸಿ ನಂಬಿಸೊ ಬಲ್ಲವ ನಲ್ಲ! ||ಅನು|| ೧ನನ್ನ ಮನದ ಮೋಹಮೇಕೆ ಹೀರೆ? ೨ಏಕೆದೆಯಾನೆಯ...

ಮೆಲ್ಲಗಡಿಯಿಡು ಒಲವೆ

ಬೆಳ್ಳಿ ಬಂಗಾರ ಕಿರಣಗಳಲ್ಲಿ ಹೆಣೆದ ಸ್ವರ್‍ಗದ ಕಸೂತಿವಸ್ತ್ರ ನನ್ನಲ್ಲಿದ್ದಿದ್ದರೆ, ನಡುಹಗಲು ಕಾರಿರುಳು ಸಂಜೆ ಬೆಳಕುಗಳ ಬಿಳಿ ನೀಲಿ ಮಬ್ಬು ಪತ್ತಲಗಳಿದ್ದಿದ್ದರೆ, ಹಾಸಿಬಿಡುತ್ತಿದ್ದೆ ನಿನ್ನಡಿಗೆ ಅವನ್ನೆಲ್ಲ; ನಾ ಬಡವ, ಬರಿ ಕನಸು ಬಳಿಯಿರುವುದೆಲ್ಲ; ಕನಸುಗಳನೇ ಹಾಸಿ...

ಪ್ರಾರ್‍ತನೆ

ಬ್ರಮ್ಮ! ನಿಂಗೆ ಜೋಡಿಸ್ತೀನಿ ಯೆಂಡ ಮುಟ್ಟಿದ್ ಕೈನ! ಬೂಮೀ ಉದ್ಕು ಬೊಗ್ಗಿಸ್ತೀನಿ ಯೆಂಡ ತುಂಬ್ಕೊಂಡ್ ಮೈನ! ೧ ಬುರ್ ಬುರ್ ನೊರೆ ಬಸಿಯೋವಂತ ಒಳ್ಳೆ ವುಳಿ ಯೆಂಡ ಕೊಡ್ತೀನ್ ನನ್ದು ಪ್ರಾರ್‍ತ್ನೆ ಕೇಳು ಸರಸೋತಮ್ಮನ್...

ಒಡಲು

ಒಡಲು-ಒಡೆಯನು ತೀರಿಕೊಳಲು ಹುಟ್ಟಿದ ಮನೆಗೆ ಬಂದ ಹೆಣ್ಣಿನ ಹಾಗೆ. ಅವಳಣ್ಣ ತಮ್ಮದಿರು ತಮ್ಮದೆನುವೊಲು ಅವಳ ಆಸ್ತಿಪಾಸ್ತಿಯ ಬಳಿಸಿ ಬಿಂಕದೋರುವರು; ಅವಳೋ ಇವರ ಒಗೆತನವ ಕಿಳ್ಳಿಕೇತನು ಗೊಂಬೆ ಕುಣಿಸುವೊಲು ಕುಣಿಸುವಳು. ಸರಸದುರವಣಿಗೆ ಮೆರವಣಿಗೆ. ಕಣ್ಣೀರು ತ-...