ಲೆಕ್ಕ ಹಾಕಿಲ್ಲ ಎಷ್ಟು?

ಲೆಕ್ಕ ಹಾಕಿಲ್ಲ ಎಷ್ಟು? ಲೆಕ್ಕಕ್ಕೆ ಸಿಗದವುಗಳೆಷ್ಟೋ? ಹೆತ್ತ ಕಂದಮ್ಮಗಳನ್ನೆ ಹೆಣ್ಣೆಂದು ಜರೆದು ಹೆರಳು ಹಿಡಿದು ಕುಟುಕಿದ ಹೆಂಬೇಡಿಗಳೆಷ್ಟು? ಮುಗ್ಧ ಪ್ರೇಮದ ಗೀತೆಗೆ ಮದಿರೆ ಹಾಡನು ಕೂಡಿಸಿ ಮಂಚಕ್ಕೆ ಎಳೆದು ಮಾನ ಪ್ರಾಣ ಮರ್ಧಿಸಿದ ನಯವಂಚಕರೆಷ್ಟು?...

ಏಣಿ

ಮೇಲೇರಬೇಕು ಮುಟ್ಟಬೇಕಿದೆ ಗುರಿಯ ಮತ್ತೆ ನಿಲುಕಂತಿದೆ ಎತ್ತರದಿ ಏರಲೇಬೇಕು ಏಣಿ ಏಣಿಗೆ ಹತ್ತಿರಕೆ ಬಂದವರ ಎತ್ತರಕೆ ಏರಿಸುವುದೆಂದರೆ ಏನೋ ಉಮೇದು ಧೂಳಿನ ರಾಡಿ ಗಲೀಜುಗಳ ಸಹಿಸಿಕೊಳ್ಳುತ್ತದೆ ಕ್ರೋಧಗೊಳ್ಳದೆ ಮುಗ್ಧತೆಯ ಕಣ್ಣುಗಳ ಅರ್ಥೈಸಿಕೊಂಡು ಗದರದೇ ಮಜಲುಗಳ...

ಬಾಲ ಗೋಪಾಲ

ಹಾಲು ಗಲ್ಲದ ಮೇಲೆ ಗುಳಿ ಬಿದ್ದ ಚೆಂದ ನೋಡುಗನೆ ಕಣ್ಮನವ ತೆರೆದು ಸವಿ ಆನಂದ ಮುಗ್ಧ ನಗೆಯಲಿ ಗೋಪಿಗೆ ಕಚಗುಳಿಯ ಇಟ್ಟವನು ಎಳಸು ತೋಳಲಿ ಮೈಯ ಬಳಸಿ ಬಂದವನು ನೂಪುರದ ಇಂಪಿನಲಿ ಹೆಜ್ಜೆನಾದದ ಪೆಂಪಿನಲಿ...

ಹದ

ಪರರ ಜಾಡನು ಹಿಡಿದು ಪರದಾಡಬೇಡ ಪ್ರೌಢಿಮೆಯ ಪರಿಪೂರ್ಣತೆಯಲ್ಲಿ ಪರವಶನಾಗು ಮನವೇ ಅಪಸ್ವರವು ನುಡಿಯೆಂದು ಅವಮಾನ ಬೇಡ ಅವಿರತದ ಸಾಧನೆಗೆ ಅವಸರಿಸು ಮನವೇ ದುಡ್ಡನ್ನು ಗಳಿಸುವಲಿ ದೌರ್ಜನ್ಯ ಬೇಡ ದರ್ಪವನ್ನು ತ್ಯಜಿಸಿ ದಯಾಮಯಿಯಾಗು ಮನವೇ ತಮವೆಂದು...

ಸೀಮಾತೀತ ಹೆಜ್ಜೆಗಳು

ಪರದೆಯೊಳು ಪರಿಪಕ್ವ ವಾಗುವುದು ಕಷ್ಟವೆಂದು ಪರಿಧಿಯಾಚೆ ಜಿಗಿಯಲೆಣಿಸುತ್ತಿದೆ ಭಾವ ಪ್ರಪಂಚ ಸ್ತ್ರೀ ಲಾಂಚನಗಳು ಬಣ್ಣ ಕಳೆದುಕೊಳ್ಳುತ್ತಿವೆ ತಾಳಿ ಕಾಲುಂಗುರ ಪರ್ಮಿಟ್ಟುಗಳು ಪೆಟ್ಟಿಗೆ ಸೇರುವ ಕಾಲ ಸನ್ನಿಹಿತವಾಗುತ್ತಿದೆ ಸೀಮಾತೀತ ಪರಿಕಲ್ಪನೆಯ ವ್ಯಾಪ್ತಿ ಹೆಚ್ಚಿದಂತೆಲ್ಲ ಗೋಡೆಯೊಳಗಿನ ಸಣ್ಣ...

ಬಾಳು ಬವಣೆ

ಬದುಕು ಬೆಳಕಾಗಲಿಲ್ಲ ಮುಳ್ಳಿಗೆ ಸಿಕ್ಕಿಕೊಂಡ ಬಟ್ಟೆ ಮೂರಾಬಟ್ಟೆ ಅಂದಿನ ಆ ಕಾತುರ ನಿಟ್ಟುಸಿರು ಹಂಬಲಿಕೆ ಇಂದಿಲ್ಲ ಸವಿಗನಸಿಗೂ ಇಂದು ಬರ ನಿನ್ನೆ ಕಟ್ಟಿದ ಕಲ್ಪನೆಯ ಹಾಯಿ ದೋಣಿಗಳ ಸಾಲು ಇಂದು ಪಟ್ಟ ಬಿಚ್ಚಿ ಹೋಗಿ...

ಸುಗ್ಗಿಯ ಸಂಭ್ರಮ

ಸುಗ್ಗಿಯ ಹಬ್ಬವು ಬಂದಿದೆ ಅಣ್ಣ ತಂದಿದೆ ಸಂಭ್ರಮ ಸಗ್ಗದ ಬಣ್ಣ ಹಾಲಕ್ಕಿ ಒಕ್ಕಲ ಕುಂಚವು ಕುಣಿದಿದೆ ರೈತನ ಬವಣೆಯ ಕಾಲವು ಕರಗಿದೆ ಖಾಲಿಯಾ ಕಿಸೆಯದು ಝಣ-ಝಣ ಎಂದಿದೆ ಬತ್ತದ ಕಣಜವು ಉಕ್ಕೆದ್ದು ಬಂದಿದೆ ಮಾಮರದ...

ಆಧುನಿಕತೆ

ನನ್ನಪ್ಪ ದುಡಿಮೆಗಾರ ಹೆಣಗಾಡಿ ಕೊಂಡ ಗದ್ದೆಗಳ ಮತ್ತೆ ಹದಮಾಡಿ ಹಸನುಗೈದ ಅಸಲಿಗೆ ಈಗ ಅಲ್ಲಿ ಗದ್ದೆಗಳೇ ಇಲ್ಲ ಬದಲಿಗೆ ತೋಟಗಳು ತಲೆ ಎತ್ತಿದೆ ತೆಂಗು ಕಂಗು ವಾಣಿಜ್ಯ ಬೆಳೆಗಳು ನನ್ನಣ್ಣನ ಜೊತೆಗೂಡಿ ಎತ್ತರ ಜಿಗಿವಾಡುತ್ತಿದ್ದ...

ಬೂಟ್ ಪಾಲಿಶ್ ಹುಡುಗನ ಜೋಳಿಗೆ

ಮತ್ತೇನಿಲ್ಲ ಅಲ್ಲಿ ಒಂದು ಬ್ರಷು ಪಾಲಿಶ ಡಬ್ಬ ಮತ್ತೊಂದು ಚಿಲ್ಲರೆಯ ಸಂಚಿ ಕರಿ ಮಸಿಯ ಚಿತ್ತಾರ ತೊಟ್ಟಂಗಿಯ ಸುತ್ತ ತಂಡಿ ಅಡರಿದ ಕೆಟ್ಟ ಮುಂಜಾನೆಯಿರಲಿ ಜಿಟಿಜಿಟಿ ಮಳೆಯ ಜಿಗುಟು ಪ್ರಾತಃಕಾಲವೇ ಬರಲಿ ಉರಿ ಬಿದ್ದ...

ಸೀರೆಯೊಳಗಡೆ ಕಷ್ಟವಿದೆ

ಸೀರೆಯೊಳಗಡೆ ಕಷ್ಟವಿದೆ ಹಾಗೆಂದರೇನು? ಕಷ್ಟಕ್ಕೆ ಸೀರೆಯೇ ಆಗಬೇಕೇನು? ಹಾಗಿದ್ದರೆ ಬೇಡಬಿಡಿ ಸೀರೆ ತೊಟ್ಟುಕೊಳ್ಳಿ ಮೇಲಂಗಿ ಮತ್ತು ಧೋತಿ ಇಲ್ಲವೇ ಪ್ಯಾಂಟು ಮತ್ತು ಅಂಗಿ ಹಾಕಿಕೊಳ್ಳದಿರಿ ಬೇಲಿ ನಿಮ್ಮ ಸುತ್ತ ನಿಮ್ಮಷ್ಟಕ್ಕೆ ನೀವೆ ಹೆಣ್ಣು ಅಬಲೆ,...