ಲೆಕ್ಕ ಹಾಕಿಲ್ಲ ಎಷ್ಟು?

ಲೆಕ್ಕ ಹಾಕಿಲ್ಲ ಎಷ್ಟು?
ಲೆಕ್ಕಕ್ಕೆ ಸಿಗದವುಗಳೆಷ್ಟೋ?

ಹೆತ್ತ ಕಂದಮ್ಮಗಳನ್ನೆ
ಹೆಣ್ಣೆಂದು ಜರೆದು ಹೆರಳು
ಹಿಡಿದು ಕುಟುಕಿದ ಹೆಂಬೇಡಿಗಳೆಷ್ಟು?

ಮುಗ್ಧ ಪ್ರೇಮದ ಗೀತೆಗೆ
ಮದಿರೆ ಹಾಡನು ಕೂಡಿಸಿ
ಮಂಚಕ್ಕೆ ಎಳೆದು
ಮಾನ ಪ್ರಾಣ ಮರ್ಧಿಸಿದ
ನಯವಂಚಕರೆಷ್ಟು?

ಹಾದರದ ಹೆಸರಿಕ್ಕಿ
ಹಾಡುಹಗಲೇ ಹರಣ ಹಿಂಡಿದ
ಹೆಂಡಿರ ಗಂಡರೆಷ್ಟು?

ಆಸ್ತಿಯಾಸೆಗೆ ಆರತಿಯ ವರಿಸಿ
ರೂಪಸಿಯರೊಡನೆ ರಮಿಸುವ
ಘಾತುಕರೆಷ್ಟು?

ದುಡ್ಡಿಗಾಗಿ ಧರ್ಮಪತ್ನಿಯ
ಪೀಡಿಸುವ ಹತ್ಯೆಗೈಯುವ
ವರದಕ್ಷಿಣೆ ಭೂತಗಳೆಷ್ಟು?

ಅರ್ಥೇಚ, ಕಾಮೇಚ, ಧರ್ಮೇಚ
ಎಂದು ತಾಳಿಭಾಗ್ಯವ ನೀಡಿ
ಕಟ್ಟಿದ ತಾಳಿಯ ಮಾರಿ
ಕುಡಿದುಂಡು ಮೋಜು ಮಸ್ತಿಯ
ಗೈವ ಗತಿಹೀನರೆಷ್ಟು?
ಲೆಕ್ಕ ಹಾಕಿಲ್ಲ ಎಷ್ಟು?
ಲೆಕ್ಕಕ್ಕೆ ಸಿಗದವುಗಳೆಷ್ಟೋ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬರಲಿಲ್ಲ ನನ್ನವ
Next post ಅಖ್ತರ್ ಹುಸೇನ್

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…