ಹಾಲು ಗಲ್ಲದ ಮೇಲೆ ಗುಳಿ
ಬಿದ್ದ ಚೆಂದ
ನೋಡುಗನೆ ಕಣ್ಮನವ
ತೆರೆದು ಸವಿ ಆನಂದ
ಮುಗ್ಧ ನಗೆಯಲಿ ಗೋಪಿಗೆ
ಕಚಗುಳಿಯ ಇಟ್ಟವನು
ಎಳಸು ತೋಳಲಿ ಮೈಯ
ಬಳಸಿ ಬಂದವನು
ನೂಪುರದ ಇಂಪಿನಲಿ
ಹೆಜ್ಜೆನಾದದ ಪೆಂಪಿನಲಿ
ಭೂಮಿಯ ಸ್ವರ್ಗವ ಮಾಡಿ
ಹರ್ಷ ತಂದವನು
ಕೈಯ-ಕೊಳಲಿ ದನಿಗೆ
ಗೋಪಿ ಗೋವುಗಳೇ
ಮರಳು – ಹೆತ್ತ ತಾಯಿಯ
ಋಣವ ತೀರಿಸಿ ನಿಂತವನು
*****