ಕೋಲು ಕೋಲನ್ನ ಕೋಲೇ

ಕೋಲು ಕೋಲನ್ನ ಕೋಲೇ ರನ್ನದ ಕೋಲು.... ||ಪ|| ಶಾಲು ಬಣ್ಣದ ಹೊದ್ದೋನ್ಯಾರೆ ಲೋಲು ಕಿನ್ನುರಿ ನುಡಿಸೋನ್ಯಾರೆ ಬಾಲವೃದ್ಧರಿಗೆಲ್ಲ ಮೋಡಿಯ ಮಾಡೋನ್ಯಾರೆ ||ಅ.ಪ|| ಬಾವ್ಯಾಗೆ ಜಲಬತ್ತಿ ಬಾಯಾರಿ ನಾವೆಲ್ಲ ಇರುವಾಗ ಕಾವಾಳದೊಳಗೊಂದು ಕೋಲ್ಮಿಂಚು ಹೊಳೆದಾಂಗ ದೇವಾಲಯದೊಳಗಿಂದ...

ಅಕ್ಷರ ಜ್ಯೋತಿ

ಅಕ್ಷರ ಜ್ಯೋತಿಯ ಬೆಳಗೋಣ ನಾವ್ ಅಕ್ಷರ ಸುಖವನು ಪಡೆಯೋಣ ||ಪ|| ಬಾಳಿನ ನೆಮ್ಮದಿ ಸುಖ ಸೌಭಾಗ್ಯದ ಮನ್ವಂತರಕಿದು ಮೊದಲ ಪಣ ನೂತನ ಸಮಾಜ ಕಟ್ಟೋಣ ನಾವ್ ಭವ್ಯ ಭಾರತವ ಬೆಳೆಸೋಣ ||೧|| ಅಜ್ಞಾನವೆಂಬ ಕತ್ತಲೆ...

ನಗ್ತಾರಲ್ಲೋ ತಮ್ಮಾ

ನಗ್ತರಲ್ಲೋ ತಮ್ಮ ನಮ್ಮನ್ನು ನಗ್ತಾರಲ್ಲೋ ಅಣ್ಣಾ ||ಪ|| ಎದುರಿಗೆ ಕೊಂಡಾಡಿ ಭಾಷಣ ಬಿಗಿದಾಡಿ ಹಿಂದಿಂದೆ ನಗ್ತಾರೋ ತಮ್ಮಾ ನಮ್ಮನ್ನು ನಗ್ತಾರಲ್ಲೋ ಅಣ್ಣಾ ||ಅ.ಪ.|| ನೀನೇ ದೇಶಕ್ಕೆ ಬೆನ್ನೆಲುಬು ಅಂತಾರೆ ತಾಂಡವ ತುಳದಾರೆ ಮ್ಯಾಲೆ ದೇಶಕ್ಕೆ...

ದುಡಿಮೆಯೆ ದೇವರು

ದುಡಿಮೆಯೆ ದೇವರು ದುಡೀ ದುಡೀ ಅಕ್ಷರ ಬ್ರಹ್ಮನ ಪಡೀ ಪಡೀ ||ಪ|| ಭೂಮಿ ತಾಯಿಯು ದುಡಿತಾಳೆ ಸೂರ್ಯ ಚಂದ್ರರು ದುಡಿತಾವೆ ಗಾಳಿ ಬೀಸುತಾ ನೀರು ಹರಿಯುತಾ ಬೆಂಕಿ ಉರಿಯುತಾ ದುಡಿತಾವೆ ||೧|| ದುಡಿಮೆಯಿಂದಲೇ ಕೋಟೆ...

ಎಲ್ಲಿದೆ ಧರ್ಮ

ಧರ್ಮಾ ಧರ್ಮಾ ಅಂತಾರೋ ಎಲ್ಲಿದೆ ಧರ್ಮಾ ತೋರಿಸರೋ ||ಪ|| ನಮ್ಮದು ಧರ್ಮಾ ನಿಮ್ಮದು ಧರ್ಮಾ ಅವರದು ಧರ್ಮಾ ಅಂತಾರೆ ಜನಗಳ ನಡುವೆ ಗೋಡೆಗಳೆಬ್ಬಿಸಿ ಆಗಸ ಕಾಣದೆ ನಿಂತಾರೆ ||೧|| ಕೊಂಬಿ ರೆಂಬಿಗಳ ಜೋತು ಬಿದ್ದು...

ಭಯ ಪುರಾಣ

ಭಯಕೆ ನಾನಾ ರೂಪಗಳ ಕೊಟ್ಟು ಬಂಗಾರ ಬೆರಳುಗಳಿಂದ ಅಲಂಕರಿಸಿ ಕಳ್ಳರ ಭಯಕ್ಕೆ ಭದ್ರವಾಗಿ ಬೀಗ ಜಡಿದು ಕುಳ್ಳರಿಸಿ ಮಾರಿ ಕಾಲರಾ ಭಯ, ರೋಗ ರುಜಿನ ಭಯ ಸಾವು ವೈರಿಗಳ ಭಯ ಮೊದಲಾದ ಅನೇಕ ಭಯಗಳು...

ನಾಡ ಕಟ್ಟ ಬನ್ನಿ

ನಾಡ ಕಟ್ಟ ಬನ್ನಿ ನಾಡ ಗುಡಿಯ ಕಟ್ಟ ಬನ್ನಿ ನಾಡ ಜನತೆ ಕರೆಯುತಿಹುದು ಸೇವೆಗಾಗಿ ಬನ್ನಿ ||ಪ|| ಮೇಲು ಕೀಳು ಭೇದ ತೊಡೆದು ಸಮಾನತೆಯು ನೆಲೆಸಲು ನೂರು ಜಾತಿ ಪಂಥ ಬೇದಗಳನು ಮರೆತು ಬೆರೆಯಲು...

ಹಾಡಬೇಕು

ಹಾಡು ಹಾಡಬೇಕು ಹೀಗೆ ಹಾಡು ಹಾಡಬೇಕು ಮನಸಿನ ಮೂಸೆಯ ಭಾವದ ಕುದಿಗಳು ಉಕ್ಕಿ ಹರಿಯಬೇಕು ಹಾಡಿನ ಪಾಡು ಪಡೆಯಬೇಕು      ||ಪ|| ಅಂತರಂಗದಲಿ ರಿಂಗಣಗುಣಿಯುತ ಒಲವು ಉಲಿಯಬೇಕು ಸಹಜದ ಲಯವು ನಲಿಯಬೇಕು ಒಳ ತಲ್ಲಣಗಳ ಪಲ್ಲವಿ...

ಒಬ್ಬೊಬ್ಬ ಸೂರ್ಯನ ಕೊಡಿ

ಅಕ್ಕ ತಂಗಿಯರೇ! ಪ್ರತಿಯೊಬ್ಬರೂ ಒಬ್ಬೊಬ್ಬ ಸೂರ್ಯನನ್ನು ದೇಶಕ್ಕೆ ಕೊಡಿ ಕನಿಷ್ಟ ಪಕ್ಷ ನಕ್ಷತ್ರವನ್ನಾಗಲೀ ಕೊನೆಗೆ ಹಣತೆಯನ್ನಾಗಲೀ ಕೊಡಿ ಎರವಲು ಬೆಳಕಿನಿಂದ ಮೆರೆವ ಗ್ರಹ ಉಪಗ್ರಹಗಳನ್ನೋ ಉಲ್ಕೆಗಳನ್ನೋ ಕೊಡಬೇಡಿ ಒಂದರೊಳಗೊಂದು ಸಿಕ್ಕಾ ಸಿಕ್ಕಾಗಿ ಗೋಜಲುಗೊಂಡು ಒಂದನೊಂದು...

ಶವ ಕ್ಷೇತ್ರಗಳು

ಜನರ ಲೌಕಿಕಾಶಯಗಳ ತುಳಿದ ಕಲ್ಲು ಕಲ್ಲುಗಳ ತಳಪಾಯ ಮೌಢ್ಯತೆಯ ಗೋಡೆ, ಜಡತೆಯ ಕಂಭಗಳು ಶೋಷಣೆಯ ವೈಭವೀಕರಣದ ನವರಂಗಗಳು ಅಂತರ ಪಿಶಾಚಿಯಲೆದಾಟದ ವಿಭ್ರಮೆಯ ಗರ್ಭಗುಡಿ ಮತಾಧಿಕ್ಯತೆಯ ಬೆರಗಿನ ಗೋಪುರ ಅಜ್ಞಾನಕ್ಕಿಟ್ಟ ಕಳಸುಗಳು ಮೆರೆದಿವೆ ಭವ್ಯ ಭಾರತದ...