Home / Lakshminarayana Bhatta

Browsing Tag: Lakshminarayana Bhatta

ನನ್ನ ಕವಿತೆಗಳಲ್ಲಿ ನಿನ್ನ ಗುಣಗಳ ತಂದು ನಿಜ ಬಣ್ಣಿಸಿದ್ದರೂ, ಅದು ನಿನ್ನ ಘನತೆಯನು ಅರ್ಧ ಮಾತ್ರವೆ ತೋರುವಂಥ ಸ್ಮಾರಕ ಎಂದು ಸ್ವರ್ಗಕೇ ಗೊತ್ತಿದ್ದೂ ನಂಬುವರು ಯಾರದನು ? ಆ ಕಣ್ಣ ಸೊಬಗ ಹಾಗೇ ಚಿತ್ರಿಸಿದರೂ, ನಿನ್ನ ಘನತೆಯ ಕುರಿತು ಹೊಸ ಹೊಸತು ಬ...

ಈ ನಿರಂಕುಶ ಕ್ರೂರ ಕಾಲನನು ಇದಕಿಂತ ಧೀರನೆಲೆಯಲಿ ನೀನು ಕಾದದಿರುವುದು ಏಕೆ ? ನನ್ನ ಈ ಬರಡು ಪದ್ಯಕ್ಕೂ ಮಿಗಿಲಾದಂಥ ಸಾಧನದ ರಕ್ಷಣೆಯ ಪಡೆಯದಿರುವುದು ಏಕೆ ? ಜೀವನದ ಸುಖಕ್ಷಣದ ಶಿಖರದಲಿ ನಿಂತಿರುವೆ, ಮದುವೆಯಾಗದ ಎಷ್ಟೊ ಕನ್ನೆಯುದ್ಯಾನಗಳು ನಿನ್ನ ...

ನಕ್ಷತ್ರ ನೋಡಿ ಅಳೆವವನಲ್ಲ ನಾಳೆಗಳ, ಆದರೂ ಇದೆ ನನಗೆ ಜ್ಯೋತಿಷ್ಯ ನುಡಿವ ಬಲ. ಬರಲಿರುವ ಹಿತ, ಅಹಿತ, ಪಿಡುಗು, ಋತು ಧಾಟಿಗಳ ಕಾಲಕಾಲಕ್ಕೆ ಅದು ಹೇಳಬಲ್ಲದ್ದಲ್ಲ ; ವ್ಯಕ್ತಿಯೊಬ್ಬನ ಬಾಳಿನೊಳಗೆ ಹಾಯುವ ಗಾಳಿ ಸಿಡಿಲು ಮಳೆ ಗುಡುಗುಗಳ ಗುಣಿಸಬಲ್ಲದ್...

ನೀನು ನೀನೇ ಅಲ್ಲ, ಒಳಿತಿತ್ತು ಹಾಗಿರಲು. ಒಲವೆ ನೀನೆಂದಿಗೂ ಹೀಗೇ ಇರುವುದಿಲ್ಲ. ಸಿದ್ಧತೆಯ ಮಾಡು ಬರಲಿರುವ ಕೊನೆ ಎದುರಿಸಲು ನಿನ್ನ ಸವಿಬಿಂಬವನು ಯಾರಿಗಾದರು ನೀಡು. ನಿನ್ನ ಗೇಣಿಯೊಳಿರುವ ಚೆಲುವು ನೀ ನಡೆದಾಗ ಕೊನೆಗೊಳ್ಳುವುದು ಸಲ್ಲ. ನಿನ್ನ ಪ್...

ಗಂಟೆ ಸರಿಯುವುದು, ಬೆಳಗಿದ ಹಗಲು ಇಳಿಯುವುದು ಕರಿಗಪ್ಪು ಇರುಳಲ್ಲಿ, ಮುಪ್ಪು ನೇರಿಳೆ ಹೊಗೆ, ಕಪ್ಪು ಗುಂಗುರುಳು ನೆರೆ ಬಣ್ಣಕ್ಕೆ ಹೊರಳುವುದು; ಉರಿಬಿಸಿಲ ಹೀರಿ ಹಿಂದೆಲ್ಲ ಕುರಿಮಂದೆಗೆ ತಂಪೆರೆದ ಭಾರಿ ಮರಗಳ ಹಸಿರು ಛಾವಣಿ ಎಲೆಗಳಚಿ ಒಣಗಿ ಬತ್ತಲ...

ವಿಧವೆಯೊಬ್ಬಳ ಕಣ್ಣು ಒದ್ದೆಯಾದೀತೆಂದು ಭಯವೆ, ಒಬ್ಬಂಟಿ ಬದುಕನ್ನೇಕೆ ತೇಯುವೆ ? ಸಂತಾನ ಭಾಗ್ಯವಿಲ್ಲದೆ ನೀನು ಸತ್ತಂದು ಜೊತೆ ಕಡಿದ ಹೆಣ್ಣಂತೆ ಈ ಲೋಕ ನರಳದೆ ? ಉಳಿದ ವಿಧವೆಯರೆಲ್ಲ ತಮ್ಮ ಮಕ್ಕಳ ಕಣ್ಣ ನೋಟದಲ್ಲೇ ಪತಿಯ ಪ್ರತಿಬಿಂಬ ಕಾಣುವರು ; ‘...

ಅದೊ ಪೂರ್ವದಿಕ್ಕಿನಲಿ ಘನ ಉದಾತ್ತಜ್ಯೋತಿ ತನ್ನ ಬೆಳಕಿನ ಶಿರವನೆತ್ತುತಿದೆ, ಕೆಳಗಿಲ್ಲಿ ; ಇಳೆಯ ದೃಷ್ಟಿಗಳು ಆ ರಾಜಗಾಂಭೀರ್ಯದತಿ ಹೊಸ ಬಗೆಯ ದರ್ಶನಕೆ ನಮಿಸುತಿವೆ ಬೆರಗಲ್ಲಿ. ಕಡಿದಾದ ಮೇರುಗಿರಿ ನೆತ್ತಿಯನ್ನೇರಿ ರವಿ ನಡುವಯಸ್ಸಿನ ಕ್ಷಾತ್ರದಲ್ಲ...

ಎಲೆ ಚೆಲುವ ದುಂದುಗಾರನೆ ಏಕೆ ವ್ಯಯಿಸುವೆ ಪಡೆದ ಸ್ವತ್ತನ್ನೆಲ್ಲ ಬರಿದೆ ನಿನಗಾಗೇ? ನಿಸ್ಪೃಹಳು, ಪ್ರಕೃತಿ ನೀಡುವುದೆಲ್ಲ ಸಾಲವೇ, ಅದನು ಸಹ ನೀಡುವಳು ಕೇವಲ ಉದಾರಿಗೆ. ಎಲೆ ಜಿಪುಣ ಚೆನ್ನಿಗನೆ ದಾನಮಾಡಲು ಇತ್ತ ಭಾರಿ ಕೊಡುಗೆಯ ಹೀಗೆ ಹಾಳುಮಾಡುವೆ ...

ನೋಡಿಕೋ ಮುಖವ ಕನ್ನಡಿಯಲ್ಲಿ, ಇಂಥದನೆ ಇನ್ನೊಂದ ಕೊಡು ಎಂದು ಕೇಳಿಕೋ. ನೀ ನಿನ್ನ ಮತ್ತೆ ಸೃಷ್ಟಿಸಿಕೊಳದೆ ಬಿಟ್ಟಲ್ಲಿ ಲೋಕವನೆ ವಂಚಿಸುವೆ, ಜೊತೆಗೆ ಹೆಣ್ಣೊಂದಕ್ಕೆ ತಾಯ್ತನವ. ನಿನ್ನ ಪೌರುಷದ ಬಿತ್ತನೆಗೆ ಒಪ್ಪದ ಕನ್ನೆ ಇರುವಳೇ ? ತಡೆಗಟ್ಟಿ ತನ್ನ...

ನಲವತ್ತು ಚಳಿಗಾಲಗಳ ಸತತ ದಾಳಿಗೆ ಹೂಡಿ ನಿನ್ನ ಚೆಲುಮೈಯ ಬಯಲಲ್ಲಿ ಕುಳಿಗಳು ತೆರೆದು, ಜನ ಮೆಚ್ಚಿ ದಿಟ್ಟಿಸುವ ಹರೆಯದೀ ಸಿರಿತೊಡಿಗೆ ಏನೇನೂ ಬೆಲೆಯಿರದ ಹರಕು ಜೂಲಾಗುವುದು. ನಿನ್ನ ಹಿಂದಿನ ಚೆಲುವದೆಲ್ಲಿ, ಜ್ವಲಿಸುವ ಹರೆಯ ತಂದ ಸಂಪತ್ತೆಲ್ಲಿ? ಎ೦...

1...1819202122...49

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...