
ಹಸಿರು ಎಲೆಗಳ ಎಳೆಯಲಿ ಹಸಿರು ಉಸಿರಿನ ನರ್ತನ ಪ್ರಕೃತಿ ಇತ್ತಿಹ ದಿವ್ಯಕೊಡುಗೆಯ ಜೀವ ಜೀವದಾ ಚೇತನ || ಸುಪ್ರಭಾತದ ತನಿಯ ಚೆಲುವಲಿ ಹೂವು ಹೂವಿನ ಮೊಗದಲಿ ತುಂತುರು ನೀರ ಮಣಿಯರೂಪವು ಹೊಳೆಯುವ ಸಂಭ್ರಮ || ನಗುವ ಚೆಲ್ಲಿ ಬರುವ ದುಂಬಿಯ ಸಾಲು ಚೆಲುವಿ...
ಮಲಗು ಮುದ್ದಿನ ಕಣ್ಮಣಿ ಮಲಗು ಪ್ರೀತಿಯ ಚಿನ್ಮಯಿ| ಮಲಗೂ ಮಲಗೆನ್ನ ಅರಗಿಣಿ ಜೋಗುಳವ ಹಾಡುತಲಿ ತಂಪೆಲರ ಬೀಸುತಲಿದೆ ತಂಗಾಳಿ || ನಿದಿರೆಯು ನಿನ್ನನು ಕರೆದೊಯ್ಯುವಳು ಚಂದ್ರನ ಜೊತೆಗೂಡಿ ಆಟವನಾಡುವಳು| ಬಣ್ಣಬಣ್ಣದಗೊಂಬೆಗಳ ಕೊಡುವಳು ಮುಗಿಲ ಜೋಕಾಲಿ ...
ವಂದಿಸು ನೀನು ಮೊದಲು ವಂದಿಸು ನೀನು ಸೃಷ್ಟಿ ಚೆಲುವ ಪ್ರಕೃತಿ ದಿವ್ಯನಿಧಿಗೆ || ಹಿಂಗಾರಿನ ಮುಂಗಾರಿನ ಸ್ವಾತಿ ತನುವ ಹಾಸಿದೊಡಲ ಹಾಲ್‍ಗೆನ್ನೆ ಮಕ್ಕಳ ನಗುವ ದಿಂಚರ ದೃಷ್ಟಿ ತಾಕಿತು ಜೋಕೆ || ಏಳು ಬಣ್ಣಗಳ ಕಾಮನಬಿಲ್ಲ ಸಂಭ್ರಮದೊಲುಮೆಯತ್ತ ಸೋಲಿಲ್...
ಹೋಗುವುದಾದರೆ ಹೋಗು ನಿನ್ನ ತವರಿಗೆ, ನಿನ್ನ ಸಂತೋಷ ವಿನೋದಕೆ| ಮತ್ತೆ ಹಾಗೆ ನಿನ್ನ ಸಂಭ್ರಮ, ಸಡಗರಕೆ ನೀನು ತವರಿಗೆ ಕಳುಹಿಸಿ ನಾನು ಖುಷಿಪಡುವೆ ಒಳಗೊಳಗೆ|| ಅಲ್ಲಿ ನಿನ್ನ ಅಮ್ಮ ನಿನಗೆ ಕೈ ತುತ್ತ ಬಡಿಸಿದರೆ… ಇಲ್ಲಿ ಬ್ರಹ್ಮಚಾರಿಯಾಗಿ ನಾ...
ಒಂದು ಮುಂಜಾವಿನಲಿ ಹಸಿರುಟ್ಟ ಭಾವಲತೆಯ ಸೆರಗಿನಲ್ಲಿ ಮುತ್ತನಿತ್ತ ಹೂ ನಗೆಯ ಕಂಡೆ || ಸೂರ್ಯಕಿರಣ ಅನಂತದಲ್ಲಿ ಸೃಷ್ಟಿ ಸೊಬಗ ಹಾಸಿಗೆಯಲ್ಲಿ ಮುತ್ತನಿತ್ತ ಹೂ ನಗೆಯ ಕಂಡೆ || ಹೃದಯ ವೀಣಾತರಂಗದಲ್ಲಿ ಮಿಡಿವ ಒಲವಿನಾ ಸ್ಪರ್ಶದಲ್ಲಿ ಮುತ್ತನಿತ್ತ ಹೂ ...
ಗೆಳೆತಿ ನನ್ನ ಪ್ರೀತಿಯ ನಿನ್ನ ಗೆಳೆತಿಗೆ ಪರಿಚಯಿಸುವೆಯಾ?| ನನ್ನ ಹೃದಯದ ಮಾತುಗಳ ಅವಳ ಹೃದಯಕೆ ನೀ ಮುಟ್ಟಿಸುವೆಯಾ|| ಸದಾ ನನ್ನ ಜೊತೆಗಿರುವೆ ನನ್ನೆಲ್ಲಾ ಆಸೆಗಳ ಅರಿತಿರುವೆ| ಅವಳ ನಾನೆಷ್ಟು ಪ್ರೀತಿಸುವೆ ಎಂದು ನೀ ತಿಳಿದಿರುವೆ| ಆದರೂ ಅದೇಕಿಷ್...
ಹರಿವ ತೊರೆಯ ಅಲೆಅಲೆಗಳಲಿ ನಿನ್ನ ಭಾವ ನರ್ತನ || ತುಡಿವ ಮನಗಳ ಜಾಲದಲಿ ತಣಿವು ಎರೆಯುವ ಚೇತನ || ಸೃಷ್ಟಿ ಸೊಬಗಿನ ಇಳೆಯರಂಗದಲಿ ಪ್ರಕೃತಿ ದೇವಿಯ ನರ್ತನ || ಅರಳು ಮಿಡಿಯುವ ವೀಣೆ ಕೊರಳಲಿ ಉಲಿವ ಗಾಯನ ನೂತನ || ಉದಯ ಕಾಲದ ಬಾನಿನೊಡಲಲಿ ನೂರು ರೂಪ ...













