
ಹೂವಾಡಗಿತ್ತಿ ಹೂವಾಡಗಿತ್ತಿ ಏಕೆ| ಹೀಗೆ ಆಡುತ್ತೀ || ಘಮ ಘಮಿಸೋ ಹೂವು ಮನವ ತಟ್ಟಿತೇ ನಿನಗೆ ಹೇಳೆ ಮಲ್ಲಿಗೆ ಅರಳೆ || ನಿನ್ನವನ ನೆನಪು ಕಾಡಿತ್ತೆ ನೀನು ಕಟ್ಟಿದ ಹೂ ಮಾಲೆ ನಾಚಿ ತಗ್ಗಿ ಸೆಳೆಯಿತು ನಿನ್ನ || ನೀನು ಕಟ್ಟಿದ ಹೂ ಬಿಡಿ ಬಿಡಿಯಾಗಿ ಮ...
ಭಾವವೆಂಬ ಗಿಡಬಳ್ಳಿಯಲಿ ನಗುವ ಹೂವುಗಳೆ || ಮನವೆಂಬ ರಸಪಾನದಲಿ ಬದುಕ ಬಯಸುವ ಚೆಲುವ ಕಂಗಳೆ || ಯಾರಗೊಡವೆ ಇಲ್ಲದೆ ಯಾವ ಸ್ವಾರ್ಥ ಬಯಸದೆ ಅರಳಿದ ಹೂಗಳೇಽಽಽ || ಎಲ್ಲಿ ತೂರಿದವೂ ನಿಮ್ಮ ಬಯಕೆಗಳು ಎಲ್ಲಿ ಹೊಯ್ದವೂ ನಿಮ್ಮ ನೆರಳು || ಬಾಳ ಬೆತ್ತಲೆ ಕ...
ಏಕೆ? ಕಣ್ಣಂಚಲಿ ಕಂಬನಿ ಹೊರಸೂಸಿ ಕಣ್ಣಬಟ್ಟಲುಗಳು ತುಂಬಿ ಬಂದಿಹವು| ಯಾವುದೋ ಎದೆಯಾಳದ ನೋವ ಹೊರಹಾಕಲು ಹೃದಯ ತಳಮಳಿಸುತಿಹುದು|| ಹಳೆಯ ಪ್ರೇಮದನುಭವದ ಸಿಹಿಕಹಿನೆನಪು, ನನ್ನ ನೆನಪಿಸಿಯೊಮ್ಮೊಮ್ಮೆ ದುಃಖವನು ತಂದಿಡುವುದು|| ಅಂದು ನಿನ್ನಂತರಂಗವ ಅರ...
ಎಲ್ಲಿ ಕಾರ್ಮುಗಿಲಿರುವುದೋ ಅಲ್ಲಿ ಹಗಲಿನ ನೆರಳು || ಎಲ್ಲಿ ಮನಗಳು ಹರಿವುದೋ ಅಲ್ಲಿ ತಿಳಿವಿನ ಅಲೆಗಳು || ಎಲ್ಲಿ ಚಂದಿರನ ಬೆಳದಿಂಗಳೋ ಅಲ್ಲಿ ಬೆಳಕಿನ ಹೊನಲು || ಎಲ್ಲಿ ತಾಯಿ ಕುಡಿಯ ಬೇರೋ ಅಲ್ಲಿ ಮಮತೆಯ ಸಸಿಗಳು || ಎಲ್ಲಿ ಬಂಜೆತನದ ಬಾಳಿಹುದೋ ...
ಕರುಣೆ ತೋರು ನೀನೆನಗೆ ನನ್ನ ಬಾಳ ಏಳಿಗೆಗೆ | ದಾರಿದೀಪವಾಗೆನಗೆ ನನ್ನ ಬಾಳ ಈ ಹಾದಿಗೆ || ಗುರುನೀನೇ ಗುರಿತೋರಿಸು ನೀನೇ ಇನ್ನಾರಿಹರೆನಗೆ ನೀನಲ್ಲದೀಬಾಳಿಗೆ| ಬದುಕ ಬವಣೆಯ ಬಿಡಿಸು ಬಾಳ ಮಹಿಮೆಯ ತಿಳಿಸು|| ಏಕೆ ಮತ್ತೆ ಮತ್ತೆ ಪುನರಪಿಸುವೆವೋ ಕಾಣೆ...













