ನಿನ್ನ ಪತ್ರ

ನೀ ಮೊನ್ನೆ ಅಚಾನಕ್ಕಾಗಿ ಪತ್ರ ಬರೆದೆ ಅದರ ತೇವ ನನ್ನ ತೋಯಿಸಿತು ಕಣ್ಣು ನೀರಿನ ಕೊಳವಾಯ್ತು ಮಂಕಾದೆ. ಯಾಕೆ ಹೀಗೆ ಮೋಡದಲಿ ತೇಲಿ ತೇಲಿ ಬಂದೆ ಬರ್‍ರನೆ ಮಳೆ ಸುರಿಸಿ ಮನೆ ಮಠ ಮನಸ್ಸನ್ನೆಲ್ಲಾ...

ಅಲ್ಲಮ

ನಡೆವ ದಾರಿಯಲಿ ಹೆಜ್ಜೆಗಳು ಮೂಡಲಿಲ್ಲ ಅನುರಣಿಸಿತು ಸಪ್ಪಳ ನಡೆವ ದಾರಿಯ ಇಕ್ಕೆಲಗಳಲಿ ಬಯಲ ಬಿಂಬ ದಾರಿಗೆ ಇಂಬು ಹುಡುಕಾಟದ ಬಯಲಿನಲಿ ಖಾಲಿಯಲಿ ತುಂಬಿಕೊಂಡ ಹಸಿರು. ಬೆಳಕಿಗಾಗಿ ಕಂದೀಲನ ಮರೆಮಾಚಿ ದೇಹ ಹೊತ್ತವರ ಹರಿದಾಟ ಇರುಳ...

ಬಿಂಬ

ನಿನ್ನ ಮೌನದೊಳಗಿನ ಮಾತು ನೀಲಾಂಜನ ಉರಿದಂತೆ ಮನೆ ತುಂಬ ತಣ್ಣನೆಯ ಬೆಳಕು ಪಸರಿಸಿ ಸಂಜೆಯಲಿ ಮನೆ ಬೆಚ್ಚಗಾಯಿತು. ನಿನ್ನ ಮೌನದೊಳಗಿನ ನಡುಗೆ ಚಿಕ್ಕಿಗಳು ಆಕಾಶದಲಿ ಮಿನುಗಿದಂತೆ ತಣ್ಣನೆಯ ತಂಗಾಳಿ ತೀಡಿ ಹಾಸಿತು ಕಣ್ಣ ತುಂಬ...

ಜ್ಞಾನ

ಸದ್ದಿಲ್ಲದೇ ಅರಳಿದ ಹೂಗಳು ಮರದ ತುಂಬ ಹರಡಿ ಹಾಸಿತು ಜೀವಗಂಧ ಝೇಂಕಾರದಲಿ ದುಂಬಿ ತಂಡ ಗಾಳಿ ಬೀಸಿತು ತಂಪಾಗಿ ಮರದಲಿ ಕುಳಿತ ಹಕ್ಕಿಗಳು ಉಲಿದವು ಇಂಪಾಗಿ. ಗೂಡು ಕಟ್ಟುವ ನೆರಳು ಮಣ್ಣ ಕಣಕಣದಲಿ ಹರಡಿ...

ಯುದ್ಧ

ಯುದ್ಧಗಳ ಹಿಂಸೆ ಗದ್ದಲದಲಿ ರಣರಂಗ ರಕ್ತ ಚೆಲ್ಲಿದೆ ಮತ್ತೆ ಗಾಯಾಳುಗಳು ಚೀರುತ್ತಿದ್ದಾರೆ ಸಾವಿನಲ್ಲಿ ನೋವು ಹರಡಿಕೊಂಡಿದೆ ಅಲ್ಲಿ ಖಾಲಿ ಆವರಿಸಿಕೊಂಡಿದೆ. ಘಟಿಸುವ ಘಟನೆಗಳನ್ನು ದಾಖಲೆಗಳ ಲೆಕ್ಕಕ್ಕೆ ಇಟ್ಟವರ್‍ಯಾರು ಇತಿಹಾಸದಲಿ ಹಸಿದ ಕರಳು ಮರೆತವರು ಅಮಾಯಕರ...

ಮೌನದಲಿ

ಮೌನದಲಿ ಮರ ಕಂಪಿಸಿ ಒಡಲೊಳು ಜೀವಿಗಳು ಝಲ್ಲನೆ ಮುಲುಕಾಡಿ ಮರು ಮುಂಜಾನೆ ಯಾವ ಹಂಗಿಲ್ಲದೇ ಚಿಗಿರಿದ ಹಸಿರು ಮೌನದಲಿ ಮಾತುಗಳು ಸುಮ್ಮನೆ ಒಂದಕ್ಕೊಂದು ಡಿಕ್ಕೀ ಹೊಡೆದುಕೊಂಡು ಮೆಲ್ಲನೆ ಚಲಿಸಿದ ಭಾವ ಒಡಲು ಗರ್ಭದ ಕತ್ತಲೆ...

ಹಾಯ್ಕಗಳು

ಬೇಸಿಗೆಯ ಸಂಜೆ ತಂಗಾಳಿ ಬೀಸಿತು ತಂಪಿನಲಿ ಅವನ ಉಸಿರಿತ್ತು. ರಾತ್ರಿಯಲಿ ಆಕಾಶದ ತುಂಬ ಬೆಳದಿಂಗಳು ಹರಡಿದೆ ಅಂಗಳದಲಿ ಮಕ್ಕಳು ತುಂಬಿಕೊಂಡಿವೆ. ಮುಂಜಾವಿನಲಿ ಹನಿಹನಿ ಇಬ್ಬನಿ ಹಾಸಿವೆ ನನ್ನಲ್ಲಿ ಕವಿತೆಯ ಜೀವ ಒಸರುತಿದೆ. ಮಧ್ಯಾಹ್ನದಲಿ ಒಂದು...

ಗಜಲ್

ಅಮ್ಮ ಪಾತ್ರೆ ಹಿಡಿದು ಬಡಿಸಿದಳು. ಪಾಯಸ ಅಲ್ಲಿ ಬರೀ ಪ್ರೀತಿ ಸಿಹಿ. ಅಪ್ಪ ಕನ್ನಡಿ ಹಿಡಿದು ತೋರಿಸಿದ ಬಿಂಬಗಳ ಎಲ್ಲವೂ ಕಾಲಘಟ್ಟದಲ್ಲಿ ಕರಗುವ ಹನಿಗಳು. ಅಕ್ಕ ತಬ್ಬಿದಳು ಲೋಕದ ಮಾಯೆಯ ಪ್ರೇಮ ಕರಗಿ ನೀರಾಗಿ...

ಸತ್ಯ

ಕಲ್ಲು ಮುಳ್ಳಿನ ಹಾದಿ ಸವೆದ ಬದುಕು ಅಳೆಯಲಾರದ ಕಾಲ ಇಂದು ನಿನ್ನೆಯ ನೆನಪುಗಳ ಬಂಧಿ ಬಯಕೆಗಳ ನಾಳೆಗಳ ಆಲಂಗಿಸು ಜೀವ ಎಂದೂ ಹಿಮ್ಮುಖವಾಘಿ ಚಲಿಸುವದಿಲ್ಲ. ದುಃಖದ ಸೆರಗಿನಲಿ ಸುಖದ ಮುಖ ತಕ್ಕಡಿ ತೂಗಿದಂತೆ ಸಮ...

ಸಮುದ್ರ ಗೀತೆ

ಸಮುದ್ರದ ಗೀತೆ ಮುಗಿಯುವದಿಲ್ಲ ಲೆಕ್ಕ ಪುಸ್ತಕದಲಿ ಬಾಕಿ ಕೊಡಬೇಕಾಗಿದೆ ಋತುಗಳು ಬದಲಾಗುತ್ತವೆ ಬಿಡುಗಡೆಯ ಕನಸುಗಳು ಕಾಣಬೇಕಾಗಿದೆ. ಮಾತನಾಡಿದ ಮಾತುಗಳು ಹಿಂದೆ ತೆಗೆದುಕೊಳ್ಳುವದಕ್ಕೆ ಬರುವುದಿಲ್ಲ. ನೀಲ ಗಗನದ ಹೊಳೆವ ಚಿಕ್ಕಿಗಳು ಹೊನ್ನ ಮರಳಿನಲಿ ಅಡಗುವುದಿಲ್ಲ. ಬಯಕೆ...