ಕಲ್ಲು ಮುಳ್ಳಿನ ಹಾದಿ ಸವೆದ
ಬದುಕು ಅಳೆಯಲಾರದ ಕಾಲ
ಇಂದು ನಿನ್ನೆಯ ನೆನಪುಗಳ ಬಂಧಿ
ಬಯಕೆಗಳ ನಾಳೆಗಳ ಆಲಂಗಿಸು
ಜೀವ ಎಂದೂ ಹಿಮ್ಮುಖವಾಘಿ ಚಲಿಸುವದಿಲ್ಲ.
ದುಃಖದ ಸೆರಗಿನಲಿ ಸುಖದ ಮುಖ
ತಕ್ಕಡಿ ತೂಗಿದಂತೆ ಸಮ ಸಮ
ಆತ್ಮಗಳು ಮುಲುಕಾಡಿ ವಿರಮಿಸುತ್ತವೆ
ತಮ್ಮ ಮನೆಗಳು ಸ್ವಂತ ಆಲೋಚನೆಗಳು
ಸಮುದ್ರದ ಬದುಕು ಎಂದೂ ಖಾಲಿಯಾಗುವದಿಲ್ಲ.
ಮೊಗೆ ಮೊಗೆದು ಕುಡಿದ ಖುಷಿಯ ಭಾವಿ
ಎಂದೋ ಒಮ್ಮೆ ಕಂಬನಿಗಳಿಂದ ತುಂಬಿತ್ತು.
ಊಟದ ಅನ್ನ ಅರಳುವುದು ಅವರಿವರ
ಶ್ರಮದ ಕೈಗಳು ಸುಃಖ ದುಃಖ
ಆಕಾಶ ನೀಲಿಯು ಎಂದೂ ಬರಿದಾಗುವದಿಲ್ಲ.
ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತವೆ
ಭೂಮಿಯ ಒಗಟೆ ಆಕಾಶದ ಗೀತೆ
ಸ್ವಾತಂತ್ರ್‍ಯ ಬೇಕಿದ್ದರೆ ಆವಿಯಾಗಿ ಮೋಡ
ಬೀಜಗಳು ಕಟ್ಟಿ ಬಯಲು ತುಂಬ
ನಿರಾಕಾರದ ಆಕಾರಗಳು ಎಂದೂ ನಿಂತಲ್ಲಿ ನಿಲ್ಲುವದಿಲ್ಲ.
*****