ಒಂದೆ ಹಿಡಿಮೂಳೆ ಚಕ್ಕಳ ಅಷ್ಟೆ; ಅದಕೆ ಸುರಿ
ಮೂರುನಾಲ್ಕೋ ಚಮಚ ರಕ್ತ, ಮಾಂಸ, ಜೊತೆಗಿರಿಸು
ವಾಪವಂ ನೆರೆತೆರೆದ ಕಡಲಿನಾಳದ ಮನಸ,
ನೆರೆಬಂದ ಕಡಲಿನೊಲ್ ಪ್ರೇಮವಂ ತುಂಬಿದೆದೆಯ;
ಹುಚ್ಚು- ಮೊರಕಿವಿಯೆರಡ, ಎರಡು ಪಿಳಿಪಿಳಿ ಕಣ್ಣ;
ಹಾಲುಹಸುಳೆಯ ಮಂದಹಾಸವನ್ನು ಲೇಪಿಸದಕೆ,
ಒಳಗಿರಿಸು, ಜೇನು ನಗುವವೊಲಿನಿಯ ನಾಲಿಗೆಯ
ಮೇಣ್ ಹಿಮಗಿರಿಯ ಮೀರಿಸಿ ನಿಮಿರ್ದ ಹಿರಿಯಾತ್ಮವ.
ಪೂರಣವೊ? ನೋಯಬೀನ್ಸ್, ಖರ್ಜೂರ, ಮೇಕೆ ಹಾಲು!
ಮೇಲಿನಂಚಿನವರೆಗು ದುಃಖಿಗಳ ಕಣ್ಣೀರು ತುಂಬಿ
ಪಕ್ವಮಾಡಿ ಇದನು ಸೆರೆಮನೆಯೊಳೊಂದಿನಿತು ವರುಷ
ಹೊರಗೆ ತೆಗೆ ವರಯ ಪರಿವಾರದಿಂ ಗಮಗಮಿಸಗೊಳಿಸಿ,
ಚಿಂದಿಯಂ ಸುತ್ತಿ, ಸೆಳಬೊಂಬಿನಾಲಂಬವನ್ನಿತ್ತು
ಬಡಿಸು ತಾ? ಅವನೆ ಕಾಣ್! ಲೋಕತಾರಕ! ನಮ್ಮಬಾಪೂ!
*****
ಅನುವಾದ – ಜಿ. ಪಿ. ರಾಜರತ್ನಂ