ಯುದ್ಧ

ಯುದ್ಧಗಳ ಹಿಂಸೆ ಗದ್ದಲದಲಿ
ರಣರಂಗ ರಕ್ತ ಚೆಲ್ಲಿದೆ ಮತ್ತೆ
ಗಾಯಾಳುಗಳು ಚೀರುತ್ತಿದ್ದಾರೆ
ಸಾವಿನಲ್ಲಿ ನೋವು ಹರಡಿಕೊಂಡಿದೆ
ಅಲ್ಲಿ ಖಾಲಿ ಆವರಿಸಿಕೊಂಡಿದೆ.

ಘಟಿಸುವ ಘಟನೆಗಳನ್ನು
ದಾಖಲೆಗಳ ಲೆಕ್ಕಕ್ಕೆ ಇಟ್ಟವರ್‍ಯಾರು
ಇತಿಹಾಸದಲಿ ಹಸಿದ ಕರಳು
ಮರೆತವರು ಅಮಾಯಕರ
ನೋಟುಗಳು ಬರೀ ಶೂನ್ಯಗಳಾಗಿವೆ.

ಮುರಿದ ರುಂಡ ಮುಂಡಗಳ
ಚದುರಂಗದ ಆಟ ದಾಳ ಉರುಳಿಸಿ
ಅಲ್ಲಲ್ಲಿ ಬಿದ್ದ ರಕ್ತದೋಕುಳಿ
ಎಲ್ಲಾ ಸಾಮಗ್ರಿಗಳು ಸವೆದ ದಾರಿ
ವ್ಯವಸ್ಥೆ ಕೊಲ್ಲುವ ಯಂತ್ರವಾಗಿದೆ.

ಮಾರಣಾಂತಿಕ ಹಲ್ಲೆಗಳ
ಸರಮಾಲೆ ತಯಾರಾಗಿ ಕುಳಿತಿದ್ದಾನೆ
ಕೊಲೆಗಾರ ಯಾರಿಗೋ ಕಾಯುತ್ತ
ಯಾವ ತಾಯಿಯ ಮಡಿಲು ಬರಿದೋ
ಎಲ್ಲವೂ ಸುಟ್ಟ ಕರಕಾಗುವ ಆಕ್ರಮಣ.

ಎಲ್ಲಾ ಚೀತ್ಕಾರಗಳ ನಡುವೆ
ಸೂರ್ಯ ಕಿರಣಗಳ ಬಿಟ್ಟಿದ್ದಾನೆ
ಸಾಯುವ ನೋಯುವ ಕ್ಷಣಗಳ
ಕಾರ್ಯ ಕಾಯಕ ನರಮೇಧ
ಕಾರಣ ನಾನಲ್ಲ ಎಂದು ಕಂತುತ್ತಿದ್ದಾನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೃದಯ ಒಲವಿಗೆ ಅಲ್ಲದಿನ್ನೇತಕೆ?
Next post ಎಚ್ಚರ!

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…