ಮುಕ್ತ

ಉಗಿಯುತ್ತಿದೆ ಊರು ಓಡಿ ಮೋರಿಯಲ್ಲಿ ಮಲಗು ಅರಸುತ್ತಿದೆ ಕಲ್ಲು ದೊಣ್ಣೆ ಬಿಲಗಳಲ್ಲಿ ಅಡಗು ನಿಂತ ನೆಲವೆ ನುಂಗುತ್ತಿದೆ ಬೆಂತರ ಬೆನ್ನಟ್ಟುತ್ತಿದೆ ನಿರ್ಜನ ರಾತ್ರಿಗಳಲ್ಲಿ ಒಂಟಿ ಕೂತು ಕೊರಗು. ಮುಕ್ತ ಇವನು ಮಾನದಿಂದ ಸರಿತಪ್ಪಿನ ಜ್ಞಾನದಿಂದ...

ಒಂದು ವಿನಂತಿ

ಒಳಬನ್ನಿ ಗೆಳೆಯರೆ ಇದು ಒಬ್ಬ ಕವೀಂದ್ರನ ಗೋರಿ ಹುಸಿದಿದ್ದರೆ ಕಸಿದಿದ್ದರೆ ಮಾತಿಗೆ ತಪ್ಪಿ ತಪಿಸಿದ್ದರೆ ಕಣ್ಣದೀಪ ಕಂಡವರ ಕಷ್ಟಕ್ಕೆ ಉರಿದು ಎಂದಾದರೂ ಎರಡು ಹನಿ ಬೆಳಕ ಬಸಿದಿದ್ದರೆ ರಾತ್ರಿ ರಾಮಾಯಣ ಹಗಲು ಭಾರತ ಬಾಳೆಲ್ಲ...

ದೀಪಗಳ ದಾರಿಯಲಿ

ದೀಪಗಳ ದಾರಿಯಲಿ ನಡುನಡುವೆ ನೆರಳು, ನೆರಳಿನಲಿ ಸರಿವಾಗ ಯಾವುದೋ ಬೆರಳು ಬೆನ್ನಿನಲ್ಲಿ ಹರಿದಂತೆ ಭಯಚಕಿತ ಜೀವ ತಣ್ಣನೆಯ ಒಡಲಲ್ಲಿ ಬೆದರಿರುವ ಭಾವ. ಆಸೆ ಕನಸುಗಳೆಲ್ಲ ತೀರಿದುವು ಕುಸಿದು, ಭಾಷೆಗೂ ಸಿಗದಂಥ ಭಯದ ಮೆಳೆ ಬೆಳೆದು,...

ಅಂತರ

ಹುಡುಗನಾಗಿದ್ದ ದಿನಗಳ ನೆನಪು : ಆಗ ನಮ್ಮೂರ ಹೊಳೆ ತುಂಗೆ ಶಾಂತನಿರ್ಮಲ ಅಂತರಂಗೆ; ಹೊರಗಿನ ಬಿಸಿಲು ಒಳಗೆ ಬಿಂಬಿಸಿ ತಳದ ತನಕ ನದಿಯ ಮನಸ್ಸು ಸ್ವಚ್ಛ ಪ್ರತ್ಯಕ್ಷ ಸಂಪದ್ಯುಕ್ತ ಜಲದ ರೇಸಿಮೆಹಾಳೆ ಸೀಳಿ ಹಾಯುವ,...

ತ್ರಿಮೂರ್ತಿ

ಬೆಳಿಗ್ಗೆ ಪ್ರಗತಿಶೀಲರ ಸಭೆಯಲ್ಲಿ ಎಚ್ಚರಿಸಿದರು ಕವಿ : "ಬಾನು ಭೂಮಿ ಒಂದೆ ಸಮ, ಹಳ್ಳ ಕಡಲು ಒಂದೆ ಸಮ ಒಂದೆ ಸಮ ಒಂದೆ ಸಮ, ಕೊರಡು ಮರ ಒಂದೆ ಸಮ" ಗುಡುಗಿದರು ಕವಿ ಮಧ್ಯಾಹ್ನ...

ತುತ್ತೂರಿ

ಎಲ್ಲ ಬಿಟ್ಟು ಇದು ಇಲ್ಲಿಗೆ ಬಂತೆ? ಅಕ್ಕಿ ತುಂಬ ಬರಿ ಕಲ್ಲಿನ ಸಂತೆ ಕಾಲ ಚಪ್ಪಲಿ ಕಿರೀಟವ ಜಾಗ ಬಯಸಿ ಕುರುಡುಬುದ್ದಿಗೆ ಕ್ರೌರ್‍ಯ ಪರಾಕು ಸಲ್ಲಿಸಿ ಹುದುಕಿಟ್ಟಿದೆ ನಿನ್ನ ಹಟ್ಟಿಗೊಂದು ಹೆಸರ ಎರಗುವ ಮಂಚೆ...

ನಡುನೀರಿನಲ್ಲಿ

ದೀಪ ಹಚ್ಚಿ ಹೃದಯ ಬಿಚ್ಚಿ ದೈವದ ಪಾದಕ್ಕೆ ಹಣೆ ಹಣೆ ಚಚ್ಚಿ ಬೇಡಿದೆವು ಅಂದು : ಇವಗೊದಗಲಿ ಹಿರಿತನ ಮೇಲೇಳಲಿ ಮನೆತನ ಮೈ ತುಂಬಲಿ ಕ್ಷೀಣಿಸಿದ ಮನೆಭಾಗ್ಯ ಎಂದು. * * * ನೀ...

ಒಂದು ಸಲ ಹೀಗಾಯಿತು

ಕಲ್ಲಿನಂತಿದ್ದ ಹಲ್ಲನ್ನು ಕಾಣದ ಕ್ರಿಮಿಗಳು ತಿಂದು ಬೆಳಕಿನ ದಳದಂಥ ಹಲ್ಲು ಹುಳಿತು ಕಪ್ಪಾಗಿ ಹೋಯಿತು. ಕಬ್ಬು ಸಿಗಿದ ಯಂತ್ರ ಕಡಲೆಪುರಿಗೆ ಬೆದರಿ ನಿಂತರೆ ನೋವು, ಕೂತರೆ ನೋವು ಮುಖ ಬಾತು ಮೂತಿ ಕುಂಬಳಕಾಯಾಯಿತು. ಕಂಡ...

ದರ್ಶನ

ಅರೆ ನಿದ್ದ ಅರೆ ಅರಿವು, ಮಂಪರು ದಾರಿ ಹಿಡಿದು ತೆವಳಿ ಹೋದರೆ ಕೆಳಗೆ ಬೆದರಿಸುವ ಪಾತಾಳ; ತರ್ಕದ ಸೊಕ್ಕು ಮುರಿದು ಗಣಿತವನೆ ಮಣಿಸಿರುವ ಜನ ತಿಕ್ಕಲು ಕುಣಿತ; ಏನೇನೊ ನೋಡಿ ಏನೇನೊ ಹಾಡುವ ಕನಸ...

ಪ್ರೀತಿ

ಬಾನು ಚುಕ್ಕಿಗಣ್ಣಿಂದ ಭೂಮಿಗೆ ಕಣ್ಣು ಹೊಡೆಯುತ್ತದೆ, ಮುಗಿಲ ಮಿದುಗೈಯಿಂದ ಗಿರಿಮೊಲೆ ಸವರುತ್ತದೆ, ಹಸಿರ ಪತ್ತಲ ನೇಯ್ದು ಮಳೆಸೂಜಿಯಿಂದ ನಲ್ಲೆಗೆ ಪ್ರೀತಿಯ ವಸ್ತ್ರ ಮೆಲ್ಲಗೆ ಹೊಚ್ಚುತ್ತದೆ. ಕೆರಳಿತೊ ಕೋಪ್, ಕೆಟ್ಟ ಬಿಸಿಲಾಗಿ ಉರಿದು ಅರಳಿತೊ ಪ್ರೀತಿ...