ಶ್ರೀನಾರಾಯಣ

ಸ್ಫೂರ್‍ತಿಯ ಮೂರ್‍ತಿಗೊಂಡಂತೆ ಕಂಡವು ಆನೆ ಕುದುರೆ ಹಾ- ವುಗೆ, ನಿನ್ನ ಹೊಸ್ತಿಲವ ದಾಟಿ ಇಲ್ಲಡಿಯಿಟ್ಟೆ; ಬಿಜಯ ಮಾಡಿಸಿದೆ ವೈಭವದಿ, ದಿಗ್ವಿಜಯ ಮಾ- ಡುವೆ, ಕುರುಹಗಳ ತೋರಿ ಹೇಳುತಿಹೆಯಾ, ನಲ್ಲ! ನನಸೆಂದು ತೋರಿ ಹಾರೈಸಿದುದು ಕನಸಾಗೆ,...

ಇದಾರ ಮನಸು

ಇದಾರ ಮನಸು ಉದಾರ ಮನಸು ಕನಸುಗಳ ಹೊಸೆಯಿತೊ ಚಿತ್ರ ಬರೆದು ಬಣ್ಣ ಹಚ್ಚಿ ಮೂಡುವ ಮೊದಲೆ ಅಳಿಸಿತೊ ಇದಾರ ಮನಸು ಉದಾರ ಮನಸು ಭಾವನೆಗಳ ಭಾವಿಸಿತೊ ಪ್ರೀತಿಯೆಂದು ಕರುಣೆಯೆಂದು ಕಣ್ಣ ತುಂಬ ತುಂಬಿತೊ ಇದಾರ...

ಪ್ರಭುವೇ ಹಬ್ಬಗಳನ್ನೇಕೆ ಮಾಡಿದೆ

ನನ್ನ ಮನೆಯ ನೆತ್ತಿಯ ಮೇಲೆ ಸೂರ್ಯ ಇನ್ನೂ ಹುಟ್ಟಿರಲಿಲ್ಲ. ಒಲೆಗೆ ಬೆಂಕಿಯ ಕಾವು ಸಿಕ್ಕಿರಲಿಲ್ಲ ಚಳಿಯಲ್ಲಿ ನಡುಗುತ್ತ ಮಲಗಿದ್ದ ಹಸಿವಿನಿಂದ ಚಡಪಡಿಸುತ್ತಿರುವ ಮಕ್ಕಳಿಗೆ ಹೇಗೆ ಹೇಳಲಿ ನಾನು ನಮ್ಮ ರಂಜಾನಿನ ಉಪವಾಸ ಇನ್ನೂ ಮುಗಿದಿಲ್ಲ...

ಹೆಂಗಸು

'ನಾರಿ ನಾನೆಂದಕಟ ರೂಪಗೋಸಾಯಿ೧ ನನಗೀಯನೆನುವನೇಂ ದರ್ಶನದ ಭಾಗ್ಯಂ? ಹೆಮ್ಮೊಗನ ನೋಡದೇನವನ ವೈರಾಗ್ಯಂ? ಏತರೀ ವ್ರತವೊ!' - ಎಂದಳು ಮಿರಾಬಾಯಿ ೪ 'ಇವನಾದೊಡಂ ಗಂಡೆ? ಗೋಕುಲದೊಳೆಲ್ಲ ಹೆಂಗಸಲ್ಲದೆ ಗಂಡಸಿಲ್ಲಿ ಬರಸಲ್ಲ! ಅರಿಯಲಿವನಿಲ್ಲಿಹುದನಟ್ಟದಿರಳಲ್ಲ ಬೃಂದಾವನದ ದೇವಿ! ಇವನದೇಂ...

ನಾಟಕವೊಂದರ ಹಾಡುಗಳು – ೧

ಹಾಡು - ೧ ದಿಟ್ಟಿಸಿ ನೋಡುತಲಿದ್ದಳು ಕನ್ನಿಕೆ ಡಯೋನಿಸಸ್ಸನು ಸತ್ತಾಗ, ಅವನ ಮೈಯಿಂದ ಹೃದಯವ ಕಿತ್ತು ಕೈಯೊಳು ಅದನ್ನು ಹಿಡಿದಾಗ, ಹಾಡಿದರೆಲ್ಲಾ ಕಲಾದೇವಿಯರು ಮಹಾಯುಗಾದಿಯ ಚೈತ್ರದಲಿ, ದೇವರ ಸಾವೂ ಆಟ ಎಂಬಂತೆ ಕೂಡಿ ಹಾಡಿದರು...

ಮುನಿಯನ್ ಮೊಕ್ಕ್ ಮೂರ್ ನೀರು

ಕೊಕ್ರೆ ಮೀನ್ಗೆ ವೊಂಚ್ ಆಕ್ದಂಗೆ ಕಪ್ಪೇಗ್ ಆವು ಕಾಯ್ಕೊಂಡಂಗೆ ನಿಂತ್ಕಂಡೌನೆ ಮುನ್ಯ! ಯೆಂಡಾ ಮಾರೋ ಗೆಣ್ಯ! ಕುಡಿಯೋರ್‍ನ್ ಇಡದಿ ಸುಲದಾಕೋಕೆ ಮಡಗೌನ್ ಎಂಡದ್ ಮನೆಯ! ೧ ಕುಡಿಯೋರ್‍ಗ್ ಎಂಗಿದ್ರೇನು! ಬುಂಡೆ ತುಂಬಿದರಾಯ್ತ್ ಅಂದ್ ಮುನ್ಯ...

ಚಿದಂಬರ

ಕಲವಧುವಿನೊಲು, ಅಡಕದಲಿ ನಗುವ ಕೌತುಕ-ಕು- ತೂಹಲದ ಕಣಿಯ ಕಣ್ಣಲಿ ತೆರೆದು, ’ಮುಗಿಲ ನೀ- ಲಿಯ ಕುಡಿದು ಬಿಳಿದು ಮಾಡುವೆ’ನೆಂದು ಹಸಿದ ಹ- ಳ್ಳಿಯ ಹುಡುಗ! ಗುರುವೆನುವ ಗರುವಾಯಿಯಲಿ ನಿಂತಿ- ರಲು ಇದಿರುಗೊಂಡೆ ನನ್ನನು ನೀನು,...

ಏನ ಮಾಡಲಿರುವೆ ನೀನು

ಏನ ಮಾಡಲಿರುವೆ ನೀನಿದುವರೆಗೆ ಯಾರು ಮಾಡದ ಏನ ಕಲ್ಪಿಸಲಿರುವೆ ಯಾರಿದುವರೆಗೆ ಕಲ್ಪಿಸದ ಬಲೆಯ ನೇಯುವೆಯ ಜೇಡ ಆಗಲೇ ನೇಯ್ದಿದೆ ಕಲೆಯ ಬರೆಯುವೆಯ ಆ- ಕಾಶ ಆಗಲೇ ರೂಪಿಸಿದೆ ಮುತ್ತ ಪೋಣಿಸುವೆಯ ಇಬ್ಬನಿ ಆಗಲೇ ಪೋಣಿಸಿದೆ...

ಕಣ್ಣ ರೆಪ್ಪೆಯ ಕೆಳಗೆ

ಎಲ್ಲಿಂದ ಬರುತ್ತವೆಯೋ ಹಾಳಾದ ಕಣ್ಣೀರು? ಏಕೆ ಹರಿಯುತ್ತವೆಯೋ ಬಳಬಳನೆ ಸುಮ್ಮನೆ! ಗೋರಿಗಳ ಕೇರಿಯಲ್ಲಿ ಮಸಣ ಸಮಾಧಿಯಲಿ ಅಂತರಂಗದ ಏಕಾಂತ ದೂರದೂರದ ತನಕ ಹಬ್ಬಿರುವ ಮೌನದಲಿ ಕುಟುಕುತ್ತಿದೆ ಗೋರಿಕಲ್ಲು ಗಾಳಿಯಲಿ ಕನಸ ತೂರಿ! ಏಕೆ ಹರಿಯುತ್ತಿದೆ...

ಬೇಕು-ಬೇಡ

ಬೇಕೆಂಬುವ ಬಡತನವ ನ್ನೇಕೆ ಕರೆದುಕೊಳುವೆ? ಬೇಡದೆ ಬಹ ಬಲುಧನವ ನ್ನೇಕಕಟಾ ಕಳೆವೆ? ಹಗಲ ಕುಮುದದಿಂದುಭಿಕ್ಷೆ, ಶಿಶಿರಾಂತದ ಸುಮೋಪೇಕ್ಷೆ ನೆರೆಯಲೆಂದುಮಳವೆ? ೭ ಬೇಕೆನೆ ನೀನೊಮ್ಮೆ ಬಳಿಕ ಬೇಕೆನುವೆಲ್ಲವಂ- ಬೇಡುವುದಿನ್ನೇಕೆ ತುಳುಕ ಲಂಬುಧಿ ಸಲಿಲವಂ? ಬೇಡುವಂತೆ ಬಡವನಾದೆ-...