
ನೌಕರಿಯ ಕನಸುಗಳು ಕಂಡೂ ಕಂಡೂ ನನಸಾಗುವ ಹೊತ್ತಿಗೆ ಮಸಣ ಸೇರಿತ್ತು ಆಸೆ ಕೆರ ಸವೆದು ಕಿಸೆ ಹರಿದು ಊರ ಸೇರಿತ್ತು ಸೋತಾತ್ಮ. *****...
ಕನಸು ಕಂಡೆನು ಓಲೆಗೆ ಓಲೆಯನು ಅಂಧಳ ನಡಸುವ ಕೋಲಿದನು ಜಾತ್ರೆಗೆ ಕರೆಯುವ ಭ್ರಾತೃವನು ಕುರುಡಿಗೆ ಕಂಗಳ ತರಿಸುವನು ಪರಿಶೆಗೆ ನಾನಿದೊ ಹೊರಡುವೆನು ಬಯಸಿದ ಅಣ್ಣನೆ ದೊರೆತಿಹನು ವಿಷಯದ ವಿಷಮವ ತಳ್ಳುವೆನು ಚಂಗನೆ ನೆಗೆಯುತ ಹಾರುವೆನು ಜೀವದ ಪುರದೊಳು ನ...
ಬದುಕೆಂದರೆ… ಹೀಗೇ… ಬಳ್ಳಾರಿ ಬಿಸಿಲಿನಾ ಹಾಗೇ… ‘ಉಸ್ಸೆಪ್ಪಾ’,,, ಎಂದರೂ, ಮುಗ್ಳಾಗ ‘ಜಟ ಜಟ’ ಇಳಿದರೂ ಬಿಡದು! ಝಣ ಝಣ… ಹಲಗೆ ಬಡಿತದ, ಬಿಸಿಲಿನ, ಬಿಸಿ ಬಿಸಿ ಹವೆಯ ಸಂಪು! ಮೈಮನ ಹಾವಿನಂಗೆ, ಮುಲು ಮುಲು ಹರಿದಾಡುವ, ...
ಮರೆತು ಬಿಡು ಇರುವ ನೆನಪುಗಳನೆಲ್ಲಾ ಗಂಟುಕಟ್ಟಿ ಎಸೆದು ಬಿಡು ತೇಲಿ ಹೋಗಲಿ ಸಪ್ತ ಸಮುದ್ರಗಳ ತೀರ ದಾಟಿ ತೂರಿ ಬಿಡು ಬರೆದ ಓಲೆಯನೆಲ್ಲಾ ಹರಿದು ಚೂರು ಚೂರು ಹಾರಿಹೋಗಲಿ ಊರು ಕೇರಿಗಳ ಎಲ್ಲೆ ಮೀರಿ ಸುಟ್ಬುಬಿಡು ಕಳೆದ ದಿನಗಳನೆಲ್ಲಾ ಒಟ್ಟು ಕಟ್ಟಿಗೆ...
ಕಾಣುವುದೊಂದೇ ನಿಜವೇನು ಕಣ್ಣಿನಾಚೆಯದು ಸುಳ್ಳೇನು? ಕರಣವ ಮೀರಿ ಹರಣಕೆ ಹಾಯುವ ಸತ್ವವೆ ಸೋಜಿಗ ಅಲ್ಲೇನು? ಕಣ್ಣಿಗೆ ಹಾಯದ ಕಿರಣ ಇವೆ ಕಿವಿಗೂ ಮೀರಿದ ದನಿಗಳಿವೆ, ಕಂಡರು ಏನು ಕಾಮನ ಬಿಲ್ಲು ಸುಳ್ಳು ಎನ್ನುವುದು ತಿಳಿದೆ ಇದೆ, ಬುದ್ಧಿಯೆ ಅರಿವಿನ ಒ...
ಶ್ರೀಮಾನ್ ದ ರಾ ಬೇಂದ್ರೆಯವರಿಗೆ ದೋಷರಾಹಿತ್ಯದಾ ಕಲ್ಪನಾ ರಾಜ್ಯದೊಳು ಸಗ್ಗದೂಟವನುಣುವ ಹಿರಿಯ ಕಬ್ಬಿಗನೇ ನಿನ್ನ ಕಾಣಲು ಬಯಸಿ ಹಲವಾರು ದಿನಗಳಿಂ ಇಣಿಕಿಣಿಕಿ ನೋಡುತಿದೆ ಈ ಸಣ್ಣ ಮನವು ಕವಿಯ ಬರೆಹವ ಕಂಡ ರಸಬಿಂದುಗಳ ಸವಿಯೆ ಸುಳಿಯುತಿದೆ ಭೃಂಗದೊಲು...
ಚಿದ್ರೂಪನಂತೆ ತೊಳ ತೊಳಗಿ ಬೆಳಗುತಿಹ ದಿವ್ಯಜ್ಞಾನಿ ತಾತ ಸದ್ಗುಣದ ಕಣಿಯು ಬಹುಪೂಜ್ಯನೆಂದು ಮನ ಗಂಡೆನೆಂದೊ ಪೂತ ನಿಜತತ್ವವರಿತು ಗುರು ಪೀಠವೇರಿ ಮೆರೆದಿರುವ ಕರ್ಮಯೋಗಿ ವಿಜಯವನುಗೈದೆ ಅದ್ವೈತದೊಳಗೆ ಬಿಡು ನೀನೆ ಪರಮ ತ್ಯಾಗಿ ಇಂದ್ರಿಯವ ಜಯಿಸಿ ಬಂಧ...













