ಜೀವನ: ಬಣ್ಣ ಬಣ್ಣದಾ ಬಾಲಂಗೋಚಿ!
ಗಾಳಿಲಿ, ತೇಲಿ ತೇಲಿ ಸಾಗಿದೆ, ಪಟ ಪಟನೇ ಜೀವನಪಟದಿ-
ಬದುಕು ಭಾರ! ದಾರದಲಿ ಸೂತ್ರವಿದೆ, ಜೀವವಿದೆ, ಮರೀಬೇಡ!
ಜಗಕೆ ಸೂತ್ರವುಂಟು, ಜೀವ ಉಂಟು ನಂಬಬೇಡ.
*
ಹಾರಿ ಹಾರಿ, ರೆಕ್ಕೆ ಬಂದ, ಹಕ್ಕಿಯಾಗಲು ಸಾಧ್ಯವೇನು?
ತೇಲಿ ತೇಲಿ, ಕಡಲ ಮೇಲೆ, ಹಡುಗು ನೀ… ಎಂದರೇನು?
ಮೀನು ಮಿನುಗಿ, ಬಾನ ಚುಕ್ಕಿಯಾಗಿ, ಸಾಮಾನ್ಯನೇನು?
ಸಪ್ತ ಸಾಗರಗಳ, ಈಜುವುದು ಪುಟ್ಟ, ಮೀನೆಂದರೇನು?
ಜಗದ ಸೂತ್ರದಾರನ, ಕೈಗೊಂಬೆ ನೀ… ನಂಬುವೆಯೇನು?!
*
ಬಣ್ಣ ಬಣ್ಣದ, ಜಗದ ಕಣ್ಣ ಬಣ್ಣ, ತುಂಬಿದಾ ಅಣ್ಣನೆಲ್ಲಿಹನು??
ಹಾವಿನಂದದಿ, ತೆವಳುತಾ ಸಾಗಿಹ, ಜೀವನ ಪಟವೇ…
ಮುಗಿಲ ಮಾರಿಗೆ, ರಂಗು ತಂದ, ನಿಮಿಷವೇ…
ಸೂತ್ರದಾರನ ಆಟ ನಿಲ್ಲಿಸಿರೆ, ನೀ ಪಾತಾಳವೇ…
*
ಮುಂಜಾನೆ ಮಂಜಿನಂತೆ, ಜೀವನ ಪಟವು!
ಗುಡುಗು, ಸಿಡಿಲು, ಮಳೆ, ಗಾಳಿ, ಮಿಂಚಿನಂತೆ ಜೀವನ!
ಏರುಪೇರು, ನೀರ ಗುಳ್ಳೆ, ಹಗಲುರಾತ್ರಿ ನಿರಂತರ!
ಕಾಮನ ಬಿಲ್ಲಿನಂದದಿ, ಕ್ಷಣಿಕ ಜೀವನ ಯಾತ್ರೆಯು!
*****