ಮರೆತು ಬಿಡು
ಇರುವ ನೆನಪುಗಳನೆಲ್ಲಾ
ಗಂಟುಕಟ್ಟಿ ಎಸೆದು ಬಿಡು
ತೇಲಿ ಹೋಗಲಿ ಸಪ್ತ
ಸಮುದ್ರಗಳ ತೀರ ದಾಟಿ
ತೂರಿ ಬಿಡು
ಬರೆದ ಓಲೆಯನೆಲ್ಲಾ
ಹರಿದು ಚೂರು ಚೂರು
ಹಾರಿಹೋಗಲಿ ಊರು
ಕೇರಿಗಳ ಎಲ್ಲೆ ಮೀರಿ
ಸುಟ್ಬುಬಿಡು
ಕಳೆದ ದಿನಗಳನೆಲ್ಲಾ
ಒಟ್ಟು ಕಟ್ಟಿಗೆಯಿಟ್ಬು
ಬೆರೆತು ಹೋಗಲಿ ಬೂದಿ
ಗಾಳಿಯಲಿ ತೇಲಿ ತೇಲಿ
ನಿಂತು ಬಿಡು
ಒಲವ ಶಿಲೆಯಾಗಿ
ಗೊಮ್ಮಟನಂತೆ
ಇರಲಿ ಸುಖವಾಗಿ ನಿನ್ನಿನಿಯಳು
ತನ್ನಿನಿಯನಿಚ್ಛೆಯಂತೆ!
*****