ಹನಿಗವನ ಹುಡುಕಾಟ ಲತಾ ಗುತ್ತಿ March 26, 2017February 13, 2019 ಎಣ್ಣೆ ದೀಪದ ಬೆಳಕಿನ ಪ್ರೀತಿ ಬದುಕಿನ ಅರ್ಥ ಅಜ್ಞಾನಿಗಳಲಿ ಕಂಡಷ್ಟು- ಹಂಡ್ರೆಡ್ ವ್ಯಾಟ್ಸ್ ರಾಶಿಯ ಬೆಳಕಿನಲ್ಲಿ ಈಗ ಹುಡುಕಾಡುತ್ತ ಬಿ.ಪಿ. ಏರಿಸಿಕೊಳ್ಳುತ್ತಿದ್ದೇವೆ. ***** Read More
ಹನಿಗವನ ನೀರು ಲತಾ ಗುತ್ತಿ March 19, 2017February 13, 2019 ಹೊಳೆ ನೀರು, ಹಳ್ಳದ ನೀರು, ಕೆರೆ ನೀರು, ಕೊಳ್ಳದ ನೀರು, ಬಾವಿ ನೀರು, ನಲ್ಲಿ ನೀರು, ಚರಂಡಿ ನೀರು, ಬರ್ಫು ನೀರು, ಸಮುದ್ರ ನೀರು, ನಿಂತ ನೀರು, ಎಲ್ಲಾ ನೀರೆಯರು ರುಚಿ ಶುಚಿ ಪಾವಿತ್ರ್ಯತೆ... Read More
ಹನಿಗವನ ಮಳೆಯಾಟ ಲತಾ ಗುತ್ತಿ March 12, 2017February 13, 2019 ಮೊಮ್ಮಕ್ಕಳು ಅಂಗಳಕ್ಕಿಳಿದು ಕಳ್ಳ ಮುಳ್ಳೆಯಾಡಲು ಮಳೆ ಛಾಣಿಸುವ ಮುದುಕಿಗೆ ಅದೆಷ್ಟು ಸಂತೋಷ. ***** Read More
ಹನಿಗವನ ಬ್ಯಾಂಕ್ ಲತಾ ಗುತ್ತಿ March 5, 2017February 13, 2019 ಮಳೆ ಹನಿಗಳನ್ನು ಆರಿಸಿ ಹಳ್ಳ ಹೊಳೆಗಳಲ್ಲಿ ತುಂಬಿಸಿ ಕೊನೆಗೆ ಸಮುದ್ರದ ಸೇಫ್ಟಿ ಲಾಕರ್ ದಲ್ಲಿ ಇಟ್ಟುಬಿಡುತ್ತದೆ ಭೂಮಿ ***** Read More
ಹನಿಗವನ ಸಮುದ್ರ ಲತಾ ಗುತ್ತಿ February 26, 2017February 13, 2019 ಸಮುದ್ರ ರಾಜ ನೀನದೆಷ್ಟು ಬಕಾಸುರನಪ್ಪ ಸಿಕ್ಕದ್ದನೆಲ್ಲಾ ತಿಂದು ತೇಗಿ ಹೊಳೆ ಹಳ್ಳಗಳನ್ನೆಲ್ಲಾ ನುಂಗಿ ಮೇಲೆ ಲಕಲಕನೆ ಹೊಳೆಯುತ್ತೀಯಲ್ಲ! ರೋಮನ್ ಟಾರ್ಜನ್ ತರಹ!! ***** Read More
ಹನಿಗವನ ಹಿತ ಲತಾ ಗುತ್ತಿ February 19, 2017February 13, 2019 ಆಕಾಶದಲ್ಲಿ ಏರ್ ಕಂಡಿಶನ್ ಬಾಕ್ಸ್ ಚಂದ್ರ ಇಡೀ ರಾತ್ರಿ ದೇಶಕ್ಕೆಲ್ಲಾ ತಂಪುಸುರಿಸಿ ಮರೆಸುವನು ಕೃತಕ ಏ.ಸಿ, ಫ್ಯಾನ್ ಗಾಳಿ ***** Read More
ಹನಿಗವನ ಕುಂಬಕರ್ಣರು ಲತಾ ಗುತ್ತಿ February 12, 2017February 13, 2019 ವರ್ಷಂಪ್ರತಿ ಮೆರೆದು ಮೆರೆದು ಸುಸ್ತಾದ ಚಂದ್ರ ಚುಕ್ಕೆಯರು ಮಳೆಗಾಲದಲ್ಲಿ ಮೋಡದ ಕರ್ಟನ್ ಎಳೆದು ಬೆಚ್ಚಗೆ ಮಲಗಿಬಿಡುತ್ತಾರೆ ***** Read More
ಹನಿಗವನ ಸೂರ್ಯಾಸ್ತ ಲತಾ ಗುತ್ತಿ February 5, 2017February 13, 2019 ಸೂರ್ಯ ಮಗನೆಂದಾದರೆ ತಾಯಿ ಸಮುದ್ರವಾಗಿರಲೇ ಬೇಕು ರೊಚ್ಚು ಕಿಚ್ಚಿನ ಮಗನ ಸಂತೈಸುವಳು ತಾಯಿ ತನ್ನ ಉಡಿಯಲಿ ಹಾಕಿಕೊಂಡು. ***** Read More
ಹನಿಗವನ ಚಂದ್ರ ಲತಾ ಗುತ್ತಿ January 29, 2017February 13, 2019 ಎಂಟಾನೆಂಟು ದಿನಗಳವರೆಗೆ ಎಡಬಿಡದೆ ಕಿಟಕಿ ಒದ್ದು ಕಾಚು ಒಡೆದು ನನ್ನ ತಲೆದಿಂಬಿಗೆ ಇಂಬಾಗಿ ನನ್ನ ರಂಗೇರಿಸುವವ- ***** Read More
ಹನಿಗವನ ಸೂರ್ಯ ಲತಾ ಗುತ್ತಿ January 22, 2017February 13, 2019 ನನ್ನ ಸಂಘರ್ಷಣೆಯ ಭಾವನೆಗಳಿಗೆ ಹುಲ್ಲು ಹಾಕಿ ಗಹಗಹಿಸಿ ನಗುವವ- ***** Read More