ತುಘ್ಲಕ

ಸಂಜೆಯಾಗಿತ್ತು ಇಡಿಯ ದೆಹಲಿ ಸ್ತಬ್ದವಾಗಿತ್ತು ಎಲ್ಲೆಲ್ಲೂ ತೆರೆದ ಬಾಗಿಲ ಖಾಲಿ ಮನೆಗಳು ನಿನ್ನೆಮೊನ್ನೆಯ ವರೆಗೆ ಇಲ್ಲಿ ಇಷ್ಟೊಂದು ಜನರಿದ್ದರೆಂದು ನಂಬುವುದೆ ಕಷ್ಟವಾಗಿತ್ತು ಇಬ್ಬರೇ ನಡೆದಿದ್ದರವರು ದೊರೆ ಮತ್ತು ಪ್ರವಾಸಿ ಎದಿರಾಗುವುದಕ್ಕೆ ಯಾರೂ ಇಲ್ಲ ನಾಯಿಗಳೂ...

ಬಾಬರ

ಘೋರಿಯ ಮಹಮದನಿದ್ದ ಘಜನಿಯ ಮಹಮದನಿದ್ದ ಬಾಬರನೂ ಇದ್ದ ಬಾಬರ ಮಾತ್ರ ಬೇರೆಯಾಗಿದ್ದ ಅವನು ಕವಿಯಾಗಿದ್ದ ಕಾಬೂಲಿನ ಎತ್ತರದಲ್ಲಿ ನಿಂತು ಅವನು ದಕ್ಷಿಣದತ್ತ ನೋಡಿದನು ಪರ್ವತಗಳ ಆಚೆ ನದಿಗಳ ಕೆಳಗೆ ಹರಡಿತ್ತು ಉಪಖಂಡ ಕೊನೆಯಿಲ್ಲದಂತೆ-ಆ ಘಳಿಗೆ...

ತುತಂಖಮನ್

ಲಕ್ಸರಿನ ಬೀದಿಯಲ್ಲಿ ಪೋಲೀಸರು ಒಬ್ಬ ಕಳ್ಳನನ್ನು ಬಿಡದೇ ಮರ್ದಿಸುತ್ತಿದ್ದಾರೆ ಅವನ ದವಡೆ ಒಡೆದು ರಕ್ತ ನಿರಂತರ ಸೋರುತ್ತಿದೆ. ಕೈರೊದ ಕ್ಲಬ್ಬಿನಲ್ಲಿ ಒಬ್ಬಾಕೆ ಎಲ್ಲರನ್ನೂ ಕೇಳುತ್ತಿದ್ದಾಳೆ: ಹಿಂದಾದುದನ್ನು ನಾನು ಕಂಡಿದ್ದೇನೆ ಮುಂದಾಗುವುದು ನನಗೆ ಗೊತ್ತು- ಹಾಗಂದರೇನು?...

ಅಖಿಟೋಪ

ಮೆಸಪೊಟೇಮಿಯಾದ ಒಬ್ಬ ರಾಜ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿಯಬೇಕೆಂದು ಕೆತ್ತಿಸಿದ ತನ್ನ ಹೆಸರನ್ನು ಹೆಸರು ಅಖಿಟೋಪನೆಂದು ಹೆಬ್ಬಂಡೆಗಳ ಮೇಲೆ ಮೃತ್ತಿಕೆಗಳ ಮೇಲೆ ಮರದ ಕಾಂಡಗಳ ಮೇಲೆ ಬರೆಸಿದ ಪಠ್ಯ ಪುಸ್ತಕಗಳಲ್ಲಿ ಸೇರಿಸಿದ ಧರ್ಮಗ್ರ೦ಥಗಳಲ್ಲಿ ಪೂಜಾರಿಗಳ ಮಂತ್ರಗಳಲ್ಲಿ...

ಕವಿತೆ: ಶಾಂತಿನಾಥ ದೇಸಾಯಿ ಅವರಿಗೆ

ನೆನಪಿಸಿಕೊಳ್ಳಿ ರೆಡಿಂಗ್‌ನಿಂದ ಬ್ರೌಟನ್‌ವರೆಗಿನ ನಮ್ಮ ಯಾತ್ರೆಯನ್ನು. ಇಂಗ್ಲೆಂಡ್ ಮುಗಿದು ವೇಲ್ಸ್ ಮೊದಲಾಗುತ್ತಲೆ ಬದಲಾದ ಹವೆಯನ್ನು. ಬ್ರೌಟನ್ ಪಬ್ಬಿನಲ್ಲಿ ಸಂಜೆ ಕೈಗೊಂಡ ಮದ್ಯಪಾನ--ತಟಕ್ಕನೆ ಆರಂಭವಾದ ಬ್ಯಾಂಡಿಗೆ ತಾಳ ಹಾಕುತ್ತ ನೀವು ಕಳೆದ ಪ್ರಣಯಗಳ ಬಗ್ಗೆ ಮಾತಾಡುತ್ತ...

ಮಂಡಿಯಲ್ಲಿ ಕವಿ

ಮೊಟ್ಚೆಗಳಿವೆ ಉಪಮೆಗಳಂತೆ ಪ್ರತಿಮೆಗಳಂತಿವೆ ಹೊಟ್ಟೆಗಳು ಅರ್ಥವಿಸ್ತಾರ ಹೆಚ್ಚಿಸುವುದಕ್ಕೆ ವಿಸ್ತೃತ ಕುಂಡೆಯ ಹೆಣ್ಣುಗಳು (ಎಲ್ಲವನ್ನೂ ನೋಡುವುವು ಕವಿಯ ಜಾಗೃತ ಕಣ್ಣುಗಳು) ಗುಂಪಿನ ನಡುವೆ ಬೇಕೆಂತಲೆ ಸಿಕ್ಕು ಮೈಯೊರಸುವ ಮೈಗಳು ನುಡಿದರೆ ಮುತ್ತಿನ ಹರಳಿನಂತಿರಬೇಕು ಅ ರೀತಿಯ...

ನಾಯಿ ಹಾಗೂ ನಾಯಿಯ ಗೊಂಬೆ

ಒಂದನ್ನೊಂದು ಅಣಕಿಸುವಂತಿವೆ ಅವು! ಅದೇ ಮೈ ಅದೇ ಬಣ್ಣ ಅದೇ ನಿಲುವು ಅದೇ ಬಾಲದ ಅದೇ ಡೊಂಕು ಕಣ್ಣುಗಳಲ್ಲೂ ಅದೇ ಕವಿದ ಮಂಕು ಆದರೆ-ತಿಂಗಳು ನೆತ್ತಿಯ ಮೇಲೆ ಎದ್ದು ತೆಂಗಿನ ಸೋಗೆಗಳಲ್ಲಿ ಆದಾಗ ಸದ್ದು...

ಸೊರಾದ ಕೋಳಿಗಳು

ಸೊರಾದ ಕೋಳಿಗಳು ಕೊಕ್ಕೊಕ್ಕೋ ಕೂಗುವುದಿಲ್ಲ ಬೆಳಗಾಯಿತೆಂದು ಹೇಳುವುದಿಲ್ಲ ಸೊರಾದ ಕೋಳಿಗಳು ತತ್ತಿಗಳನ್ನು ಇಡುವುದಿಲ್ಲ ಕಾಳುಗಳನ್ನು ಹೆಕ್ಕುವುದಿಲ್ಲ ಸೊರಾದ ಕೋಳಿಗಳು ಎಲ್ಲಿಗೂ ಹೋಗುವುದಿಲ್ಲ ಕತ್ತುಗಳನ್ನೂ ಎತ್ತುವುದಿಲ್ಲ ಸೊರಾದ ಕೋಳಿಗಳಿಗೆ ಏನೋ ರೋಗ ಬ೦ದಿದೆ ತುಂಬಾ ಹೆದರಿದಂತಿವೆ...

ನೂರು ಮಂದಿ ಮನುಷ್ಯರು

ಒಮ್ಮೆ ನೂರು ಮಂದಿ ಮನುಷ್ಯರು ಸಿಕ್ಕಿಬಿದ್ದರು ಒಂದು ದ್ವೀಪದಲ್ಲಿ. ಮೊದಲು ಅವರು ಅಲ್ಲಿನ ಸಸ್ಯಗಳನ್ನು ತಿಂದರು. ನಂತರ ಅಲ್ಲಿನ ಪ್ರಾಣಿಗಳನ್ನು ಮುಗಿಸಿದರು. ನಂತರ ತಮ್ಮಲೊಬ್ಬರನ್ನು ವಾರಕ್ಕೊಂದರಂತೆ ತಿಂದರು. ಕೊನೆಗುಳಿದವನು ಒಬ್ಬನೇ ಒಬ್ಬ. ಅವನು ಮೊದಲು...

ಆಸನಗಳು

ನಾಯಿಗಳು ಬೊಗಳುತ್ತವೆ ಸಾಕಿದವರ ಏಳಿಗೆಗೆ ಕೋಳಿಗಳು ಹೋರಾಡುತ್ತವೆ ಮನೆತನದ ಹಿರಿಮೆಗೆ ಸ್ವಂತ ಜಗಳಾಡಿ ಬೇಸತ್ತವರು ಸೈನಿಕರ ಮೂಲಕ ಜಗಳಾಡುವರು ಇತರರ ಚದುರಂಗದಾಟದಲ್ಲಿ ತಮ್ಮ ಕುದುರೆಗಳನ್ನು ನಡೆಸುವರು ರತಿಯೆ ಆಸನಗಳು ಕೂಡ ಪರಿಮಿತವಾಗಿದ್ದರಿಂದ ನಾವು ನೆರಯವರ...