Home / Kasturi Bayari

Browsing Tag: Kasturi Bayari

ಕರಿ ಎರಿ ಹೊಲದಲ್ಲಿ ಘಮ್ಮೆಂದು ಕೆಂಪು ಹಾಯ್ದ ಬಳಿಜೋಳದ ತೆನೆ ತೆನೆಗಳಲಿ ಹಕ್ಕಿಹಿಂಡು ಹಾಡು ಬಿಚ್ಚಿ ಕೊಂಡ ಅನವು ಹೆಚ್ಚಾಗಿ ಹರಡಿತು ಭೂಮಿ ಎದೆ ಕುಬುಸ ಬಿಚ್ಚಿಕೊಂಡ ಉಲಿತ. ಮಾಗಿದ ಚಳಿಯ ಪದರಲಿ ಸೋಸಿ ಸೂಸಿದ ಚಿಗುರ ಗಂಧಗಾಳಿ ತೂರಿ ಜಿಗಿದವು ಕನಸು...

ಪ್ರೀತಿಯ ಗೆಳೆಯಾ, ಜೂನ್ ತಿಂಗಳು ಮೊದಲ ತಾರೀಕು. ಏನೋಧಾವಂತ, ಆತಂಕ ಎದೆಯೊಳಗೆ. ಇಂದು ಶಾಲೆಯ ಹೊಸ ಅಂಗಳದಲ್ಲಿ ಪುಟ್ಟ ಪಾದಗಳನ್ನು ಪ್ರಪ್ರಥಮವಾಗಿ ಹೆಜ್ಜೆ ಇಡುವ ಮಗುವಿಗೂ, ಅದರ ಅಪ್ಪ ಅಮ್ಮನಿಗೂ ಯಾವುದೇ ದೊಡ್ಡ ಯುದ್ಧದ ಮೈದಾನಕ್ಕೆ ಹೊರಡುವ ಆತಂಕ...

ತೆರೆದ ಮುಚ್ಚಿದ ಬಾಗಿಲುಗಳ ಸಂದಿಯಲಿ ಜೇಡ ನೇಯ್ದ ಬಲೆ ಮುಟ್ಟಿದೊಡನೆ ಕರಗಿ ಮತ್ತೆ ಕಟ್ಟುವ ಸಿಕ್ಕು ಕಳೆದು ಹೋದವು ದಿನಗಳ ನೇಯ್ಗೆಯ ಲಾಳಿಯಲಿ ಎಡೆಬಿಡದೇ ಕುಟ್ಟುವ ಮಗ್ಗದಲಿ. ನಾಡಿನ ದೇವರಿಗೆಲ್ಲಾ ಚೌಕಟ್ಟು ಪಡೆದು ಕುಂತ ಮಾಡಿನ ಸಂದಿಯಲ್ಲೂ ಮನಸ್ಸ...

ದಟ್ಟ ಮೆಳೆಯ ಬದುವಿನಲಿ ಅಂಡಲೆಯುತ್ತಿದ್ದ ಗೆಳತಿಗೆ ಎಲ್ಲೋ ಮರದ ತುದಿಯಲಿ ಪಕ್ಕನೆ ಕೈಸಿಕ್ಕ ಕೆಂಪು ಹಸುರಿನ ಬೋರಂಗಿ ಸಾಹಸದಿಂದ ಹಿಡಿದು ತಂದ ಮದರಂಗಿ. ಅದು ಪುರ್ರನೆ ಹಾರಿ ಮೈಯಲ್ಲಾ ರೋಮಾಂಚನ ಪುಟ್ಟ ಅಂಗೈತುಂಬ ಚೆಲುವಿನ ಚಿತ್ತಾರ ಸಾವಿರ ಸೂರ್ಯ ...

ಪ್ರತಿ ಸಂಜೆ ತಲೆಯ ಮೇಲೆ ಹಾಯ್ದು ಹೋಗುವ ರೆಕ್ಕೆಗಳ ತಂಪಿನಲಿ ನಿನ್ನ ಪ್ರೀತಿ ತೇಲಿ ಯಾವುದೋ ಪರಿಮಳ ಹೊತ್ತ ಸೂರ್‍ಯ ಮುಳುಗುತ್ತಾನೆ ಆತ್ಮದ ಬೇರುಗಳಲ್ಲಿ ಶಬ್ದಗಳು ಇಳಿಯುತ್ತವೆ. ನಕ್ಷತ್ರ ತುಂಬಿದ ನೀಲಿಯಲ್ಲಿ ಮಹಾ ಮೌನ ಅಗಾಧವಾಗಿ ಕೈ ಬೆರಳುಗಳಿಗೆ...

ಅಂತ ಕರಣ ಒಸರಿಸಿದ ರಸಪದದ ರಾಗ ಹರಿವ ನದಿಯ ಜುಳು ಜುಳು ಸಪ್ತಸ್ವರವಾದ ಸಪ್ತರ್ಷಿಮಂಡಲ ಮಿನುಗು ಮಿಂಚು ರಸಭಾವ ಎಲ್ಲ ತಲ್ಲಣಗಳ ದಾಟಿ ಒಡಲಿಂದ ಒಡಲಿಗೆ ಸೇರುವ ಅಂತರಂಗದ ಸಮುದ್ರ. ವೃಷ್ಠಿ ಸಮಷ್ಠಿಯ ಮಂಗಳ ಹಾಸು ಬೀಸಿದ ಹೃದಯದಲಿ ಶೀವನ ನಟುವಾಂಗ ತಿಳಿ...

ಎಣ್ಣೆಹಚ್ಚಿ ತಿದ್ದಿತೀಡಿ ಬೆಚ್ಚಗಿನ ಹಂಡೆಯಲಿ ಹದಕಾಯಿಸಿ ಕಾಲು ನೀಡಿ ಎರೆದು ಹಾಕಿದ ಕಂದ ಸಾಂಬ್ರಾಣಿಯ ಸೂಸು ಹೋಗೆ ಕಣ್ಣು ರೆಪ್ಪೆಯ ಮುಚ್ಚಿ ತೆಪ್ಪಗೆ ಮಲಗಿರುವ ತೊಟ್ಟಿಲಲಿ ಹಾಲು ಹೀರಿದ ಎದೆಯಲಿ ಚಿಲ್ಲನೆ ಮತ್ತೆ ಚಿಮ್ಮುತ್ತಿವೆ ಎದೆ ಹಾಲ ಹನಿಗಳ...

ನಿನ್ನ ಬಾನಂಗಳದಲಿ ನನ್ನ ಗಾಳಿಪಟ ತೇಲಲಿ ನೀಲಿ ಅಂಬರದಲಿ ಕನಸುಗಳು ಚಿಕ್ಕಿಗಳು ಮಿನುಗಲಿ, ನಿನ್ನೆತ್ತರ ಆಕಾಶದಲಿ ನನ್ನಾತ್ಮದ ಕನವರಿಕೆ ಹಕ್ಕಿ ರೆಕ್ಕೆ ಬಿಚ್ಚಿ ಬೀಸಿ ಹಾರಾಡಲಿ ಇಳೆಯ ಅಚ್ಚರಿಯ ಘನತೆಯಲಿ. ನೀ ಎಂಬ ಮಳೆ ಹನಿಹನಿಯಾಗಿ ಇಂಚರಿಸಲಿ ನನ್...

ಎಲ್ಲಾ ಹಕ್ಕಿಗಳು ಹಾರಿ ಹೋದವು ಬರಡು ಮರದಲಿ ಹಸಿರು ಕಾಣದೆ ಎಲ್ಲಾ ಚಿಕ್ಕಿಗಳು ಮಾಯವಾದವು ಪ್ರೀತಿ ಕಳೆದ ನೀಲಿ ಆಗಸದಲಿ. ಅಂಬರದ ಮುನಿಸಿಗೆ ತೆರೆಯಲಿಲ್ಲ ಅರಿವಿನ ರೆಕ್ಕೆಗಳು ಪಟಪಟ ಅಕ್ಷಗುಂಟ ಇಳಿದ ಹನಿಗಳು ಮೋಡವಾಗಲಿಲ್ಲ ಬಿರು ಬಿಸಿಲಿನಲಿ. ಹಾರಿ...

ನಿನ್ನ ಧ್ವನಿ ಕೇಳಿದಾಗ ಆಲಿಸಿದಾಗ ಕೈಯಲ್ಲಿ ಜಾರಿಹೋದವು ಸ್ಪರ್ಶಕೆ ಸಿಗದ ಶಬ್ದಗಳು ಒಮ್ಮೆಲೇ ಬಂದು ಎರಗಿದ ನೆನಪುಗಳು ಯಾವುದೋ ಪರಿಮಳ ಎದೆಯಲ್ಲಿ ಮುಳ್ಳಿನ ಕೇದಿಗೆಬನ ಕನಸಿನ ದಾರಿ ಗುಂಟ ದಡ ವಿಲ್ಲದ ನೆರಳು ಬೀದಿಯಲ್ಲಿ ಬೇಸಿಗೆ ಬಿಸಿಲ ಮರೀಚಿಕೆ. ...

1...89101112...20

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...