ಲಹರಿ

ಹಿಂಬಾಲಿಸಿ ಅತ್ತ, ಇತ್ತ ನೀ ತಿರುಗಿದತ್ತ, ಹೊರಳಿದತ್ತ, ಹರಿದತ್ತ ಆಸೆಬುರುಕ ಕಣ್ಣಲ್ಲಿ ಹತ್ತು ಹಲವು ಕೋನಗಳಲ್ಲಿ ಚಿತ್ರ ಎತ್ತಿಕೊಳ್ಳುತ್ತ ಸಂಧಿಗಾಗಿ ಹೊಂಚುತ್ತ ಬರ ಸೆಳೆಯೆ ಹುನ್ನಾರ ಹೂಡುತ್ತ ನೆವ ಸವದಲ್ಲಿ ತಾಕುತ್ತ ಅಲ್ಲಿ ಇಲ್ಲಿ...

ಆಶೆ-ಭಾಷೆ

ಹಾಡುವುದು ಕೋಗಿಲೆ ತನ್ನ ಆಶೆಯಂತೆ ಹಾಡೆ ಕೋಗಿಲೆಯ ಭಾಷೆಯಂತೆ ಅರಳುವುದು ಹೂವು ತನ್ನ ಆಶೆಯಂತೆ ಪರಿಮಳವೆ ಹೂವಿನ ಭಾಷೆಯಂತೆ ಉರಿಯುವುದು ಬೆಂಕಿ ತನ್ನ ಆಶೆಯಂತೆ ಬೆಳಕೆ ಬೆಂಕಿಯ ಭಾಷೆಯಂತೆ ಬೀಸುವುದು ಗಾಳಿ ತನ್ನ ಆಶೆಯಂತೆ...

ಎಂಟು ಬೇಡರು

ಮಗುವೆ, ನಿನ್ನಯ ಮೈಗೆ ಗುರಿ ಇಟ್ಟು ಹೊಡೆವಾ ಬಗೆ ಬಗೆಯ ಬೇಡರಿಂದಲಿ ದೂರವಾಗು. ಹೊತ್ತನ್ನು ತಿಂಬ ಸೋಮಾರಿತನ ಬೇಡ! ಮತ್ತು ಹಿಡಿಸುತ ಮೈ ಕೊಲುವ ಕಳ್ಳು ಬೇಡ! ಕತ್ತು ಕೊಯ್ಕರ ಕೂಡೆ ನಂಟುಬೇಡತನ! ಉತ್ತಮೋತ್ತಮರಲ್ಲಿ...

ಆತ್ಮ ಮತ್ತು ಸಾಕ್ಷಿ

ಪ್ರೀತಿ ದ್ವೇಷದ ರಹಸ್ಯಗಳು ಆತ್ಮವನ್ನು ಕುಟುಕಿದ ನಿಗೂಢಗಳು ಪಾತಾಳಕ್ಕೆ ಕುಸಿಯುವ ಕನಸುಗಳು ಕ್ಷಣ ಕ್ಷಣಕ್ಕೂ ಬೆತ್ತಲಾಗುತ್ತಿರುವ ಪಾಪ ತುಂಬಿದ ಆತ್ಮಗಳು ಅಲೆಮಾರಿ ಮೋಡಗಳು ಪಾಪಾತ್ಮಗಳನ್ನು ತೊಳೆಯಲು ಮಳೆಯನ್ನು ತರಲಿಲ್ಲ ಕಲಬೆರಿಕೆ ಕನಸುಗಳು ಭೂಮಿ ಸೂರ್‍ಯರು...

ಮನೆವಾಳ್ತನ

ಅಬ್ಬೆಪಾರಿಗಳು ಮನೆವಾಳ್ತನಕಿರಬಾರದು ಕೈ ಹಿಡಿದವಳು ಸೇರಿದಂತೆ ಎಲ್ಲರಿಗೂ ಸದರ ಮನೆ ಅಳಿಯ ಅತ್ತ ಮಗನೂ ಅಲ್ಲದ ಇತ್ತ ನೆಂಟನೂ ಅಲ್ಲದ ಆಟಕ್ಕುಂಟು ಲೆಕ್ಕಕ್ಕಿಲ್ಲದ ಮುಲಾಜು ಬದುಕಿನ ವ್ಯಕ್ತಿ ಸರಿಕಂಡದ್ದ ಮಾಡುವ ಹಾಗಿರಲ್ಲ ಸ್ವತಂತ್ರವಾಗಿ ನಡೆಯೋ...

ಬಜಾರಿನಲ್ಲಿ ಬುದ್ಧ….

ಬಜಾರಿನಲ್ಲಿ ಇದ್ದ ಬುದ್ಧ ರಾಮ, ಕೃಷ್ಣ, ಶಿವ, ಗಾಂಧಿ ಅಂಬೇಡ್ಕರ್ ಅವರ ಜೊತೆಗೆ ಕುಳಿತಿದ್ದ. ಮೊಂಡು ಕೈ, ಹರಿದ ಅಂಗವಸ್ತ್ರ.... ಬುದ್ಧ ಹೌದೋ ಅಲ್ಲವೋ ಎಂದು ಅನುಮಾನಿಸುವಷ್ಟು ಚಿಂದಿಯಾಗಿದ್ದ. ಆದರವೇ ಜಾಜ್ವಲ್ಯಮಾನ ಕಣ್ಣುಗಳು ಸೆಳೆದವು,...

ಆಡಿನಾ ಮರೀ!

ಆಡಿನಾ ಮರೀ, ಆಡ ಬಾರೆಲೆ! ಓಡ ಬೇಡೆಲೆ, ನೋಡಿ ನನ್ನನು! ಅರಳಿ ಎಲೆಯನೂ, ಹಲಸಿನೆಲೆಯನೂ, ಹುರುಳಿ ಕಡಲೆಯಾ, ಕಲಸಿ ಕೊಡುವೆನು. ಮಾತನಾಡದೇ, ನನ್ನ ನೋಡದೆ, ಏತಕ್ಹೋಗುವೆ? ಆಡಿನಾ ಮಗೂ! ***** (ಕವಿಶಿಷ್ಯ)

ಮುಕ್ತಿ ಮಂತ್ರ

ಗಟ್ಟಿಯಾಗದೇ ಬದುಕು ದಕ್ಕದುನ್ನು ಕೆರೆ ಬಾವಿಗಳ ಪಾಲು ಆಗದಿರು ಹಗ್ಗದ ಉರುಳಿಗೆ ನಿನ್ನ ಕೊರಳ ನೀಡದೇ ಸುತ್ತಲೂ ಕಟ್ಟಿದ ಉಕ್ಕಿನ ಗೋಡೆ ಬೆಂಕಿಯ ಜ್ವಾಲೆಗೆ ದೂಡುವ ಕೈಗಳನ್ನು ಕತ್ತರಿಸಲು ಝಳಪಿಸುವ ಖಡ್ಗವಾಗು. ಶತ್ರುಗಳ ಸೆಣಸಿ...

ಗಾಂಧಿ

ಇಲ್ಲವೆಂದರೂ ಇಲ್ಲವಾಗುವುದೇ? ನೆನಪು- ಹುಲ್ಲು ಗರಿಕೆಯಂತೆ ಹಸಿರಾಗಿದೆ. ಆ ಚಿತ್ರ ಅವನದೇ ಮಳೆಬಿಲ್ಲಿನಂತೆ ಭರತ ಖಂಡದ ಮೇಲೆ ಬಾಗಿದೆ ತಂಗಾಳಿ ಅದನು ತೂಗಿದೆ. ಕಣೋಳಗಿನ ಮಿಂಚು ಭೂಮಂಡಲವ ಬೆಳಗಿದೆ ನಿಸ್ವಾರ್ಥ ನಗೆ ಮೂಲೆ ಮೂಲೆಯನೂ...

ಬಸವಿ ಮಗಳು

ನಾಲ್ಕು ಜನರಿರುವ ಜಾಗವನ್ನು ದಾಟಿ ಹೋಗ ಬೇಕೆಂದರೆ ಕುತ್ತಿಗೆಗೆ ಬರುವುದು ಜನರ ನೋಟ ಹೊಟ್ಟೆಯೊಳಗೆ ಕಟ್ಟು ಚೂರಿಯನ್ನಾಡಿಸಿದಂತಾಗುವುದು ಮಾತುಗಳು ನಗಾರಿಯ ಭೇರಿಯಂತೆ ತಮಟೆ ಹರಿಯುವವು ತಲೆ, ತಂತಾನೆ ಮಣ ಭಾರ ವಾಗುವುದು; ಮೇಲೆತ್ತದಂತಾಗುವುದು ನಿತ್ರಾಣವಾಗಿ...