ಹೋಗೋಣ ಬನ್ನಿರಣ್ಣಾ ಸೂಕ್ಷೇತ್ರ ಹಾರಕೂಡಕೆ
ಗುರು ಚನ್ನವೀರರ ಶಾಂತಿಧಾಮಕ್ಕೆ ||ಪ||
ಮೊದಲಿಗೆ ಕಾಣುವುದು ಗುಡಿಶಿಖರವು
ನಂತರವ ಆಗುವುದು ಗುರುದರ್ಶನವು
ಜಾತಿ ಮತ ಪಂಥಗಳ ಭೇದವ ಅಳಿಸಿದಿ
ಒಂದೇ ತಾಯಿ ಮಕ್ಕಳೆಂದು ಸಾರಿ ನೀ ಹೇಳಿದಿ.
ಕನ್ನಡಾಂಬೆಯ ಮಡಿಲಲ್ಲಿ ಹುಟ್ಟಿ ಬೆಳದಿದಿ
ಮುಂದೇ ತನ್ನ ವಿದ್ಯಾರ್ಜನೆಗೆಂದು ಹೋದಿ.
ಹುಬ್ಬಳಿ ಮೂರು ಸಾವಿರ ಮಠದಲ್ಲಿ ಕಲಿತಿದಿ.
ಮಲೆನಾಡಿನಲ್ಲಿಯೇ ವಿದ್ಯಾಸಂಪೂರ್ಣ ಪಡದಿ.
ಮಹಾತ್ಮಗಾಂಧಿ ಆದರ್ಶ ಮಾರ್ಗವೇ ಅರಿತಿದಿ
ಧರ್ಮದ ಏಳಿಗೆಗಾಗಿ ಹಗಲಿರುಳು ದುಡಿಯುತ್ತಿದಿ.
ಅಂಧಕಾರದ ವಿರುದ್ಧ ಭಂಡೆಳಂದಿ.
ಪ್ರಮಾಣಿಕತೆಗಾಗಿ ಪ್ರಾಣ ಅರ್ಪಿಸಂದಿ.
ತನ್ನ ಪ್ರಾಣವನೇ ಮಾನವಕುಲಕ್ಕಾಗಿ ಅರ್ಪಿಸಿದಿ.
ಹಾಳ ಹರಕೂಡವನೇ ಕೈಲಾಸ ಏನಿಸುತ್ತಿದಿ.
ಕಾಯಕದಿಂದಲೇ ಸ್ವರ್ಗವೆಂದು ಸಾರುತ್ತಿದಿ.
ಶಾಂತಿಯಿಂದಲೇ ಜನರಿಗೆ ತಿಳಿಸಿ ನೀ ಹೇಳಿದಿ.
ಸುವಿಚಾರ ಕಲಿಸಿ ಸುಹೃದಯ ಮಾಡಿದಿ
ಝಕಣಚಾರಿಯಂತೆ ಹಗಲಿರುಳು ನಿದ್ರೆಗೆಟ್ಟು ಬಳಲಿದಿ
ವೀರಶೂರ ಧೀರನೆಂಬ ಕೀರ್ತಿಗೆ ಕಾರಣನಾದಿ.
ಗುರುದೇವೋಭವ ಎಂಬ ಕೀರ್ತಿಗೆ ಕಾರಣನಾದಿ.
ಓ ಪುಣ್ಯದ ಪುತ್ಥಳಿಯೇ ಬಾಳ ಬೆಳಕಿನ ಬೆಳ್ಳಿಚುಕ್ಕಿಯೆ
ನಿನ್ನ ಪುಣ್ಯದಿಂದ ಆ ಗುರುವನ್ನು ಕಂಡೆ.
ಮುಕ್ತಿಯ ಮಹಾ ಮಾರ್ಗವನ್ನು ಕಂಡೆ ನಿಜ
ಆ ಗುರುವೇ ಶ್ರೀ ಚನ್ನವೀರ ಶಿವಯೋಗಿ.
*****
೦೭/೦೫/೧೯೯೬