ಬೇರಿಳಿಸಿ ಬೆಳೆಯುತ್ತಿದೆ
ಬುಡ ಸಡಿಲವೆನ್ನುವ
ಅರಿವಿಲ್ಲದೆ
ಎಲ್ಲೋ ಮೊಳೆತು, ಚಿಗುರಿ
ತಾಯ ಗಿಡವ ಮೀರಿ
ಸಾರವೆಲ್ಲ ಹೀರಿ
ಎತ್ತರವ ಏರಿ
ಬೆಳೆಯುವನೆಂಬ ಹಮ್ಮು
ಅದೆಷ್ಟು ಗಳಿಗೆ
ಕರುಳ ಹರಿದು ನೆತ್ತರವಹರಿಸಿ
ಬುಡಕಿತ್ತ ಬೇರು
ಮತ್ಯಾವುದೋ ಮಣ್ಣಿನಲಿ
ಆಳವಾಗಿ ಹೂತು
ಬೇರಿಳಿಸಿ
ಬೆಳೆಯುವುದೆಂತಹ
ಸೋಜಿಗ
ತಾಯಿ ಗಿಡವ ಮರೆತ ನೋವು
ಮುರುಟಿ ಕ್ಷಣದೊಳಗೆ
ಬೇರ ಇಳಿಸಿ
ಸಾರ ಗಳಿಸಿ
ಮೆಲ್ಲನೆ ತಲೆ ಎತ್ತಿನಿಂತ ಪರಿ
ಆಹಾ ಪ್ರಕೃತಿ ಎಂಥ ಉದಾರಿ
ಮಣ್ಣು ಯಾವುದಾದರೇನು
ಬೇಕಷ್ಟೆ ಒಂದಿಷ್ಟು ನೀರು,
ಬೆಳಕು
ಜೊತೆಗಷ್ಟು ಸಾರ
*****
Related Post
ಸಣ್ಣ ಕತೆ
-
ವಾಮನ ಮಾಸ್ತರರ ಏಳು ಬೀಳು
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
-
ಯಿದು ನಿಜದಿ ಕತೀ…
ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ... ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ, ವುಗಾದಿ… Read more…
-
ಪಾಠ
ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…
-
ಬಾಗಿಲು ತೆರೆದಿತ್ತು
ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…
-
ಧನ್ವಂತರಿ
ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…