ಉಗಾದಿ ಬಂದಿದೆ, ತಗಾದಿ ತಂದಿದೇ…
ಮನ ಮನೆಗೆ! ಬೇವು ಬೆಲ್ಲ ತಂದಿದೆ!
ಮುರುಕು ಗೋಡೆಗೆ… ಕೆಮ್ಮಣ್ಣು, ಸುಣ್ಣ, ಬಣ್ಣ, ಬಂದಿದೆ!
ಅಂಗಳಕೆ ಕುಂಕುಮ, ಚಂದ್ರ ಬುಕ್ಕಿಟ್ಟು ಚೆಲ್ಲಿ, ರಂಗೋಲಿ ತಂದಿದೆ.
೧
ಹರಕು ಚೊಣ್ಣ, ಮುರುಕು ಮುದ್ದೆ… ಹೋಗಿ,
ಬಿಸಿ ಬಿಸಿ… ಹೋಳಿಗೆ, ತುಪ್ಪ, ಬಾನ, ಚಾರೂ ತಂದಿದೆ!!
ಒಣ ಮರ ಮರದಾ, ಗಿಣ್ಣೆ ಗಿಣ್ಣೆಗೆ, ಜೀವ ಸೆಲೆ ತಂದಿದೆ
ಬಡ ಜನತೆ ಕೊರಳಿಗೆ, ಸಾಲದಾ ಉರಲು ತಂದಿದೆ!
೨
ಯುಗ ಯುಗಕೂ, ನಗು ನಗು ತರುವುದೇ ಉಗಾದಿ,
ಉಗಾದಿ ಕಳೆದ, ಮಾರನೆ ದಿನ, ನಮ್ಮ ಕೇರಿಗೆ ಬಂತು ತಗಾದಿ!
ಇಂಥಾ ಹಬ್ಬಕ್ಕೆಂದೇ, ಹೊಸತು ಬಟ್ಟೆ, ಹೊಸದು ಅಡಿಗೆ ನಮ್ಮದೇ…
ನಿತ್ಯ ಹರಕು ಬಟ್ಟೆ, ಹಳಸಿ, ಹಸಿದ ಹೊಟ್ಟೆ, ನಿತ್ಯ ಸತ್ಯ ಉಗಾದಿ!
೩
ಇದ್ದವರಿಗೆ… ದಿನ ದಿನ ಸಂತಸ, ಸಂಭ್ರಮಗಳೇ ಉಗಾದಿ,
ಇಲ್ಲದವರಿಗೆ ತೊಡಲು ಬಟ್ಟೆ, ಹಸಿದ ಹೊಟ್ಟೆದೇ ತಗಾದಿ!
ಮಾವು ಚಿಗುರು, ಹೊಂಗೆ ನೆರಳಿಗೆ, ಹೊಟ್ಟೆ ತುಂಬಿರೇ…
ನಿತ್ಯ ಕೂಡಿ, ಪಾಡಿ, ಹಾಡರೆ, ಕುಹು ಕುಹು ಕೋಗಿಲೆದೀ ಜನಾಽ…??
೪
ಉಳ್ಳವರಿಗೆ-ದಿನ ನಿತ್ಯ, ಉಗಾದಿಯ ಸಿಹಿಸಿಹಿ ಮೂತ್ರ…
ಇಲ್ಲದವರಿಗೆ ಉಗಾದಿ ದಿನದಂದು ಸಿಹಿ ಸಿಹಿ ಹೂರಣ!
ಪ್ರಕೃತಿ ತೊಡುವ, ಚೈತ್ರದ, ಚೈತನ್ಯದ ಮುಂದೆ,
ಈ ಹುಲುಮನುಜರ ತಂತ್ರ, ಪಕ್ಷಪಾತ, ಬೇವಿಗೂ ಕಹಿ!
*****