“ಗ್ರೀನ್‌ಹೌಸ್” ಎಂದರೆ “ಹಸಿರುಮನೆ” ಎಂದರ್ಥ. ಒಂದು ದೊಡ್ಡ ಮನೆಯಾಕಾರದ ಕಟ್ಟಡ ಗಾಜು ಅಥವಾ ಪ್ಲಾಸ್ಟಿಕ್‌ನಿಂದ ತಯಾರಿಸುತ್ತಾರೆ. ಈ ಮನೆಯಲ್ಲಿ ಗಾಳಿ, ಉಷ್ಣತೆ, ಇಂಗಾಲದ ಡೈಆಕ್ಸೈಡ್, ತಂಪು ಮುಂತಾದವುಗಳನ್ನು ಅಗತ್ಯವಿದ್ದಷ್ಟು ಪೂರೈಸಿ ಗಿಡಗಳನ್ನು ಬೆಳೆಸುತ್ತಾರೆ. ಈ ಮನೆ ಸೂರ್ಯನಿಂದ ಬರುವ ಬಿಸಿಲನ್ನು ಹೀರಿಕೊಳ್ಳುತ್ತದೆ, ಆದರೆ ಬಿಡುವುದಿಲ್ಲ. ಹೀಗಾಗಿ ಇದರಲ್ಲಿನ ಉಷ್ಣತೆ ಹೆಚ್ಚುತ್ತಾ ಹೋಗುತ್ತದೆ.
ನೈಸರ್ಗಿಕ ಹಸಿರುಮನೆ
“ಓಜೋನ್” ಎಂಬುದು ವಾಯುವಿನ ಒಂದು ರೂಪ. ಇದು ವಾತಾವರಣದ ಹೊರಗಿನ ಅಂದರೆ ನೆಲದಿಂದ ೧೫ ಕಿ.ಮೀ. ಮೇಲೆ ೫೦ ಕಿ.ಮೀ. ವರೆಗಿನ “ಊರ್ಧ್ವಮಂಡಲ” ಎಂಬ ವಿರಳ ಹವಾ ಮಂಡಲದಲ್ಲಿ ತೆಳ್ಳಗೆ ಹಬ್ಬಿದೆ. ಇದು ಕೇವಲ ಕೆಲವು ಮಿಲಿಮೀಟರ್‌ಗಳಷ್ಟು ದಪ್ಪಗಿರುತ್ತದೆ. ಬೆಳಕು ಸೂರ್ಯನಿಂದ ಉತ್ಪತ್ತಿಯಾಗಿ ಭೂಮಿಗೆ ಬರುವಾಗ ಅದರೊಂದಿಗೆ ಅನೇಕ ಜೀವಘಾತುಕವಾದ ಅಲ್ಟ್ರಾವಯೊಲೆಟ್ ಕಿರಣಗಳೂ ಉತ್ಪತ್ತಿಯಾಗುತ್ತವೆ. ಆದರೆ ಈ ಘಾತುಕ ಕಿರಣಗಳನ್ನು ಓಜೋನ್ ಪದರು ಭೂಮಿಗೆ ತಲುಪಲು ಬಿಡದೆ ಚದುರಿ ಹೋಗವಂತೆ ಮಾಡುತ್ತದೆ. ಇದು ಬಿಸಿಲಿನ ಸುರಕ್ಷಿತ ಭಾಗ ಮಾತ್ರ ತಲುಪುವಂತೆ ಮಾಡುತ್ತದೆ. ಒಂದು ವೇಳೆ ಆ ಕಿರಣಗಳು ಭೂಮಿಗೆ ಬಂದರೆ ಪ್ರಾಣಿಸಂಕುಲ ಮತ್ತು ಸಸ್ಯಸಂಕುಲಗಳೆರಡಕ್ಕೂ ನಿನಾಶಕಾರಿ. ಮಾನವರಲ್ಲಿ ಅವು ಚರ್ಮ ರೋಗ, ಅಸ್ತಮಾ, ಗಂಟಲುಬೇನೆ ಮುಂತಾದವುಗಳನ್ನು ಬರಲು ಕಾರಣವಾಗುತ್ತದೆ. ಹಾಗಾಗಿ “ಓಜೋನ್” ಪದರ ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೆ ರಕ್ಷಾ ಕವಚವಿದ್ದಂತೆ. ಇದನ್ನು ನಾವು ನೈಸರ್ಗಿಕವಾದ “ಹಸಿರುಮನೆ” ಎಂದು ಕರೆಯಬಹುದು.
ಅಪಾಯದ ಅಂಚಿನಲ್ಲಿ:
ಇತ್ತೀಚಿನ ದಿನಗಳಲ್ಲಿ ಓಜೋನ್ ಬಗ್ಗೆ ಕಳಕಳಿ ಹೆಚ್ಚಿದೆ. ಇದರ ಬಗ್ಗೆ ದೇಶ-ವಿದೇಶಗಳಲ್ಲಿ ಚರ್ಚೆ ನಡೆಯುತ್ತಿದೆ. ಕಾರಣ ನಾವು ಮಾನವರು ದಿನದಿಂದ ದಿನಕ್ಕೆ ಹೊಸ ಹೊಸ ವಾಹನಗಳನ್ನು ಅವಿಷ್ಕರಿಸುತ್ತಿದ್ದೇವೆ. ಇವುಗಳಿಂದಲ್ಲದೇ, ವಿಮಾನ, ಹಡಗು ಮತ್ತು ಫ್ಯಾಕ್ಟರಿಗಳು ವಿಸರ್ಜಿಸುವ ಹೊಗೆಯಲ್ಲಿ ನೈಟ್ರಸ್ ಆಕ್ಸೈಡ್ ಮತ್ತು ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ. ಕಂಪ್ಯೂಟರ್ ಮತ್ತು ಸೇಂಚಕ ಬಾಟಲಿಗಳಿಂದ ಸಿ.ಎಫ್.ಸಿ. ಕ್ಲೋರೋ ಪ್ಲೋರೋ ಕಾರ್ಬನ್ ಬಿಡುಗಡೆಯಾಗುತ್ತದೆ. ಇದು ಓಜೋನ್ ಪದರಕ್ಕೆ ಬಹಳ ಅಪಾಯಕಾರಿ. ಇವು ಓಜೋನ್ ಪದರವನ್ನು ನುಂಗಬಲ್ಲವು. ಹೀಗಾಗಿ ಕೆಲವು ಕಡೆ ವಿಶೇಷವಾಗಿ ಧೃವ ಪ್ರದೇಶದ ಮೇಲ್ಗಡೆ ಓಜೋನ್ ವಲಯ ತೆಳ್ಳಗಾಗಿ ಛಿದ್ರ ಛಿದ್ರವಾಗುತ್ತಿದೆ. ಕಳೆದ ವರ್ಷ ಈ ಓಜೋನ್ ಕಿಂಡಿ ಇಡೀ ಅಮೇರಿಕೆಯಷ್ಟು ದೊಡ್ಡದಾಗಿತ್ತು.
ಇವಲ್ಲದೇ, ಕೋಲ್, ಪೆಟ್ರೋಲಿಯಂಗಳನ್ನು ಉರಿಸುವುದರಿಂದ ಕಾರ್ಬನ್ ಡೈಆಕ್ಸೈಡ್, ಸಲ್ಫರ್ ಡೈ ಆಕ್ಸೈಡ್ ಮುಂತಾದವುಗಳು ಬಿಡುಗಡೆಯಾಗುತ್ತವೆ. ಇವು ಭೂಮಿಯ ಉಷ್ಣತೆಯನ್ನು ಹೆಚ್ಚಿಸುತ್ತವೆ. ಪ್ರತಿ ವರ್ಷ ೦.೦೫ ಡ್ರಿಗ್ರಿ ಸೆಂಟಿಮೀಟರ್‌ನಷ್ಟು ಭೂಮಿಯ ಉಷ್ಣತೆ ಹೆಚ್ಚುತ್ತಿದೆ. ಹೀಗಾದಲ್ಲಿ ಸಮುದ್ರದ ನೀರು ಬಿಸಿಯಾಗಿ ಹೆಚ್ಚಾಗುವುದಲ್ಲದೆ ಪೋಲಾರ್ ಐಸ್ ಕ್ಯಾಪ್ ಕರಗುತ್ತದೆ. ಇದರಿಂದ ಸಮುದ್ರದ ನೀರು ಹೆಚ್ಚಾಗುತ್ತದೆ. ಅದರಿಂದ ನಾವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. [ಫ್ಲಡ್ಸ್ ಮತ್ತು ಫಮೈನ್]
ತಪ್ಪಿಸುವ ಬಗೆ:
ಏರ್‌ಕಂಡೀಶನರ್, ಕಂಪ್ಯೂಟರ್, ರಿಫ್ರಿಜಿರೇಟರ್ ಮತ್ತು ಸೇರಿಟ್ ಬಾಟಲಿಗಳಲ್ಲಿ ಸಿ.ಎಫ್.ಸಿ. ಬದಲಾಗಿ ಬೇರೆ ರಾಸಾಯನ ಬಳಸಬೇಕು. ಓಜೋನ್ ತುಂಬ ಎತ್ತರದಲ್ಲಿ ಇದ್ದರೇ ಮಾತ್ರ ನಮಗೆ ಕ್ಷೇಮ. ನಮ್ಮ ಉಸಿರಾಟದಲ್ಲಿಯೂ ಕಡಿಮೆ ಇರಬೇಕು. ಈಗೀಗ ವಾಹನ ಮಾಲಿನ್ಯ ಹೆಚ್ಚಾಗಿರುವುದರಿಂದ ಮಾಮೂಲು ಆಮ್ಲಜನಕವೂ ಓಜೋನ್ ಆಗಿ ರಸ್ತೆ ಮಟ್ಟದಲ್ಲೆ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತಿದೆ. ಆದ್ದರಿಂದ ಅಸ್ತಮಾ, ಗಂಟಲು ಮತ್ತು ಚರ್ಮದ ಕ್ಯಾನ್ಸರ್‌ಗಳಿಗೆ ತುತ್ತಾಗಬೇಕಾಗುತ್ತದೆ. ಇದರ ಬಗ್ಗೆ ಎಚ್ಚರ ವಹಿಸಬೇಕಾದುದು ಮತ್ತು ಎಚ್ಚೆತ್ತು ಕೊಳ್ಳಬೇಕಾದುದು ಅತೀ ಅವಶ್ಯ.
*****