ಗಾರುಡಿಗ ತಾರಾನಾಥ

ಗಾರುಡಿಗ ತಾರಾನಾಥ

20151003_121525ಅರವತ್ತರ ದಶಕದಲ್ಲಿ, ತಾರಾನಾಥ ನನ್ನನ್ನು ನನಗೆ ಸಾಧ್ಯವಾದ ಎತ್ತರಕ್ಕೆ ಏರುವಂತೆ ಪ್ರಚೋಸಿದ ಗೆಳೆಯ.  ಗೆಳೆಯ ಮಾತ್ರವಲ್ಲ ಗುರು, ತಿದ್ದಿತೀಡಿ ಹಂಗಿಸಿ ವಿಸ್ತರಿಸಿ ಹೊಗಳಿ ಬೆಳೆಸಿದವನು ರಾಜೀವ. ‘ಪ್ರಶ್ನೆ’ ಸಂಕಲನದ ಒಂದೊಂದು ಕಥೆಯೂ ರೂಪುಗೊಂಡಿದ್ದು ರಾಜೀವನ ಅತೃಪ್ರಿಯಲ್ಲಿ ಹೀಗೆ ತನ್ನ ನಿಲುವಿನಲ್ಲೂ ನನಗಿಂತ ಎತ್ತರದ- ಪಡೆದುದಕ್ಕಿಂತ ಹೆಚ್ಚು ಕೊಡಬಲ್ಲ ರಾಜೀವನ ಔದಾರ್ಯದಲ್ಲಿ ನನ್ನ ಸೃಜನಶೀಲತೆ ಬೆಳೆಯಿತು. ರಾಜೀವ ಎಲ್ಲವನ್ನೂ ಸಂಗೀತದ ಕಣ್ಣಿನಿಂದ ನೋಡುತ್ತಾನೆ; ಸಾಹಿತ್ಯದ ಬಗಗಿನ ರಾಜೀವನ ಒಳನೋಟಗಳು ಅವನನ್ನು ನಾನು ಕಂಡ ಅತ್ಯುತ್ತಮ ಮನಸ್ಸುಗಳ ಸಾಲಿನಲ್ಲಿ ನಿಲ್ಲಿಸುತ್ತದೆ. -ಯು.ಆರ್. ಅನಂತಮೂರ್ತಿ

ತಮ್ಮ ಗೆಳೆಯನ ಕುರಿತು ಆನಂತಮೂರ್ತಿ ಅವರ ಮೇಲಿನ ಮಾತುಗಳು ರಾಜೀವ ತಾರಾನಾಥರ ವ್ಯಕ್ತಿತ್ವದ ಸಂಕೀರ್ಣತೆಯನ್ನು ಹಾಗೂ ಪ್ರತಿಭಾವಿಲಾಸವನ್ನು ನಿಕ್ಕಿಗೊಳಿಸುವಂತಿವೆ. ದೇಶದ ಅಗ್ರಪಂಕ್ತಿಯ ಸಂಗೀತಗಾರರಲ್ಲಿ ಒಬ್ಬರಾದ ತಾರಾನಾಥರು ಅಷ್ಟೇ ಎತ್ತರದ ಸಾಹಿತ್ಯ ಸಹೃದಯಿಯೂ ಹೌದು. ಅವರ ಆಸಕ್ತಿ ಸಾಹಿತ್ಯ ಕ್ಷೇತ್ರದಲ್ಲೇ ಮುಂದುವರಿದಿದ್ದರೆ ಬಹುದೊಡ್ಡ ವಿಮರ್ಶಕರಾಗುತ್ತಿದ್ದರು ಎನ್ನುವುದು ಅವರ ಅಪ್ತ ಗೆಳೆಯರ ನಂಬಿಕೆ, ಹಾಗೆ ಆಗದೆ ಹೊದುದೇ ಒಳ್ಳೆಯದಾಯಿತು ಎನ್ನಿಸುತ್ತದೆ. ತಾರಾನಾಥರೇನಾದರೂ ವಿಮರ್ಶಕರಾಗಿದ್ದರೆ ಮತ್ತೊಬ್ಬ ಕುರ್ತುಕೋಟಿ ಅಥವಾ ಡಿ.ಆರ್. ನಾಗರಾಜ್ ಆಗಲು ಸಾಧ್ಯವಿತ್ತೇನೋ! ಆದರೆ ಭಾರತೀಯ ಸಂಗೀತ ಓರ್ವ ಮಹಾನ್ ಕಲಾವಿದನನ್ನು ಕಳೆದುಕೊಳ್ಳುತ್ತಿತ್ತು. ಅವರಿಂದು ವಿಶ್ವಮಾನ್ಯತೆ ಹೊಂದಿದ ಸಂಗೀತಗಾರ. ಸರೋದ್ ಎಂದಕೂಡಲೇ ನೆನಪಾಗುವ ಕೆಲವೇ ಕೆಲವು ಹೆಸರುಗಳಲ್ಲಿ ತಾರಾನಾಥರದೂ ಒಂದು.

ಭಾರತೀಯ ಶಾಸ್ತ್ರೀಯ ಪರಂಪರೆಯ ವಾವ್ಯಗಳಲ್ಲೊಂದಾದ ಸರೋದನ್ನು ಅದರ ಸಾಧ್ಯತೆಗಳ ಪರಿಪೂರ್ಣತೆಯತ್ತ ಕೊಂಡೊಯ್ದ ಅಗ್ಗಳಿಕೆ ತಾರಾನಾಥರದು. ಗುರು ಉಸ್ತಾದ್ ಆಲಿ ಅಕ್ಬರ್ ಖಾನ್ ದೆಸೆಯಿಂದ ಕಲಿತ ವಿದ್ಯೆ, ಅದ್ಭುತ ಕಲಾಶಕ್ತಿ ಹಾಗೂ ಭಾವುಕತೆಯನ್ನು ಸರೋದ್‍ಗೆ ತುಂಬಿದ ಮಾಂತ್ರಿಕರು ತಾರಾನಾಥ. ನಾಲ್ಕಾನೇ ವಯಸ್ಸಿನಲ್ಲಿಯೇ ಬಾಲಕ ರಾಜೀವನಿಗೆ ಸಂಗೀತದ ಅಧಿಕೃತ ಪಾಠ ಆರಂಭವಾಯಿತು. ಅವರ ತಂದೆ ತಾರಾನಾಥ್ ತಬಲಾ ನುಡಿಸುವುದನ್ನು ಹೇಳಿಕೊಟ್ಟರು. ಆರನೇ ವಯಸ್ಸಿಗೆ ಆರಂಭವಾದ ಗಾಯನದ ಅಭ್ಯಾಸ ಹದಿನೈದರವರೆಗೂ ಮುಂದುವರೆಯಿತು. ೨೧ನೇ ವಯಸ್ಸಿನಲ್ಲಿ ಅಕ್ಬರ್ ಖಾನ್‍ರ ಶಿಷ್ಯತ್ವ ದೊರೆಯಿತು. ಆಗ ಆರಂಭವಾದ ಸರೋದ್ ನಂಟು, ಗುರುಮುಖೇನ ಇಂದಿಗೂ ಮುಂದುವರೆದಿದೆ. ಪಂಡಿತ್ ರವಿಶಂಕರ್ ಹಾಗೂ ಅನ್ನಪುರ್ಣಾದೇವಿ ಅವರ ಸಂಗೀತವನ್ನು ಸಮೃದ್ದಗೊಳಿಸಿದ ಇನ್ನಿಬ್ಬರು ಹಿರಿಯರು.

ತಾರಾನಾಥ್‍ರ ಇಂದಿನ ಎತ್ತರಕ್ಕೆ ಗುರು ಅಲಿ ಅಕ್ಬರ್ ಖಾನ್‍ರ ಕೊಡುಗೆ ದೊಡ್ಡದಿದೆ. ಗುರುಗಳ ನೆನಪು ತಾರಾನಾಥರನ್ನು ಆದ್ರ್‍ಅಗೊಳಿಸುತ್ತದೆ. ‘ಅವರು ನನಗೆ ತಾಯಿದ್ದಂತೆ. ಅಪ್ಪ ಎಂದು ಕರೆದರೂ, ಅವರು ತಾಯಿಯೇ. ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ಕೇವಲ ಕೊಡುವುದಷ್ಟೇ ಗೊತ್ತು. ತಂದೆ ಹಾಗಲ್ಲ ಆತ ಲೆಕ್ಕ ಕೇಳುತ್ತಾನೆ. ಅಮ್ಮ ಕೆಲವೊಮ್ಮೆ ಕೋಪಿಸಿಕೊಳ್ಳಬಹುದು. ಆದರೆ ಎಂದಿಗೂ ಲೆಕ್ಕ ಕೇಳುವುದಿಲ್ಲ. ೧೯೫೫ ರಿಂದ ಗುರುಗಳು ಅಮ್ಮನಂತೆ ಕೊಡುತ್ತಲೇ ಇದ್ದಾರೆ. ಒಬ್ಬ ಗುರುಗಳಿಂದ ಇನ್ನೇನನ್ನು ತಾನೆ ನಿರೀಕ್ಷಿಸಲು ಸಾಧ್ಯ?’ ಎಂದು ಭಾವುಕರಾಗುವ ತಾರಾನಾಥ್ ಸ್ವತಃ ಗುರುವಾಗಿ ದೊಡ್ಡ ಶಿಷ್ಯವೃಂದ ಹೊಂದಿದ್ದಾರೆ.

ತಾರಾನಾಥ್ ಅವರದ್ದು ಪ್ರಯೋಗಶೀಲ ಮನಸ್ಸು ಭಾರತೀಯ ಸಂಗೀತದ ರಾಯಭಾರಿಯಾಗಿ ಅವರು ಸರೋದ್ ಜೊತೆಯಲ್ಲಿ ವಿಶ್ವದ ವಿವಿಧ ಭಾಗಗಳನ್ನು ಸುತ್ತಿದ್ದಾರೆ. ಕ್ಯಾಲಿಫೋರ್ನಿಯಾ ಪ್ರದರ್ಶನ ಕಲೆಗಳ ವಿದ್ಯಾಸಂಸ್ಥೆಯಲ್ಲಿ ಭಾರತೀಯ ಸಂಗೀತದ ಬಗ್ಗೆ ಪಾಠ ಹೇಳಿದ್ದಾರೆ. ಸಿನಿಮಾ ಸಂಗೀತದಲ್ಲೂ ಅವರು ತೊಡಗಿಸಿಕೊಂಡಿದ್ದುಂಟು. ಕನ್ನಡದ ಹೊಸ ಅಲೆಯ ಚಿತ್ರಗಳಾದ ‘ಸಂಸ್ಕಾರ’ ಹಾಗೂ ‘ಪಲ್ಲವಿ’ಗೆ ತಾರಾನಾಥದ್ದೇ ಸಂಗೀತ.

ನನ್ನ ನಂತಂತರವೂ ಸರೋದ್ ಮಾಂತ್ರಿಕತೆ ಉಳಿಯಬೇಕು ಎನ್ನುವುದು ಅವರ ಹೆಬ್ಬಯಕೆ. ಕೊನೆಯವರೆಗೂ ತಮ್ಮ ಸಂಗೀತದಲ್ಲಿ ಮಾಂತ್ರಿಕತೆ-ಜೀವಂತಿಕೆ ಉಳಿಸಿಕೊಳ್ಳಬೇಕು ಎನ್ನುವುದು ಅವರ ಹಂಬಲ.

‘ಚೌಡಯ್ಯ ಪ್ರಶಸ್ತಿ’ ಸೇರಿದಂತೆ ಅನೇಕ ಉನ್ನತ ಗೌರವಗಳು ಸರೊದ್ ಮಾಂತ್ರಿಕನಿಗೆ ಸಂದಿವೆ. ಯಮೆನ್‍ನಲ್ಲಿ ತಾರಾನಾಥನ್ನು ಕುರಿತೇ ಕಿರುತೆರೆಗಾಗಿ ಒಂದು ಸಾಕ್ಷ್ಯಚಿತ್ರ ನಿರ್ಮಾಣಗೊಂಡಿದೆ. ತಾರಾನಾಥರೀಗ ಗಾಯನ ಸಮಾಜದ ೩೯ನೇ ಸಂಗೀತ ಸಮ್ಮೇಳನದ ಅಧ್ಯಕ್ಷರು. ಹಿರಿಕಿರಿಯರ, ಗುರುತಿಷ್ಯರ ಸರಿಗಮ – ಸಮಾಗಮಕ್ಕೆ ವೇದಿಕೆಯಾಗುವ ಈ ಸಮ್ಮೇಳನ ತಾರಾನಾಥರ ಅಧ್ಯಕ್ಷತೆಯಿಂದಾಗಿ ಹೊಸ ಕಳೆ ಪಡೆದುಕೊಂಡಿದೆ. ನಗರದಲ್ಲಿ ಸಂಗೀತದ ಸೋನೆ ಶುರುವಾಗುತ್ತಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಶೆ
Next post ಬಜಾರ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…